ಅÀ ಶಂಕರಕಥಾಸಾರ ಸಪ್ತಮವಲ್ಲರೀ. - ~- ವ್ಯಾಸೇ ವೃದ್ಧ ಮಹೀಸುರಾಕೃತಿಯುತೇ ಭಾಷ್ಯಾದಿ ವೀಕ್ಷ್ಯ ಸ್ವಕಂ ಪ್ರಾಂತರ್ಧಿಮಥ ಪ್ರಯಾಗಮುಸಲಧ್ಯಾರ್ಯೋ ತುಷಾಗ್ನೆಸ್ಥಿತ೦|| ಭಟ್ಟಾರಂ ಹ್ಯುಪದಿಶ್ಯ ತತ್ರ ಚ ತತತ ಮಂಡನಂಶಾರದಾಂ ಮಾಹಿಷ್ಕೃತ್ಯಭಿಧೇ ವಿಚಿತ್ಯ ನಗರೇ ಪ್ರಾಯಾಗ್ನಿಶಂ ದಕ್ಷಿಣಾಮ್ || > ಹಿಂ ದಾನೊಂದುದಿನ ಆಚಾರೈರು, ಗಂಗಾತೀರದಲ್ಲಿ ಶಿಷ್ಯರಿಗೆ ಭಾಷ . ಪ್ರವಚನಮಾಡಿಸುತ್ತಿದ್ದಾಗ ಮಧ್ಯಾಹ್ನ ವಾಗಲು, ಆಯಾಸ ಗೊಂಡು, ಮಾಧ್ಯಾ ಕ ಸ್ನಾನಕ್ಕೆ ಏಳುತ್ತಿರುವಾಗ ಓರ್ವ ವೃದ್ದ ಬ್ರಾಹ್ಮಣನು ಬಂದು ಆಚಾರೈರನ್ನು ಕುರಿತು ನೀನು ಯಾರು ? ಇವರಿಗೆ ಏನು ಹೇಳುತ್ತೀಯೆ ?' ಎನ್ನಲು ಪದ್ಮಪಾಬಾದಿಗಳು - ಇವರು ನಮ್ಮ ಗುರುಗಳು; ವೇದಾಂತಭಾಷ್ಯಕಾರರು; ಬ್ರಹ್ಮ ಸೂತ್ರಭೆ ಹೂವನ್ನು ನಮಗೆ ಬೋಧಿಸುತ್ತಿದ್ದಾರೆ' ಎಂದರು. ಅದನ್ನು ಕೇಳಿ ಆ ವೃದ್ಧ ಬ್ರಾಹ್ಮಣನು ಯಾವುದಾದರೂ ಒಂದು ಸೂತ್ರಕ್ಕೆ ಅರ್ಥವನ್ನು ಹೇಳೆನ್ನಲು ಶಂಕರರು ನನಗೆ ಅರ್ಥಜ್ಞನೆಂಬ ಅಹಂಕಾರವಿಲ್ಲ; ತಾವು ಯಾವುದಾದರೂ ಒಂದು ಸೂತ್ರವನ್ನು ಕೇಳಬಹುದು' ಎಂದರು. ಆಗ ವೃದ್ದ ಬ್ರಾಹ್ಮಣನು ತದಂತರ ಪ್ರತಿಪತ್ರಯತಿಸಂಪರಿಷ್ಯಕ್ಕೆ ಪ್ರಶ್ನಿನಿ ರೂಪಣಾಭ್ಯಾಮ್ ” ಎಂಬ ಸೂತ್ರವನ್ನು ಕೇಳಿ, ಶಂಕರರು ಹೇಳಿದ ಅರ್ಥದಮೇಲೆ ಅನೇಕ ವಿಕಲ್ಪಗಳನ್ನು ತೋರಿಸಿದರು. ಶಂಕರರು ಅವುಗಳನ್ನೆಲ್ಲಾ ಬಂಡಿಸಲು ಇಬ್ಬರಿಗೂ ವಾದವು ಆರಂಭವಾಯಿತು. - ಸಾಪದಲ್ಲಿದ್ದ ಪದ್ಮಪಾದನು ಅವರಿಬ್ಬರನ್ನೂ ಧ್ಯಾನಿಸಿನೋಡಿ ಅವರನ್ನು ಹರಿಹರಸ್ವರೂಪರೆಂದು ತಿಳಿದು (ಶಂಕರಃ ಶಂಕರಃ ಸಾಕ್ಷಾತ್ ವ್ಯಾಸೋನಾರಾಯಣೋ ಹರಿಃ | ತಯೋರ್ವಿವಾದ ಸಂಪ್ರಾಪೈಕಿಂಕರಃ ಕಿಂಕರೋಮ್ಯಹಂ) • ಶಂಕರಾವತಾರಿಗ ಳಾದ ಶಂಕರಾಚಾದ್ಯರಿಗಣ, ನಾರಾಯಣಾವತಾರಿಗಳಾದ ವ್ಯಾಸುಗೂ ವಿವಾದಪ್ರಾರಂ ಭವಾದರೆ ಕಿಂಕರನಾದ ನಾನು ಏನುಮಾಡಲು ಶಕ್ತನು ? ” ಎನ್ನಲು ಶಂಕರರು ತಕ್ಷಣ ದಲ್ಲಿ ವ್ಯಾಸರಿಗಭಿವಂದಿಸಿ ಸ್ತುತಿಸಲು ವ್ಯಾಸರು ತಮ್ಮ ನೈಜರೂಪವನ್ನು ತೋರಿಸಿದರು.
ಪುಟ:ಶಂಕರ ಕಥಾಸಾರ.djvu/೩೯
ಗೋಚರ