ಪುಟ:ವೀರಭದ್ರ ವಿಜಯಂ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

V11 ಡಿತಗಳೆಂಬ ವೃತ್ತಗಳನ್ನು ಮತ್ತು ಕನ್ನಡದಲ್ಲಿ ರೂಢಿಯಲ್ಲಿರುವ ಉತ್ಪಲಮಾಲೆ, ಚಂಪಕಮಾಲೆ, ಮತ್ತೇಭ, ಮಹಾಸ್ರನ್ಸರಗಳೆಂಬ ವೃತ್ತಗಳನ್ನು ಉಪಯೋಗಿಸಿ ದ್ದರೂ, ಕಂದಪದ್ಯಗಳನ್ನೇ ಹೆಚ್ಚಾಗಿ ಬರೆದಿರುತ್ತಾನೆ ಆದರೆ ಕಂದಪದ್ಯಗಳಲ್ಲಿ ನಾಲ್ಕುನಾಲ್ಕು ಮಾತ್ರೆಗಳುಳ್ಳ ಗಣಗಳೂ, ಪದ್ಯಾರ್ಧದ ಕೊನೆಯಲ್ಲಿ ಗುರುವೂ ಇರಬೇಕೆಂಬ ನಿಯಮವನ್ನುಲ್ಲಂಘಿಸಿ ಬರೆದಿರುತ್ತಾನೆ (ಗದೋಲ್ಲಂಘನೆಗೆ ಉದಾ –v11, ಆಶಾ ಸ, ಪದ್ಯ -12, 13, 15, 39, 40, 41, 42, 90 *ix ಆಶ್ಚಾಸ ಪದ್ಯ -12, 21, 23 , ಪದ್ಯಾರ್ಧದ ಕೊನೆಯಲ್ಲಿ ಗುರುವಿಲ್ಲ ದಿರುವುದಕ್ಕೆ ಉದಾ -ಆಶ್ವಾಸ, ಪದ್ಯ 35, 36, 38 , v1uಆಶ್ವಾಸ, ಪದ್ಯ -38, 40, 43, 44, 47 , X11 ಆಶ್ವಾಸ, ಪದ್ಯ -58, 103, 125, 120 ಮುಂತಾದುವು ) ಮೊದಮೊದಲು ಪದ್ಯಾರ್ಧದ ಕೊನೆಯಲ್ಲಿರುವ ಲಭ್ಯಕ್ಷರಗಳಿಗೆ ಬದಲು ಗುರಕ್ಷರಗಳನ್ನು ಬರೆದೂ, ಗಣನಿಯಮವಿಲ್ಲದಿರುವಕಡೆ ಗಣಗಳನ್ನು ಸರಿಪಡಿ ಸಿಯ, ಕಂದಪದ್ಯಗಳನ್ನೆಲ್ಲ ಛಂದೋನಿಯಮಕ್ಕನುಸಾರವಾಗಿ ಕ್ರಮಪಡಿಸಬೇ ಕೆಂದು ಪ್ರಯತ್ನಿಸಲಾಯಿತು ಆದರೆ ಇಂತಹ ಛಂದೋವಿರುದ್ದ ವಾದ ಪದ್ಯಗಳು ನೂರಾರು ಕಂಡುಬಂದುದರಿಂದ, ಕವಿಯು ಈ ಪದಗಳನ್ನು ಉಚ್ಚಂಬಲವೃತ್ತಿ ಯಿಂದ ಬರೆದಿರ ವನೆಂದು ತಿಳಿದು ಆ ಪ್ರಯತ್ನವನ್ನೇ ಬಿಡಬೇಕಾಯಿತು ಈತನು ತನ್ನ ಗ್ರಂಥದಲ್ಲಿ ಆಧುನಿಕರಾದ ಕನ್ನಡಕವಿಗಳಂತ ಸುಜಾಣ, ಹಿಮವಟ್ಟು, ಕೈವಶ, ಅಳಿವಿಂಡು ಮುಂತಾದ ಅನೇಕ ಅರಿಸಮಾಸಗಳನ್ನು ಉಪ ಯೋಗಿಸಿದ್ದಾನೆ ಗ್ರಂಥಾರಂಭದಲ್ಲಿ ಕವಿಯು ವೀರಭದ್ರನ ವಿಜಯವನ್ನು ಇದರಲ್ಲಿ ವರ್ಣಿಸು ವೆನೆಂದು ಮಾಡಿರುವ ಪ್ರತಿಜ್ಞೆಯಿಂದಲೂ, ಈ ಗ್ರಂಥದ ಹೆಸರಿನಿಂದಲೂ, ಇದರಲ್ಲಿ ಮೂದಲಿಂದ ಕೊನೆಯವರೆಗೂ ವೀರಭದ್ರನಿಗೆ ಸಂಬಂಧಪಟ್ಟ ಕಥೆಯನ್ನೇ ವರ್ಣಿಸಿ ರುವನೆಂದು ಊಹಿಸುವುದು ಎಲ್ಲರಿಗೂ ಸ್ವಾಭಾವಿಕವಾಗಿದೆ ಆದರೆ ಗ್ರಂಧದ ಅರ್ಧಭಾಗದವರೆಗೂ ಅಂದರೆ ಏಳನೆಯ ಆಶ್ವಾಸದವರೆಗೂ ವೀರಭದ್ರನ ಕಥೆಗೆ ಸಂಬಂಧಪಟ್ಟ ಒಂದು ಶಬ್ದವಾದರೂ ಬರುವುದಿಲ್ಲ ವೀರಭದ್ರವಿಜಯವು ಎಂತೆನೆ ಎಂದು ಕವಿಯು ಪ್ರಾರಂಭಿಸಿ ಕಾಶೀದೇಶವನ್ನೂ , ಕಾಶೀಪಟ್ಟಣದ ಮಾಹಾತ್ಮ ವನ್ನೂ, ಆ ಪಟ ಣಕ್ಕೆ ನಾಯಕನಾದ ವಿಶ್ವನಾಧವನ್ನೂ ವರ್ಣಿಸಿ ವಸಂತರ್ತುವಿನ ಪುಪ್ಪಾಪಚಯಜಲಕ್ರೀಡೆಗಳಲ್ಲಿ ಪಾರತೀಪರಮೇಶ್ವರರ ಲೀಲಾವಿನೋದಗಳನ್ನು ವಿಸ್ಕರಿಸಿ, ಗಜಾಸುರಸಂಹಾರವನ್ನು ವರ್ಣಿಸಿರುತ್ತಾನೆ ಅನಂತರ ಆರನೆಯ ಆಶ್ವಾಸದಲ್ಲಿ ಸ್ಕಾಂದಪುರಾಣದ ಕಾಶಿಕಾಖಂಡದಲ್ಲಿರುವ ಸುರಾಭಾಂಡೇಶ್ವರೋ ಪಾಖ್ಯಾನವನ್ನು ಬಹುವಿಸ್ತಾರವಾಗಿ ವರ್ಣಿಸಿದ್ದಾನೆ ಬಳಿಕ ಏಳನೆಯ ಆಶ್ವಾಸ