ಪುಟ:ಶಕ್ತಿಮಾಯಿ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ 4. ಚಂದ್ರ, ತಂತ್ರ ಹೆಚ್ಚಾಗಹತ್ತಿತ್ತು, ಆಗ ಆ ಕಾರಾಗಾರದ ಒಂದು ಮೂಲೆ ಯಲ್ಲಿ ಕುಳಿತು ತನ್ನ ಭಾವೀ ಜೀವಿತದ ಬಗ್ಗೆ ಒಂದೇಸವನೆ ಚಿಂತಿಸಿ ಬೇಸತ್ತಿದ್ದರಿಂದ ಗಣೇಶದೇವನಿಗೆ ಆರ್ಧ ನಿದ್ದೆ-ಅರ್ಧ ಎಚ್ಚರಿಕೆ ಈ ಪ್ರಕಾರದತಂದ್ರಾವಸ್ಥೆಯು ಪ್ರಾಪ್ತವಾದಂತಾಗಿತ್ತು. ಅದರಿಂದ ಶಕ್ತಿ ಯು ತನ್ನ ಬಳಿಗೆ ಬಂದರೂ ಅವನು ಎಚ್ಚರ ಹೊಂದಲಿಲ್ಲ. ಆದರೆ ಶ ಕ್ರಿಮಯಿಯು ಬಂದುನಿಂತು ಸೇವಕನಿಗೆ ದೀಪ ತರಹೇಳಿದ್ದೊಂದೇ ತಡ, ಗಣೇಶದೇವನು ಸಂಪೂರ್ಣ ಭಾನವುಳ್ಳವನಾಗಿ ಎದ್ದು ಕುಳಿತು ಒಸ್ಮಯ ಚಕಿತ ಸ್ವರದಿಂದ'ಶಕ್ತಿ' ಎಂದು ಕೂಗಿದನು. ಆ ಅರ್ಧ ಎಚ್ಚರಿಕೆಯ ಅವಸ್ಥೆಯಲ್ಲಿಯೂ ಅವನಿಗೆ ಶಕ್ತಿಮಯಿಯ ಧನಿ ಯ ಗುರುತು ಹತ್ತಿತು. ಶಕ್ತಿಯು ಕಠೋರ ಸ್ವರದಿಂದ ಕೂಡಲೆ ನು ಡಿದಳೇನಂದರೆ_"ಶಕ್ತಿಯಲ್ಲ; ಸುಲ್ತಾನೆಯು!” ಬಳಿಕ ಕೆಲಹೊತ್ತಿನವರೆಗೆ ಶಕ್ತಿಯು ಏನನ್ನೂ ಮಾತಾಡಲಿಲ್ಲ. ಸುಮ್ಮನೆ ನಿಂತು ಆ ಕಗ್ಗತ್ತಲೆಯಲ್ಲಿ ಗಣೇಶದೇವನ ಕಣ್ಣ ಗೊಂಬೆಗೆ ಆ ಹೊಯ್ದಾಟವನ್ನು ನೋಡುತ್ತ, ತನ್ನ ಮಾತಿನ ಪರಿಣಾಮವು ಅವನ ಮೇಲೆ ಎಷ್ಟರಮಟ್ಟಿಗೆ ಆಗಿದೆಯೆಂಬದನ್ನು ಪರೀಕ್ಷಿಸ ತೊಡಗಿದಳು. ಅಷ್ಟರಲ್ಲಿ ದ್ವಾರಪಾಲಕನು ದೀಪವನ್ನು ಒಳಗೆ ಇರಿಸಿ ಬಾಗಿಲವನ್ನಿಕ್ಕಿ ಕೊಂಡು ಹೋದನು. ಕೂಡಲೆ ಗಣೇಶದೇವನು ಶಕ್ತಿಮಯಿಗೆ ಸುಸ್ತ ಷ್ಟವಾಗಿ ಕಾಣಿಸಹತ್ತಿದನು. ಆದರೆ ಆಗಿನ ಆ ಗಣೇಶದೇವನ ಮೂರ್ತಿ ಯನ್ನು ಕಂಡು ಇಷ್ಟು ದಿನಗಳವರೆಗೆ ತಾನು ತನ್ನ ಮನಸ್ಸಿನಲ್ಲಿರಿಸಿ ಕೊಂಡಿದ್ದ ಗಣೇಶದೇವನ ರೂಪವಿಲ್ಲವೆಂದು ಅವಳು ತಿಳಿದಳು; ಈ ಗಣೇಶದೇವನು ತನ್ನ ಮನೋಮೂರ್ತಿಯಂತೆ ರಾಜಭೂಷಣಗಳಿಂದ ಆಲಂಕೃತನಾಗಿ ಅನುಪಮೇಯಕಾಂತಿಯಿಂದ ಮೋಹಕನಾಗಿರುವದಿಲ್ಲ. ಹರಕ ಹಾಗೂ ಮಾಸಿದ ವಸ್ತ್ರಗಳನ್ನು ಧರಸಿದವನೂ, ಕೊರಚರಂಥ ಮಾಸಿದ ಉದ್ದನ್ನ ಜಟೆಗಳುಳ್ಳವನೂ, ಸೊರಗಿ ಬಾಗಿದ ಕಾಂತಿಹೀನ