ಪುಟ:ವೀರಭದ್ರ ವಿಜಯಂ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

185 ದ್ವಾದಶಾಶ್ವಾಸಂ ಮುಳಿಯಲಗೇಮ್ಪಜಾತ ತಲೆಯಿಂ ಸಲೆ ಪಿಂಗದ ಗಂಗೆಗಾಕ್ಷಣಂ ಕಳವಳವೆಯೇ ಪುಟ್ಟಿ ತದನೀಕ್ಷಿಸುತಾಗಳುಮಾಂತ್ರಿಗೊಳ್ಳಿನಿ೦ || ತುಳಿಲನೊಡರ್ಚದೊಲ್ಲು ಮೊಗದೊಳೊಗವಿಕ್ಕುತೆ ಸಂತವಿಟ್ಟು ಬಾಂ ಬೆಳೆಗೊಲವಿತ್ತ ಜಾಣ ಸಲಪೀಜಗಮಂ ಗುರುವಿಶ್ವವಲ್ಲಭಾ || ೧೪೦ ಗಿರಿಯ ಮಗಳ ಮುಡಿಯೊಳದುರ್ದ ಸುರಕುಜಪ್ರಸೂನದೊ ರೆದ ರಜಮನಿರದೆ ಸವಿದು ತಣಿದು ತನ್ನ ಲೀಲೆಯಿಂ ! ಮೊರೆವ ಮಧುಪರವದ ಸವಿಗೆ ಕಿವಿಯನಿತ್ತು ಧಾತಿ ಯಂ ಪೊರೆವ ಗರಳಗಳನ ಚರಣಕಮಲಮಾಗಭೀಷ್ಟಮಂ || ಇದು ನಮಸ್ತ ಬ್ರಹ್ಮಾಂಡಸಾರಭೌಮ ಸಕಲಸುಮ ಕುಟಮಣಿವಿರಾಜಿತ ಪಾದಪದ್ಮ ಶ್ರೀಕಾಶೀಪುರಾಧೀಶ್ವರ ವಿಶ್ವನಾಧಪದಪಂಕಜಮಕರಂದ ಮಧುಕರಾಯಮಾಣ ಶ್ರೀಕಂರವಂಶಾರ್ಣದಪೂರ್ಣಚಂದ್ರನನಿಪ ಸತ್ಕವೀಶ್ವರ ವೀರಭದ್ರನಾಲಂ ವಿರಚಿತಮಪ್ಪ ಶ್ರೀ ವೀರಭದ್ರವಿಜಯ ಮಹಾಪ್ರಬಂಧದೊಳ್ ವಿಷ್ಣು ಪರಾಭವದಕ್ಷಮಸ್ತಕಚ್ಚೆದನಸರದೇವತಾ ವಿಜ್ಞಾಪನಾಕರ್ಣನತದ್ಭಂಧವಿಮೋಚನ ಕಾಶೀಪುರಪ್ರವೇಶವಿಶ್ವೇಶ್ವರಪದ ಸಂದರ್ಶನಕರದೇವಾಘನ; ಪ್ರಾಣದಾನವರಪ್ರದಾನ ವರ್ಣನಂ ದ್ವಾದಶಾಶ್ವಾಸಂ ಸಂಪೂರ್ಣ