ಪುಟ:ಶಕ್ತಿಮಾಯಿ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಶಕ್ತಿಮಯಿ Co೫ ನಿರೂಪಮಾ ರಾಣಿಯ ದರ್ಶನ ಮಾಡಬೇಕೆಂದರೆ ಶಕ್ತಿಗೆ ಬಹ ಳ ಸಂಕೋಚವೆನಿಸುತ್ತಿತ್ತು. ಇದಕ್ಕೆ ಕಾರಣವೆಂದರೆ, ಅವಳು ನಿರೂಪತಿಯ ವಿಷಯವಾಗಿ ತನ್ನ ಮನದಲ್ಲಿ ಇದ್ದ ಸವತಿ ಮತ್ಥ ರವೇ. ಆದರೆ ತನ್ನ ಸಂಕೋಭಾವವನ್ನು ಅವಳು ಆ ಬ್ರಾಹ್ಮಣನಿಗೆ ತಿಳಿಸಲಿಲ್ಲ. ನನಗೆ ರಾಣಿಯ ದರ್ಶನವು ಬೇಕಿಲ್ಲ, ರಾಜನ ದರ್ಶನ ವನ್ನಷ್ಟೇ ಮಾಡಿಸು, ಎಂದು ಅಂದರೆ ಆ ಬ್ರಾಹ್ಮಣನು ಎಲ್ಲಿ ಮನ ಸಿನಲ್ಲಿ ಇಲ್ಲದ ವಿಕಲ್ಪಗಳನ್ನೆಣಿಸಿ, ನನ್ನ ಕಾರ್ಯವು ಕೈಗೂಡಲಕ್ಕಿ ವೋ ಎಂದು ತಿಳಿದೇ ಅವಳು ಸುಮ್ಮನೆ ಆ ಗಾಯಕನ ಬೆನ್ನತ್ತಿ ಗಣೇಶದೇವನ ಶಿಬಿರಕ್ಕೆ ಬಂದಿದ್ದಳು. ದಂಡಾಳುಗಳಿಂದ ಸುರಕ್ಷಿತವಾದ ಗಣೇಶದೇವನ ಶಿಬಿರದ ಮುಖ್ಯ ಭಾಗದ ಒಂದು ಷೇರೆಯಲ್ಲಿ ಸರ್ವಸಾಧಾರಣವಾದ ಒಂದು ಮಂಚದ ಮೇಲೆ ಒಂದು ವರ್ಷವಯಸ್ಸಿನ ಶಿಶುವೊಂದು ಮಲಗಿತ್ತು. ಗಣೇಶದೇವನು ಮಂಚದ ಮೇಲಿನ ಎತ್ತರವಾದ ಹಾಸಿಗೆ ಸುರಳಿಗೆ ಒರಗಿಕೊಂಡು ಕುಳಿತು ಆ ಶಿಶುವನ್ನು ವಿಕಿ ಮಿಕಿ ನೋಡುತ್ತಿ ಧ್ವನು; ಹಾಗು ನಡನಡುವೆ ಆ ನಿದ್ರಿತ ಕಸಿನ ಅಧರಗಳನ್ನು ಚುಂಬಿಸುತ್ತಿದ್ದನು. ನಿರೂಪಮಾ ರಾಣಿಯು ರಾಜನ ತಲೆಯ ಕಡೆಗೆ ಕುಳಿತು ತನ್ನ ಅಂಗುಲಿಗಳಿಂದ ರಾಜನ ಘನವಾದ ತಲೆಗೂ ದಲುಗಳ ತೊಡಕುಗಳನ್ನು ಆಸ್ಥೆಯಿಂದ ಬಿಡಿಸುತ್ತ ಸಸ್ನೇಹದಿಂದ ಆತನೊಡನೆ ಸಂಭಾಷಣ ಮಾಡುತ್ತಲಿದ್ದಳು. ಈ ಸಮಯ ದಲ್ಲಿ ರಂಗಿಣಿಯು ತನ್ನ ಗಂಡನಾದ ಗಾಯಕನ ಆಜ್ಞೆಯ ಮೇರೆಗೆ ಭಿಕ್ಷು ಕಿಯನ್ನು ಕರೆದುಕೊಂಡು ಅಲ್ಲಿಗೆ ಬಂದಳು. ಅವಳು ಭಿಕ್ಷು ಕಿಗೆ ಡೇರೆಯ ಹೊರಬದಿಯಲ್ಲಿ ತುಸು ಸಿಲಿಕ್ಕೆ ಹೇಳಿ ತಾನು ಡೇರೆ ಯ ಒಳಗೆ ಹೊಕ್ಕಳು. ರಂಗಿಣಿಯು ಅತ್ತ ಪೇರೆಯ ಒಳಗೆ ಪ್ರವೇ ಶಿಸಲುಇತ್ತ ಭಿಕ್ಷುಕ ವೇಷಧಾರಿಣಿಯಾದ ಶಕ್ತಿಮಯಿಯು ತುಸ