ಪುಟ:ವೇಣೀಬಂಧನ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(ಆ) ವಾಗ್ಯೂಷಣ. ದ್ರುಪದ, ವಿರಾಟ, ವೃಂಧಕ, ಸಹದೇವ ಇವರೇ ಮೊದಲಾದ ಪಾಂಡವರ ಕಡೆಯ ಭಟರೂ ಭೀಷ್ಮ, ದ್ರೋಣ, ಕೃಪ, ಕರ್ಣ, ಶಲ್ಯ ಮೊದಲಾದ ಕೌರವರ ಕಡೆಯ ಭಟರೂ ತಮ್ಮ ತಮ್ಮ ಪ್ರಚಂಡ ಸೈನ್ಯ ದೊಂದಿಗೆ ರಣಭೂಮಿಯಲ್ಲಿ ಸಜ್ಜಾಗಿ ನಿಂತುಕೊಂಡರು. ಪಾಂಡವರ ಏಳು ಅಕ್ಷೇಹಿಣೀ ಸೈನ್ಯವೂ ಕೌರವರ ಹನ್ನೊಂದು ಅಕ್ಷೇಹಿಣೀ ಸೈನ್ಯವೂ ನಿಂತುಕೊಂಡವು. ರಣವಾದ್ಯಗಳು ಧಳ೦ ಧಳಂ ಎಂದು ಪ್ರಳಯಕಾಲದ ಮೇಘಗರ್ಜನೆಯಂತೆ ಶಬ್ದ ಮಾಡಹತ್ತಿದವು. ಅಖಿಳ ವೀರರು ತಮ್ಮ ಶಸ್ತ್ರಾಸ್ತ್ರಗಳನ್ನು ಹೊಸದಾಗಿ ಸಾಣೇ ಹಿಡಿಸಿದ್ದರಾದಕಾರಣ ಸೂರ್ಯನ ಪ್ರಕಾಶದಿಂದ ಅವು ಲಕಲಕ ಹೊಳೆಯುತ್ತಿದ್ದವು. ಸ್ವಲ್ಪ ಹೊತ್ತಿನಲ್ಲಿ ಉಭಯ ಸೈನಿಕರು ಒಳ್ಳೆ ಪರಾಕ್ರಮದಿಂದ ಹೋರಾಡಹತ್ತಿದರು. ಕೌರ ವರ ಸೈನ್ಯಕ್ಕೆ ಕುರುಕುಲ ಪಿತಾಮಹನಾದ ಭೀಷ್ಮನು ಸೇನಾಪತಿಯಾಗಿ ದ್ದನು. ಅವನು ಶತ್ರುಗಳ ಸಂಗಡ ಹತ್ತು ದಿವಸಗಳವರೆಗೆ ಜೀವದ ಹಂಗು ದೊರೆದು ಧರ್ಮಯುದ್ಧವನ್ನು ಮಾಡಿ ಶರಪಂಜರದಮೇಲೆ ಮಲಗಿದನು. ಉಭಯಪಕ್ಷದ ಸೈನ್ಯದಲ್ಲಿ ಎಷ್ಟೋ ದಂಡಾಳುಗಳು ವೀರ ಸ್ವರ್ಗವನ್ನು ಪಡೆದರು. ಭೀಷ್ಕನ ತರುವಾಯ ಕುರುಸೈನ್ಯಕ್ಕೆ ವೀರಾಗ್ರಣಿ ಗಳ, ಶಸ್ತ್ರಾಚಾರ್ಯರೂ ಆದ ದ್ರೋಣಾಚಾರ್ಯರು ಸೇನಾಪತಿಯಾ ದರು. ಯುದ್ಧವು ಯಥಾಪ್ರಕಾರವಾಗಿ ನಡೆದಿತ್ತು. ಆ ಪ್ರಸಂಗದಲ್ಲಿ ದ್ರೋಣಾಚಾರ್ಯರೂ, ಕರ್ಣ, ಜಯದ್ರಥ ಮೊದಲಾದ ಮಹಾವೀರರೂ ಕೂಡಿ ಪಾಂಡವರಕಡೆಯ ಅಭಿಮನ್ಯುವೆಂಬ ಬಾಲವೀರನನ್ನು ಚಕ್ರವ್ಯೂ ಹದಲ್ಲಿ ಅನ್ಯಾಯದಿಂದ ಹಿಡಿದು ಕೊಂದರು. ಇದರಿಂದ ಪಾಂಡವರ ಸೈನ್ಯದಲ್ಲಿ ನಾಲ್ಕು ಕಡೆಗೆ ಹಾಹಾಕಾರವೆದ್ದಿತು. ಕೌರವರ ದಂಡಿನಲ್ಲಿ ಆನಂದೋತ್ಸವಗಳು ಪ್ರಾರಂಭವಾದವು. ದುರ್ಯೋಧನನಿಗೂ ಬಹಳ ಆನಂದವಾಯಿತು. ಆ ಆನಂದದ ಭರದಲ್ಲಿ ಅವನು ಕೆಲಹೊತ್ತು ಯುದ್ಧ ವನ್ನು ಮರೆತು, ಭಾನುಮತಿಯೊಡನೆ ವಿಲಾಸಸುಖವನ್ನು ಅನುಭವಿಸಬೇ ಕೆಂದು ಆಲೋಚಿಸಿ, ಅವಳು ಎಲ್ಲಿ ರುವಳ ನೋಡಿಕೊಂಡು ಬಾ, ಎಂದು ಒಬ್ಬ ಸೇವಕನನ್ನು ಕಳುಹಿದನು. ಆ ಸೇವಕನು ಅಂತಃಪುರವನ್ನು ಬಲ್ಲವ ನಾದ್ದರಿಂದ ಭಾನುಮತಿಯ ಉದ್ಯಾನದಲ್ಲಿ ಮಹಾರಾಜರಿಗೆ ಜಯವಾಗ ಲೆಂದು ದೇವರನ್ನು ಆರಾಧಿಸುತ್ತಿರುವಳಂಬ ಸುದ್ದಿಯನ್ನು ತಂದು ಹೇಳಿ ದನು. ತರುವಾಯ ದುರ್ಯೋಧನನು ಅಲ್ಲಿಗೆ ಹೊರಟು ನಡೆದನು.