ಪುಟ:ವೀರಭದ್ರ ವಿಜಯಂ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

vii ಈಗ ನರಜನ್ಮದಲ್ಲಿ ಹುಟ್ಟಿರುವ ದುರಾತ್ಮನಾದ ದಕ್ಷನನ್ನೂ ಅವನ ಅನುಯಾಯಿ ಗಳನ್ನೂ ಶಿಕ್ಷಿಸಲು ತಕ್ಕ ಪುತ್ರನೊಬ್ಬನನ್ನು ದಯಪಾಲಿಸಬೇಕು ಎಂದು ಪತಿಯನ್ನು ಬೇಡಿಕೊಂಡಳು ಅದರಂತೆ ಶಂಕರನು ತನ್ನಂಶದಿಂದಲೇ ಲೋಕೈಕ ವೀರನಾದ ವೀರಭದ್ರನನ್ನು ಸೃಜಿಸಿ, ಆತನನ್ನು ಬಹಳ ಜಾಗರೂಕತೆಯಿಂದ ರಕ್ಷಿಸುವಂತೆ ಪಾರತಿಗೆ ಕೊಟ್ಟನು. ಜಗನ್ಮಾತೆಯಾದ ಮಾತೆಯ ರಕ್ಷಣದಿಂದ ನಿಖಿಲಾಂಗಸುಂದರನಾಗಿ, ನವಯೌವನಶಾಲಿಯಾಗಿ ಬಳೆದ ವೀರಭದ್ರನಿಗೆ ಓರಗೆ ಯಾದ ಭದ್ರಕಾಳಿಯೆಂಬ ಕನ್ನಿಕೆಯನ್ನು ಶಂಕರನ ಅಪ್ಪಣಿಯಂತೆ ಪಾರತಿಯು ನಿಕ್ಕಿಸಿ, ಇಬ್ಬರಿಗೂ ಪಾಣಿಗ್ರಹಣವನ್ನು ಮಾಡಿಸಿ, ಪತಿಯೊಡನೆ ಸುಖಸಲ್ಲಾಪದ ಹರ್ಷದಿಂದ್ದಳು ಹೀಗಿರಲು, ನಾರದನೊಂದು ದಿವಸ ಶಿವಸಭೆಗೆ ಬಂದು, ಶಂಕರನಿಗೆ ಭಕ್ತಿಯಿಂದ ಮಣಿದು, ಹಿಮವತ್ಸರತದ ತಪ್ಪಲಿನಲ್ಲಿ ದಕ್ಷನಂಬೊರ ಮೂರ್ಖನು ಅಶ್ವಮೇಧಯಾಗವನ್ನು ಮಾಡಲುಜ್ಜುಗಿಸಿ, ತ್ರಿಲೋಕಾಧಿಪತಿಯಾದ ಈಶ್ವರನಿಗೆ ಕೊಡಬೇಕಾದ ಆಗ ಹವಿಸ್ಸನ್ನು ವಿಷ್ಣುವಿಗೆ ಕೊಡುವೆನೆಂದು ಸಂಕಲ್ಪಿಸಿ, ಸಮಸ್ತ ದೇವತೆಗಳಿಂದಲೂ ಋಷಿಗಳಿಂದಲೂ ಒಡಗೂಡಿ, ಯಜ್ಞವನ್ನಾರಂಭಿಸಿರುವ ನೆಂದು ಬಿನ್ನೆಸಿಕೊಂಡನು ಇದನ್ನು ಕೇಳಿದೊಡನೆಯೇ, ವೀರಭದ್ರನು ಪಿತೃಗಳ ಅಪ್ಪಣಿಯನ್ನು ಪಡೆದು, ಸಕಲಗಣವರರೊಡಗೂಡಿ, ದಕ್ಷನ ಯಾಗಮಂಟಪಕ್ಕೆ ಹೋಗಿ, ಅಲ್ಲಿ ನೆರೆದಿದ್ದ ಸದಸ್ತದೇವತೆಗಳನ್ನೂ ಅವರವರ ಅಪರಾಧಕ್ಕನುಗುಣ ವಾಗಿ ಶಿಕ್ಷಿಸಿ, ದಕ್ಷನ ಶಿರಸ್ಸನ್ನು ಛೇದಿಸಿ, ದುಷ್ಟನಿಗ್ರಹರೂಪವಾದ ಲೋಕಕಲ್ಯಾಣ ವನ್ನೆಸಗಿ, ಜಯಶಾಲಿಯಾಗಿ ಬಂದು, ಗೌರೀಶಂಕರರಿಗೆ ಅಚ್ಚುಮೆಚ್ಚಾದ ಕುವರ ನಾದನು. ಕವಿಯು ತಾನು ಬರೆದೀಗ್ರಂಧವು ' ದೇಶೀಯದ ಬೀಡು ' ' ಸಕ್ಕದದೇ? ಎಂದು ಹೇಳಿಕೊಂಡಿರುವಂತೆ, ಈ ಗ್ರಂಧದ ಕೆಲವು ಪದ್ಯಗಳಲ್ಲಿ (3-40, 6-61, 9-41: 5-65, 5-15 ಮೊದಲಾದುವು) ಅಚ್ಚಗನ್ನಡದ ಶಬ್ದಗಳನ್ನೂ, ಕೆಲವು ಪದ್ಯಗಳಲ್ಲಿ ಬರಿಯ ಸಂಸ್ಕ ತಶಬ್ದಗಳನ್ನೂ (12-132, 12-71 ; 12-12, 7-26: 7-27 : 5-60; 5-9 , 5-10 , 4-6 , 2-44 , 1-30, 1-16 : 1-2: 1-1 : 1-4 , 1-5 , ಮುಂತಾದುವುಗಳಲ್ಲಿ) ಉಪಯೋಗಿಸಿ ದ್ದರೂ, ಒಟ್ಟಿನಲ್ಲಿ ದೇಶೀಯಪದಗಳಿಗಿಂತಲೂ ಸಂಸ್ಕೃತಪದಗಳನ್ನೇ ಹೆಚ್ಚಾ ಗಿಯೂ, ದೇಶೀಯಪದಗಳಲ್ಲಿಯ ಹಳಗನ್ನಡಕ್ಕಿಂತ ಹೊಸಗನ್ನಡದ ಮಾತು ಗಳನ್ನೇ ಹೆಚ್ಚಾಗಿಯ ಉಪಯೋಗಿಸಿರುತ್ತಾನೆ ಅಲಂಕಾರಗಳಲ್ಲಿ ಶ್ರೇಷ, ಉಪಮಾ, ವಿರೋಧಾಭಾಸ ಮುಂತಾದುವುಗಳನ್ನು ಅಲ್ಲಲ್ಲಿ ಉಪಯೋಗಿಸಿದ್ದರೂ, ಕವಿಗೆ ಉತ್ಪಕ್ಷಾಲಂಕಾರದಲ್ಲಿಯೇ ಹೆಚ್ಚು ಪ್ರೀತಿಯಿದ್ದಂತೆ ತೋರುತ್ತದೆ ಛಂದೋವಿಷಯದಲ್ಲಿ ಸಂಸ್ಕೃತದಲ್ಲಿ ಬಳಕೆಯಲ್ಲಿರುವ ಸ್ವಗ್ಗರಾ, ಶಾರ್ದೂಲವಿಕ್ರೀ