ಪುಟ:ಶಕ್ತಿಮಾಯಿ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2. ೧೪೬ ಸ, ಚಂದ್ರಿಕೆ. ದ್ದರಿಂದ ಆಕೆಯು ಗಣೇಶದೇವನ ಬಂಧ ಮುಕ್ತತೆಗಾಗಿ ಮಿತಿಮೀರಿ ಸಾಹಸಪಡಬೇಕಾಯಿತು. ಶಕ್ತಿಮಯಿಯು ಈಗ ತನ್ನ ಕಾಣೆಯಾಗಿದ್ದರೂ ಅವಳು ಗಣೇಶದೇವನೊಡನೆ ಬಾಲ್ಯ ಸ್ನೇಹದಿಂದ ಬಿಗಿಯಲ್ಪಟ್ಟಿರುವದರಿಂದ ಈ ಸಾಹಸಿಯಾದ ಹೆಂಗಸು ಪ್ರಸಂಗವರಿತು ಅವನನ್ನು ಹ್ಯಾಗೆ ಬಂಧ ಮುಕ್ತ ಮಾಡಿಸಬಹುದೇ? ಮತ್ತು ಇವಳ ಆ ಕೆಲಸಕ್ಕೆ ತಾನು ಪ್ರತಿಬಂಧಿಸ ಹೋದರೆ ಇವಳು ತನ್ನ ಮನಸಿನಲ್ಲಿ ಮತ್ತೆ ಯಾವ ಕುಕಲ್ಪನೆಗಳನ್ನು ಹಾಕಿ ಇಲ್ಲದ 'ಗೊಂದಲವನ್ನೆಬ್ಬಿಸುವಳೋ ಎಂದು ಗಾಯಸುದ್ದೀನನು ಮನಸಿನಲ್ಲಿ ಯೋಚಿಸಿದನು. ಕಡೆಗೆ ಅವನು ಗಣೇಶದೇವನನ್ನು ಕೊಲ್ಲಿಸಿಬಿಟ್ಟರೆ' ಮುಂದಿನ ಯಾವ ಅನರ್ಥಗ ಳಿಗೂ ಇಂಬು ಉಳಿಯಲಿಕ್ಕಿಲ್ಲೊಂದು ನಿಷ್ಕರ್ಷಿಸಿಕೊಂಡನು. ಹೀಗೆ ಸೆರೆಯಾಳಾದ ಒಬ್ಬ ಗಣೇಶದೇವನ ಸಲುವಾಗಿ (ಶಕ್ತಿ ಮಯಿ ಮತ್ತು ಗಾಯಸುದ್ದೀನ) ಈ ದಂಪತಿಗಳಲ್ಲಿ ವೈಮನಸ್ಸುಂಟಾ ಗುವಂತ ಆಟ ಕೂಡಿದ ಕುತುಬನು, ಮುಂದೆ ಮತ್ತೆ ಏನು ಮಾಡುವ ನೆಂಬದು ಮುಂದಿನ ಪ್ರಕರಣದಲ್ಲಿ ವಾಚಕರಿಗೆ ತಿಳಿಯಬಹುದು.