ಪುಟ:ವೀರಭದ್ರ ವಿಜಯಂ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

1V ತಿಳಿಯಬರುವುದಿಲ್ಲ. ಈತನ ತಂದೆಯಾದ ವಿರೂಪಾಕ್ಷನ್ನಪನು ತಾನು ಬರೆದಿ ರುವ ' ತ್ರಿಭುವನತಿಲಕ ” ವೆಂಬ ಗ್ರಂಧವನ್ನು ಶಕ. ೧೪೪೧ನೆಯ ಪ್ರಮಾಧಿಯಲ್ಲಿ ಅಂದರೆ ಕ್ರಿ ಶ 1519 ರಲ್ಲಿ ರಚಿಸಿದಂತ ಹೇಳಿಕೊಂಡಿರುತ್ತಾನಾದುದರಿಂದ, ಅವನ ಮಗನಾದ ಈ ಗ್ರಂಥಕರ್ತನು ಸುಮಾರು ಕ್ರಿ ಶ 1530 ರಲ್ಲಿ ಇದ್ದಿರ ಬಹುದೆಂದು ಕವಿಚರಿತ್ರಕಾರರು ಬರೆದಿರುತ್ತಾರೆ ( ಕವಿಚರಿತೆ, Vol II, Page 217) ಈತನು ಈ ಗ್ರಂಧವಲ್ಲದೆ ಪಾರತೀವಲ್ಲಭಶತಕ, ಉಮಾಮಹೇಶ್ ರಶತಕ ಪ್ರಾಣನಾಧಶತಕ, ಶ್ರೀಕಂರಸೋಮೇಶ್ವರಶತಕ, ಕಂದಶಕ ಎಂಬ ಐದು ಶತಕಗಳನ್ನು ಬರೆದಿರುತ್ತಾನೆಂದು ಕಂದಶತಕದ ಕೊನೆಯಲ್ಲಿರುವ, ಶುಭಮಿಾವ ಪಾರತೀವ ಲ್ಲಭಶತಕಮನಿಂದುಮಾಮಹೇಶ ರಶತಕದು | ನಭಯಕವಿವೀರಭದ್ರ ಪ್ರಭು ಪಟ್ಟ೦ ಪ್ರಾಣನಾಧಶತಕವನೊಲವಿ || ವರಸೋಮೇಶ್ವರಶತಕಮ ಸಿರದಂಬಿಕೆಯರಸಯೆಂಬ ಕಂದಶತಕಮಂ | ಸ್ಮರರೂಪವಿರೂಪಾಕ್ಷನು ದರಸಂಭವನೆನಿಪ ವೀರಭದ್ರಂ ಪೇಳ್ಳಂ | ಎಂಬ ಪದ್ಯಗಳಿಂದ ತಿಳಿಯಬರುತ್ತದೆ ಈತನು ತನ್ನನ್ನು ' ಉಭಯಕವಿ * ಬುಧನು - “ ಸತ್ಕವೀಶರ ' ನೆಂದು ವಿಶ್ಲೇಷಿಸಿಕೊಂಡಿರುವುದರಿಂದ, ಸಂಸ್ಕೃತಿ ಕರ್ಣಾಟಕಭಾಷೆಗಳೆರಡರಲ್ಲಿಯೂ ಕವಿತಾಶಕ್ತಿಯನ್ನು ಹೊಂದಿ, ತನ್ನ ಕಾಲ ದಲ್ಲಿದ್ದ ವಿದಾ ೦ಸರ ಮನ್ನಣೆಗೆ ಪಾತ್ರನಾಗಿದ್ದನೆಂದು ಹೇಳಬಹುದು. ಆದರೂ, ಇವನಿಂದೀಚೆಗೆ ಬಂದ ಕವಿಗಳಾರೂ ಈತನ ಗ್ರಂಧಗಳ ಭಾಗಗಳನ್ನು ಎಲ್ಲಿ ಯಾದರೂ ಉದಾಹರಿಸಿರುವುದಾಗಲಿ, ಹೊಗಳಿರುವುದಾಗಲಿ ಕಂಡುಬಾರದೇ ಇರುವುದರಿಂದ ಈ ಕವಿಯು ಕ್ರಿ ಶ ೧೬ನೆಯ ಶತಮಾನದಲ್ಲಿದ್ದ ಗುಬ್ಬಿಯ ಮಲ್ಲ ಾರ, ವಿರಕ್ತತೋಂಟದಾರರೇ ಮುಂತಾದ ಕವಿಗಳಷ್ಟು ಸುಪ್ರಸಿದ್ಧನಾಗಲಿಲ್ಲ ವೆಂದು ತೋರುತ್ತದೆ ಗ್ರಂಥಕಾರನು ತನ್ನ ವೀರಭದ್ರವಿಜಯವೆಂಬೀ ಗ್ರಂಧವು ಕಾವ್ಯ, ಲಕ್ಷಣ, ಅಲಂಕಾರ, ನವರಸ, ರೀತಿಭಾವಗಳಿಂದ ಭರಿತವಾಗಿರುವುದಂದೂ, (( ಕೂರ್ತ