ಪುಟ:ವೀರಭದ್ರ ವಿಜಯಂ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮನದನ್ನಳ ಕೂಟದ ಸೌಖ್ಯ ) ದಂತೆ ಇದರಲ್ಲಿನ ಕವಿತ್ವರಸವು ಓದುವವರಿಗೆ ಸೊಗಸೀವುದೆಂದೂ, ಸಕ್ಕದದೇ, ' ದೇಶೀಯದ ಬೀಡು ! ಗಾಡಿ ನೆಲಸಿದ ನಾಡು ” ಎಂದು ಮುಂತಾಗಿಯೂ, ತನ್ನ ಕವಿತಾಚಾತುರಿಯನ್ನು ಹೊಗಳಿ ಕೊಂಡಿರುತ್ತಾನೆ ಹೀಗೆ ತಮ್ಮ ಗ್ರಂಥಗಳನ್ನು ತಾವೇ ಹೊಗಳಿಕೊಳ್ಳುವುದು ಕನ್ನಡಕಬ್ಬಿಗರ ಬಾಳಿನ ಚಾಳಿಯಾಗಿ ಬಂದಿರುವುದರಿಂದ, ಇಂತಹ ಹೊಗಳಿಕೆಗೇನೇ ತಲೆದೂಗದೆ, ಅನೇಕಸಂದರ್ಭಗಳಲ್ಲಿ ಒರೆಹಚ್ಚಿ ನೋಡಿದ ಹೊರತು ಕಬ್ಬಿಗನದು ಬರಿಯ ಬಡಾಯಿಯ ಕಟ್ಟುಬಣ್ಣವೋ, ಬಿ ಯ ಹುಟ್ಟುಬಣ್ಣವೋ ಎಂಬುದು ಬಯಲಾ ಗುವುದಿಲ್ಲ ಗ್ರಂಧಾರಂಭದಲ್ಲಿ ಕವಿಯು ಈಶ್ವರನನ್ನೂ ಪಾರತಿಯನ್ನೂ ಸ್ತುತಿಸಿ, ಗುರು ವಂದನ ಮಾಡಿ, ವೀರೇಶ, ನಂದೀಶ, ಶೃಂಗೀಶ, ವಿಘ್ನಶ, ಷಣ್ಮುಖರನ್ನು ಕ್ರಮವಾಗಿ ಬಲಗೊಂಡು, ಶಿವಭಕ್ತರನ್ನು ವಂದಿಸಿದನಂತರ, ಶಾರದೆಯ ಪ್ರಸನ್ನತೆಯನ್ನು ಬಯಸಿ, ಬಾಣ, ಹರೀಶ ರ, ಮಯರರ ವಾಕ್ಯಧಿಮೆಯು ತನ್ನ ಗ್ರಂಧದಲ್ಲಿ ನೆಲೆಗೊಂಡಿರುವಂತೆ ಪ್ರಾರ್ಥಿಸಿ, ಕಾಳಿದಾಸ, ಹಲಾಯುಧ, ಭೋಜ, ಮಲ್ಲಣ, ಕೇಶಿರಾಜ, ಉದ್ಭಟ-ಇವರಿಗೆ ನಮಿಸಿ, - ಪೇದೆ - ನೊಲವಿಂ ಬುಧಸೇವ್ಯಮೆನಿಪ್ಪಕಾವಮಂ ” ಎಂದು ಹೇಳಿಕೊಂಡಿರುತ್ತಾನೆ ಬಳಿಕ ದುರ್ಜನ ರನ್ನು ವ್ಯಾಜಸ್ತುತಿಯಿಂದ ನಿರಾಕರಿಸಿ, ಸತ್ಕವಿಗಳ ಕಾವ್ಯಕ್ಕೂ ದುಷ್ಕವಿಗಳ ಕಾವ್ಯಕ್ಕೂ ಇರುವ ವ್ಯತ್ಯಾಸವನ್ನು ತೋರಿಸಿ, ವಿದ್ವಾಂಸರು ಈ ಗ್ರಂಥದಲ್ಲಿ ರಬಹುದಾದ ದೋಷಗಳನ್ನು ತಿದ್ದಿ ಸರಿಪಡಿಸುವಂತೆ ಪ್ರಾರ್ಥಿಸಿಕೊಂಡು, ಜಡ ವಾದ ವೀಣಿಯು ನಾನಾಗೀತಚತುರನಾದ ವೈಣಿಕನ ಕೈಯಿಂದ ನುಡಿಯು ವಂತೆ ತ್ರಿಲೋಕವನ್ನೂ ಚೆಂಡಿನಂತೆ ಆಡಿಸುವ ವಿಶ್ವನಾಧನು ನುಡಿಸಿದಂತೆ ಈ ಗ್ರಂಥವನ್ನು ಬರೆಯುವೆನೆಂದೂ ತನ್ನ ಶಕ್ತಿಯಿಂದಲ್ಲವೆಂದೂ ಹೇಳಿ, ಸ್ವಾಹಂ ಕಾರ ಖಂಡನೆಯನ್ನು ಮಾಡಿಕೊಂಡಿರುತ್ತಾನೆ. ಬಳಿಕ ಈ ಗ್ರಂಥದ ಕಧಾನಾಯ ಕನಾದ ವೀರಭದ್ರನ ಮಹತ್ವವನ್ನೂ, ತನ್ನ ಕವಿತ್ವದ ಪ್ರೌಢಿಮೆಯನ್ನೂ ವಿವರಿಸಿ, ತನ್ನ ವಂಶಾವಳಿಯನ್ನು ಹೇಳಿಕೊಂಡು, ಕಧಾವರ್ಣನೆಯನ್ನು ಪ್ರಾರಂ ಭಿಸಿರುತ್ತಾನೆ. ಈ ಗ್ರಂಥದಲ್ಲಿ ಕವಿಗೆ ವರ್ಣನಾವಿಷಯವಾದುದು ಶಿವಪುರಾಣದ ವಾಯ ವೀಯ ಸಂಹಿತೆ, ಲಿಂಗಪುರಾಣಗಳೇ ಮೊದಲಾದ ಪರಮಾರ್ಧವನ್ನುಪದೇಶಿಸುವ ಪುರಾಣಗಳಲ್ಲಿಯೂ, ಭಾರತ, ಭಾಗವತ, ಮುಂತಾದ ನೀತಿಬೋಧಕಗಳಾದ ಇತಿ ಹಾಸಗಳಲ್ಲಿಯೂ ವರ್ಣಿತವಾಗಿರುವ ದಕ್ಷಯಜ್ಞಧ್ವಂಸದ ಕಥೆಯು.