ಪುಟ:ಶಕ್ತಿಮಾಯಿ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಸ, ಚಂದ್ರಿಕ. ಕಾಗಿದೆ? ಗಾಯಕನ ಈ ಅಸ್ಪಷ್ಟ ಭಾವವನ್ನು ತಿಳಿದ ಆ ಯುವತಿಯು ಸರದಾರ, ತಾವು ನನಗಾವ ಭಿಕ್ಷೆಯನ್ನು ನೀಡುವರಾಗಿದ್ದೀರಿ? ಗ ವಾಯಿಗಳೇ, ತಾವು ನನಗೆ ಬೇರೆ ಯಾವ ಬಕ್ಕೆಯನ್ನೂ ಹಾಕುವ ಗೊಡವಿಗೆ ಹೋಗದಿ. ಗಣೇಶದೇವನ ಬಿಡಾರವನ್ನಷ್ಟು ನನಗೆ ತೋರಿ ಸಿಬಿಡಿರಿ, ಅ೦ದರಾಯಿತು. ಪ್ರಸ್ತುತ ಯುದ್ಧದ ಸಂಬಂಧದಲ್ಲಿ ನನಗೆ ತಿಳಿದಿರುವ ಕೆಲವು ಗುಪ್ತ ಸಂಗತಿಗಳನ್ನು ನಾನು ಅವನಿಗೆ ಈಗಲೆ ಅವಶ್ಯವಾಗಿ ತಿಳಿಸಬೇಕಾಗಿದೆ. ಆಗ ಗಾಯಕನು ಮನಸ್ಸಿನಲ್ಲಿ ತುಸ ಆಲೋಚಿಸಿ-ನೀನು ಯಾವ ಕೆಲಸದ ಸಲುವಾಗಿ ರಾಜರನ್ನು ಕಾಣಬೇಕಾಗಿದೆಯೆಂಬದ ನ್ನು ನನಗೆ ತಿಳಿಸಬೇಕು. ಅಂದರೆ ನಾನು ಆ ಸಂಗತಿಯನ್ನು ಮ ಹಾರಾಣಿಗೆ ತಿಳಿಸಿ ಅವಳಿ೦ದ ಅಪ್ಪಣೆ ಪಡೆದು ನಿನಗೆ ರಾಜದರ್ಶನ ವಾಗುವ ಹಾಗೆ ಮಾಡುವೆನು, ಎಂದನು. ಭಿಕ್ಷುಕಿ-ಇಲ್ಲ, ಆ ಸಂಗತಿಯನ್ನು ನಾನು ಬೇರೆ ಯಾರ ಮುಂದೂ ಹೇಳುವದಿಲ್ಲ. ಗಾಯಕ- ಹಾಗೇ ಆಗಲಿ; ನಡೆ, ಶಿಬಿರಕ್ಕೆ ನಡೆ. ಅಲ್ಲಿ ನನ್ನ ಹೆಂಡತಿಯ ಮುಖಾಂತರ ರಾಜ್ಯ ಅಪ್ಪಣೆಪಡೆದು ನಿನಗೆ ರಾಜದರ್ಶನ ಮಾಡಿಸುವೆನು. ವಾಚಕರೇ, ಹೀಗೆ ಪುಷ್ಕರಿಣಿಯ ತೀರದಲ್ಲಿ ಗಾಯಕ ಕೊಡನೆ ಸಂಭಾಷಣ ಮಾಡುತ್ತಿದ್ದ ಭಿಕ್ಷುಕಿ ವೇಷಧಾರಿಣಿಯಾದ ಆ ಅಪರಿಚಯಸ್ಥ ಯುವತಿಯು ಮತ್ತಾರೂ ಇದ್ದಿಲ್ಲ; ಅತ್ಯಂತ ಸಾ ಹಸಿಯಾಗಿದ್ದ ನಮ್ಮ ಶಕ್ತಿಮಯಿಯೇ ಹೌದು. ++ ++ ++ ++ ++