ಪುಟ:ವೀರಭದ್ರ ವಿಜಯಂ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಿ ಠಿ ಕೆ - -- ವೀರಭದ್ರ ವಿಜಯವೆಂಬೀ ಚಂಪೂಕಾವ್ಯವನ್ನು ರಚಿಸಿದವನು ವೀರಭದ್ರ ನೃಪಾಲನೆಂಬ ಕವಿಯು, ಈತನು ಈಶ್ವರನ ದ್ವಾದಶಲೀಲಾಸ್ವರೂಪನಾದ ವೀರ ಭದ್ರನ ಮಹತ್ಪ್ರದರ್ಶನಕ್ಕಾಗಿ ಪ್ರೌಢವಾದೀಕಾವ್ಯವನ್ನು ಬರೆದಿರುವುದರಿಂ ದಲೂ, ಈಗ್ರಂಥದಲ್ಲಿ ಶಿವನಿಗೇ ಸಕಲದೇವೋತ್ಕರ್ಷವನ್ನು ವೇದೋಕ್ತಿಗಳಿಂದ ಸ್ಥಾಪಿಸಿ ಬಣ್ಣಿಸಿರುವುದರಿಂದಲೂ, ಹಂಪೆಯ ಹರೀಶ್ಚರ, ಹಲಾಯುಧ, ಮಲ್ಲಣ ಮುಂತಾದ ವೀರಶೈವಕವಿಗಳನ್ನು ಗ್ರಂಥಾರಂಭದಲ್ಲಿ ಬಲಗೊಂಡಿರುವುದರಿಂ ದಲೂ ಮತ್ತು ಆತನ ಪೂರೈವಂಶದ ಪರಿಗಣನೆಯಿಂದಲೂ ಈ ಕವಿಯು ವೀರಶೈವ ಮತೀಯನೆಂಬುದರಲ್ಲಿ ಸಂಶಯವೇನೂ ಬರಲಾರದು ಅಲ್ಲದೆ, ಈಶ್ವರನನ್ನು ವರ್ಣಿಸುವ ಎಡೆಗಳಲ್ಲೆಲ್ಲ ರತ್ನದಲ್ಲಿ ಪ್ರಕಾಶ, ಚಂದ್ರನಲ್ಲಿ ಬೆಳದಿಂಗಳು, ಸೂರನಲ್ಲ ತೇಜಸ್ಸು ಮತ್ತು ಹೂವಿನಲ್ಲಿ ಮಕರಂದದಂತೆ ಶಿವನಲ್ಲಿ ಶಕ್ತಿ (ಪಾರತಿ)ಯು ಬರೆದಿರುವಳೆಂದು ಶಿವಶಕ್ತಿಯರಿಗೆ ಅವಿನಾಭಾವಸಂಬಂಧವನ್ನು ತೋರಿಸಿ ತಾನು ಶಕ್ತಿವಿಶಿಷ್ಟಾದ್ರೆ ತಮತಾನುಯಾಯಿಯೆಂಬುದನ್ನು ವ್ಯಕ್ತಪಡಿಸಿಕೊಂಡಿರುತ್ತಾನೆ ಈತನು ತನ್ನನ್ನು ನೃಪೋತ್ತಮನೆಂದು ವಿಶ್ಲೇಷಿಸಿಕೊಂಡು ತನ್ನ ವಂಶಪರಂಪರೆ ಯನ್ನು ಈ ಗ್ರಂಥದ ಪ್ರಥಮಾಶ್ವಾಸದ 35,36,37, ಮತ್ತು 38ನೆಯ ಪದ್ಯಗಳಲ್ಲಿ 'ಹೀಗೆ ಹೇಳಿಕೊಂಡಿದ್ದಾನೆ. - ಶ್ರೀಕಂಠವಂಶವಾರಿಧಿರಾಕಾಬ್ಬನಾದ ಚಿಕ್ಕ ವಿರೂಪಾಕ್ಷ ; ಅವನ ಮಗ ಕಾಮನೃಪ ; ಇವನ ಹೆಂಡತಿ ವೀರಾಂಬಾ ; ಈಕೆಯ ಪುಣಿದರಕಮಲಾಕರದ ಗೆದ ರಾಜಹಂಸನೂ, ಪುಣ್ಯಶ್ಲೋಕನ, ಶಿವಭಕ್ತಿಯುಕ್ತನೂ ಆದವನು ವಿರೂಪಾಕ್ಷಪ , ಜಗದೀಶರನಾದ ಆ ವಿರೂಪಾಕ್ಷ (ಶಿವ)ನಿಂದ ಆ ವೀರ ಭದ್ರನು ಹುಟ್ಟಿ ವಿಬುಧ (ದೇವತೆಗಳಿಂದ) ನುತನಾದಂತೆ, ಈ ಪಿರೂಪಾಕ್ಷಪ ನಿಂದ ವೀರಭದ್ರನಾಮಕನಾದ ತಾನು ಹುಟ್ಟಿ, ವಿಬುಧ ( ವಿದ್ವಾಂಸರಿಂದ) ನುತ ನಾದನೆಂದು ಚಮತ್ಕಾರವಾಗಿ ವರ್ಣಿಸಿಕೊಂಡಿರುತ್ತಾನ. ನೃಪೋತ್ತಮನೆಂದು ಹೇಳಿಕೊಂಡಿದ್ದರೂ, ಈತನು ಆಳುತ್ತಿದ್ದ ದೇಶದ ವಿಷಯದಲ್ಲಾಗಲಿ, ಕಾಲದ ವಿಷಯದಲ್ಲಾಗಲಿ ಯಾವ ಅಂಶವೂ ಈ ಗ್ರಂಥದಿಂದ 111