ಪುಟ:ವೀರಭದ್ರ ವಿಜಯಂ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಈ ಕಥೆಯ ಸಾರಾಂಶವೇನೆಂದರೆ -

  • ನವಬ್ರಹ್ಮರಲ್ಲೊಬ್ಬನಾದ ದಕ್ಷಬ್ರಹ್ಮನು ಒಂದು ದಿವಸ ತನ್ನ ಮಗಳಾದ ದಾಕ್ಷಾಯಣಿಯನ್ನೂ, ಅಳಿಯನಾದ ಶಂಕರನನ್ನೂ ನೋಡಿಕೊಂಡು ಬರಬೇಕೆಂಬ ಕುತೂಹಲದಿಂದ ಶಿವಸಭೆಗೆ ಹೋದನು ಕೋಟ್ಯನುಕೋಟಿ ಸುರಾಸುರರು, ವಿದ್ಯಾಧರರು, ಋಷೀಶರರೇ ಮೊದಲಾದವರಿಂದ ಆಸಭೆಯು ಕಿಕ್ಕಿರಿದು ತುಂಬಿರಲು, ಎಲ್ಲರಂತೆ ಈಶ್ವರನಿಗೆ ದೂರದಲ್ಲೇ ಪೊಡಮಡದೆ ತನ್ನಳಿಯನೆಂಬ ಹಂಕಾರದಿಂದ ಎಲ್ಲರನ್ನೂ ತಳ್ಳಿಕೊಂಡು ಬರುತ್ತಿದ್ದ ದಕ್ಷನನ್ನು ನಂದೀಶ್ವರನು ತನ್ನ ವೇತ್ರದಂಡದಿಂದ ತಡೆದು ನಿಲ್ಲಿಸಿದನು ಇದನ್ನು ಕಂಡ ನಗುತ್ತಿದ್ದ ಶಂಕರನನ್ನು ನೋಡಿ, ದೇಹಾಭಿಮಾನದಿಂದ ಅಂಧನಾದ ದಕ್ಷನು, ಶಂಕರನಿಗ ರಗದೆ, ತುಂಬಿದ ಸಭೆಯಲ್ಲಿ ತಾನು ಬಂದರೂ, ಕುಳಿತಿದ್ದ ಸ್ಥಳದಿಂದೆದ್ದು ತನ್ನನ್ನು ಬರಮಾಡಿಕೊಂಡು ಆದರಿಸದೆ ತನಗೆ ಅಪಮಾನಮಾಡಿದುದಕ್ಕಾಗಿ, ಪ್ರತ್ಯ ಪಮಾನವನ್ನು ಮಾಡಿಯೇ ತೀರಬೇಕಂದು ಶಿವವಿದ್ವೇಷದ ಪ ತಿಜ್ಞೆಯನ್ನು ಮಾಡಿ ಆ ಸಭೆಯಿಂದ ಪೊರಮಟ್ಟನು ಅನಂತರ, ಯಜ್ಞವೊಂದನ್ನು ಮಾಡಲುಜ್ಜುಗಿಸಿ, ಜಗದೇಕಾರಾಧ್ಯನೂ, ದೇವತಾಸಾರಭೌಮನೂ ಆದ ಶಂಕರನನ್ನುಳಿದು, ಇತರ ಸಮಸ್ತ ದೇವತೆಗಳನ್ನೂ ಬ್ರಹ್ಮರ್ಷಿ, ದೇವರ್ಷಿ, ಪಿತೃಗಳೇ ಮೊದಲಾದ ವರನ್ನೂ ಕರೆಯಿಸಿ, ಶಂಕರನು ಸ್ಮಶಾನವಾಸಿಯ, ತಿರುಕನೂ, ಅಬ್ದ ಮಾಲಾ ಚಿತಾಭಸ್ಮಧಾರಣೆಯಿಂದ ಕೇವಲ ಅಪವಿತ್ರನೂ, ದೇವತೆಗಳ ಹವಿರ್ಭಾಗದಿಂದ ಬಹಿಷ್ಕೃತನೂ ಆದವನೆಂದು ನಿಂದಿಸುತ್ತ, ಅಗ್ರಹವಿಸ್ಸನ್ನು ಜಗದ್ರಕ್ಷಕನಾದ ವಿಷ್ಣುವಿಗೇ ಕೊಡಬೇಕೆಂದು ನಿಶ್ಚಯಿಸಿ, ಯಜ್ಞವನ್ನು ಆರಂಭಿಸಿದನು.

ಈ ಸಂಗತಿಯನ್ನು ಕೇಳಿದ ದಾಕ್ಷಾಯಣಿಯು ತಂದೆಗೆ ಬುದ್ದಿವಾದವನ್ನು ಹಳಿಬರುವೆನೆಂದು ಪತಿಯ ಅನುಮತಿಯನ್ನು ಒತ್ತಾಯದಿಂದ ಹೊಂದಿ, ದಕ್ಷನ ಯಜ್ಞಶಾಲೆಗೆ ಬಂದು, ಮರ್ಖನಾದ ದಕ್ಷನು ಮಾಡಿದ ಶಿವನಿಂದೆಯನ್ನು ಕೇಳಿದುದಕ್ಕೆ ಪ್ರಾಯಶ್ಚಿತ್ತರೂಪವಾಗಿ ಆ ದಕ್ಷಸಂಬಂಧವಾದ ತನ್ನ ಶರೀರವನ್ನು ಒಡನೆಯೇ ತ್ಯಜಿಸಬೇಕೆಂದು ನಿರ್ಧರಿಸಿ, ದಕ್ಷನು ಪ್ರಾರಂಭಿಸಿದ ಯಜ್ಞವು ಕೆಟ್ಟು ಹೋಗುವಂತೆಯೂ, ಶಿವನಿಂದೆಮಾಡಿದುದರಿಂದ ದಕ್ಷನು ತನ್ನ ವಂಶೀಯರೊಡನೆ ವ್ಯವಸ್ಪತಮನ್ವಂತರದಲ್ಲಿ ಪ್ರಾಚೇತಸದಕ್ಷನೆಂಬ ಹೆಸರಿನಿಂದ ನರಜನ್ಮದಲ್ಲಿ ಹುಟ್ಟಿ, ಶಿವನಿಂದಕವಾದ ಮತ್ತೊಂದು ಯಜ್ಞವನ್ನೆ ನಗುವನೆಂತಲೂ, ಆಗ ಅವನಿಗೆ ಅಪಾಯವು ತಪ್ಪದೆ ಬರುವುದೆಂತಲೂ ಶಾಪವಿತ್ತು, ಯೋಗಾಗ್ನಿಯಿಂದ ತನ್ನ ಶರೀರವನ್ನು ದಹಿಸಿ, ಗಿರಿರಾಜನ ಪತ್ನಿಯಾದ ಮೇನಕೆಯ ಗರ್ಭದಲ್ಲಿ ಗೌರಿ ಯೆಂಬ ಹೆಸರಿನಿಂದವತರಿಸಿದಳು - ಹೀಗೆ ಅವತರಿಸಿದ ಗಿರಿಜೆಯು ಮರಳಿ ಶಂಕರನ ಕೈವಿಡಿದು, ಗುಹಗಣಿ ಶ್ವರರಿಗೆ ಮಾತಿಯಾಗಿ ಸಂತೋಷದಿಂದಿರುವಾಗ ಈ ಹಿಂದೆ ಶಿವನನ್ನು ನಿಂದಿಸಿ