ಪುಟ:ವೇಣೀಬಂಧನ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣೀ, ಬಂಧನ, ಇತ್ತ ಭಾನುಮತಿಯು ತನ್ನ ಗೆಳತಿಯ ಮುಂದೆ ಸಖಿಯೆ, ಏನು ಹೇಳಲಿ? ನಾನು ಪ್ರಮದವನದಲ್ಲಿ ಒಬ್ಬಳೇ ಕುಳಿತ ಸಮಯದಲ್ಲಿ ನಕು ಲನು ನೂರು ಸರ್ಪಗಳನ್ನು ತುಂಡಿಸಿ ಕಲ್ಲಿ ನನ್ನ ಬಳಿಗೆ ಬಂದನು.” ಎಂದು ರಾತ್ರಿಯಲ್ಲಿ ತನಗೆ ಬಿದ್ದ ಒಂದು ಕನಸನ್ನು ಹೇಳುತ್ತಿದ್ದಳು. ಅಪ್ಪ ರಲ್ಲಿ ದುರ್ಯೋಧನನು ಅಲ್ಲಿಗೆ ಬಂದು, ಭಾನುಮತಿಯು ಏನು ಮಾತಾ ಡುತ್ತಿರುವಳೆಂಬದನ್ನು ಮರೆಗೆ ನಿಂತು ಕೇಳಹತ್ತಿದನು. ಆಗ ಭಾನುಮತಿಯ ಸಖಿಯು-ಗೆಳತೀ, ಮುಂದೇನಾಯಿತು? ಎಂದು ಕೇಳಿದಳು. ಅದಕ್ಕೆ ಭಾನು ಮತಿಯು-ಸಖಿಯೆ, ಅವನ ಸುಂದರರೂಪವನ್ನು ಕಂಡು, ನನ್ನ ಮನಸ್ಸು ಕಕ್ಕಿವಿಕ್ಕಿ ಆಯಿತು. ಕೂಡಲೆ ನಾನು ಅಲ್ಲಿಂದ ಎದ್ದು , ಲತಾಮಂಟಪದಲ್ಲಿ ಕುಳಿತುಕೊಂಡೆನು. ಆದರೆ ಆ ನಕುಲನು ನನ್ನ ಬೆನ್ನುಹತ್ತಿಯೇ ಬಂದು ಮೈಮುಟ್ಟ ಸೆರಗು ಎಳೆದು ಕೆಲವು ಅಲ್ಲದ ಚೇಷ್ಟೆಗಳನ್ನು ಮಾಡಿದನು. ಎಂದು ಹೇಳಿದಳು. ಈ ಮಾತುಗಳನ್ನು ಕೇಳಿ ದುರ್ಯೋಧನನ ಮನಸಿನಲಿ ಮಾಡ್ತೀಸುತನಾದ ನಕುಲನ ವಿಷಯವಾಗಿ ವಿಕಲ್ಪವು ಉತ್ಪನ್ನವಾಯಿತು. ಪ್ರಿಯ ವಾಚಕರೇ, ಸಂಶಯವು ಬಹು ಕೆಡಕು; ಅದರಿಂದ ಮನುಷ್ಯನ ಅವ ಸೈಯು ಹ್ಯಾಗಾಗುತ್ತದೆ ನೋಡಿರಿ. ಕೂಡಲೆ ದುರ್ಯೋಧನನು ತನ್ನ ಖಡ್ಗಕ್ಕೆ ಕೈಹಾಕಿ, ಒಂದೇ ಹೊಡತದಿಂದ ನಕುಲನ ಚೇಷ್ಟೆಗಳಿಗೆ ಆಸ್ಪದಕೊಟ್ಟೆ ಈ ಪಾಪಿಸ್ಮಳನ್ನು ಈ ಲೋಕದಲ್ಲಿ ಇಲ್ಲದಂತೆ ಮಾಡಿ ಆ ಬಳಿಕ ಆ ಮಾಡ್ತೀಸುತನ ಯೋಗ್ಯ ಸಮಾಚಾರವನ್ನು ತಕ್ಕೊಳ್ಳುತ್ತೇನೆಂದು ಖಡ್ಡ ವನ್ನು ಒರಿಯಿಂದ ಹಿರಿಯುತ್ತಿದ್ದನು; ಆಗ ಗೆಳತಿಯು ಒಳ್ಳೆ ಆಶ್ಚರ್ಯದ ಮುದ್ರೆಯಿಂದ ಮುಂದೇನಾಯಿತು ? ಎಂದು ಕೇಳಿದಳು. ಅದಕ್ಕೆ ಭಾನುವ ತಿಯು- ಸಖಿಯೆ, ಆ ಬಳಿಕ ನಕುಲನು ಒಂದು ಗುದ್ದಿನಲ್ಲಿ ಸೇರಿಕೊಂಡ ನು. ಅಸ್ಮರಲ್ಲಿ ಬೆಳಗಿನ ಜಾವದ ವಾದ್ಯಗಳು ಮೊಳಗತೊಡಗಲು, ನನಗೆ ಎಚ್ಚರಾಯಿತು ಎಂದು ಹೇಳಿದಳು. ಆಗ ದುರ್ಯೋಧನನು ಖಡ್ಡ ಕೈ ಹಾಕಿದ ಕೈಯನ್ನು ಹಿಂದಕ್ಕೆ ತಕ್ಕೊಂಡು ಒಳ್ಳೆ ಆಶ್ಚರ್ಯದಿಂದ ಚಕಿತನಾಗಿ ಒಹೋ, ಇವಳು ತನ್ನ ಕನಸಿನ ಸುದ್ದಿಯನ್ನು ಹೇಳುತ್ತಿರುವಳು. ಸುಮ್ಮ ಸುಮ್ಮನೆ ನಾನು ಅವಳ ಮೇಲೆ ತಪ್ಪು ಹೊರಿಸಿದ್ದೆನು. ಪತಿವ್ರತಾ ಶಿರೋ ಮಣಿಯಾದ ಇವಳು ತನ್ನ ಸ್ವಪ್ನದ ಕಥೆಯನ್ನು ಬೇಗನೆ ಮುಗಿಸಿದಳು; ಇಲ್ಲದಿದ್ದರೆ ಸಂಶಯಗೊಂಡ ಮನಸಿನಿಂದ ನಾನು ಎಂಥ ಕೆಟ್ಟ ಕೆಲಸಗ