ಶಕ್ತಿಮಯಿ, ೧೪& ಹಾಕಿ ತಮಗೆ ಔರಾಮರ್ಶಿಸುವದು ಸರಿಯಲ್ಲವೆಂಬದನ್ನು ನಾನು ಬಲ್ಲೆ ನು; ಆದರೂ ಅಭಯವಿತ್ತರೆ ಒಂದು ಸಂಗತಿಯ ಬಗ್ಗೆ ತಮ್ಮನ್ನು ಕೇಳಿಕೊಳ್ಳುವೆನು. ಆಗ ಗಾಯಸುದ್ದೀನನು ತನ್ನ ನೂತನ ರಾಣಿಯ ಮನಸ್ಸ ನ್ನು ತೃಪ್ತಿಗೊಳಿಸಲು ಪ್ರಾಪ್ತವಾದ ಈ ಸುಸಂಧಿಯನ್ನು ಕಳಕೊ ಳ್ಳಲಿಲ್ಲ. ಅವನು ಅಕೆಗೆ ಅಭಯವನ್ನೀಯಲು ಅವಳು-ಖಾವಂದ, ಕುಮಾರ ಸಾಹೇಬುದ್ದೀನನನ್ನು ಕೊಲ್ಲಿಸದೆ ಬಿಟ್ಟು ಬಿಡಬೇಕು. ಅಂ ದರೆ ಅದರಿಂದ ನನಗೂ ನಿಮ್ಮ ರಾಜ್ಯದೊಳಗಿನ ಎಲ್ಲ ಪ್ರಜೆಗಳಿಗೂ ಆನಂದವಾಗುವದು. ಅದರಂತೆ ದಿನಾಂಪುರದ ರಾಜನಾದ ಗಣೇ ಶದೇವನನ್ನೂ.... ಎಂದು ನುಡಿಯುತ್ತಿರಲು, ಗಾಯಸುದ್ದೀನನು ನಡುವೇ ಬಾಯ ಹಾಕಿ ನಿನ್ನ ಮೊದಲಿನ ಆದೇಶದಂತೆ ಸಾಹೇಬುದ್ದೀನನನ್ನು ಬಿಟ್ಟು ಗೊಡುವೆನು. ಆದರೆ ಗಣೇಶದೇವನ ಮಾತನ್ನು ನೀನು ತೆಗೆಯಬಾರ ದು; ನಾನು ಅದನ್ನು ನಡೆಸಬಾರದು. ಇದರಲ್ಲಿಯೇ ನನ್ನ-ನಿನ್ನ ಗೌರವವಾಗಿರುತ್ತದೆ, ಎಂದು ನಿಷ್ಕರ್ಷವಾಗಿ ಹೇಳಿಬಿಟ್ಟನು. ಯಾವದೊಂದು ಸಂಗತಿಯು ಸ್ವಾಭಾವಿಕವಾಗಿ ಸಾಗುವ ವರೆಗೆ ಆ ವಿಷಯವಾಗಿ ಯಾರೂ ದೀರ್ಘ ಸಾಹಸಕ್ಕೆ ಹೋಗುವ ದಿಲ್ಲ. ಆದರೆ ಅದೇ ಮಾತಿನ ವಿಷಯವಾಗಿ ಎರಡು ಬಣಗಳಾದ ವೆಂದರೆ ಆ ಮೇಲೆ ಈರ್ಷೆಗಾಗಿ ಪ್ರತಿಯೊಂದು ಕಡೆಯವರು ಮಿ ತಿಮೀರಿ ಸಾಹಸಪಟ್ಟು ತಮ್ಮ ಹಿಡಿತವನ್ನು ಸಾಧಿಸುವ ಹವ್ಯಾಸ ತಾ ಳುವದು ಲೋಕರೂಢಿಯಾಗಿದೆ. ಅದರಂತೆ ಶಕ್ತಿಮಯಿಯು ಕೇ ಳಿಕೊಂಡಂತೆ ಗಾಯಸುದ್ದೀನನು ಗಣೇಶದೇವನನ್ನು ಬಂಧಮುಕ್ತ ಮಾಡಿ ಬಿಟ್ಟಿದ್ದರೆ, ಆಕೆಯು ಆ ವಿಷಯವಾಗಿ ಹೆಚ್ಚಾಗಿ ಸಾಹಸ ಪಡುವ ಕಾರಣವಿದ್ದಿಲ್ಲ. ಆದರೆ ಅವನು ಆಗುವದಿಲ್ಲವೆಂದು ಹೇಳಿ
ಪುಟ:ಶಕ್ತಿಮಾಯಿ.djvu/೧೫೨
ಗೋಚರ