ಪುಟ:ಶಕ್ತಿಮಾಯಿ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುಯಿ, ೧೫೬ ಕೋಣೆಯಲ್ಲಿ ಪ್ರವೇಶಿಸಿ ಕಾವಲುಗಾರರಿಗೆ ಹೋಗಲಿಕ್ಕೆ ಹೇಳಿದಳು, ಕುತುಬನು ಶಕ್ತಿಮಯಿಯನ್ನು ಆ ಜೇಲಖಾನೆಗೆ ಕಳಿಸಿ, ಕಾವಲುಗಾರರಿಗೆ ಆಕೆಯು ಹೊರಗೆ ಬಂದ ಬಳಿಕ ಎತ್ತ ಹೋಗುವ ಳು, ಏನು ಮಾಡುವಳು ಮುಂತಾದ್ದನ್ನು ಲಕ್ಷ ಕೊಟ್ಟು ನೋಡಲಿಕ್ಕೆ ಹೇಳಿ, ಹಾಗು ಅವಳ ಆ ಸಂಗತಿಯನ್ನು ಆಗಾಗ್ಗೆ ತನ್ನ ಬಿಡಾರಕ್ಕೆ ತಿಳಿಸಲಿಕ್ಕೆ ಕಟ್ಟಪ್ಪಣೆಮಾಡಿ ನಡೆದನು. ಬಳಿಕ ಅವನು ತನ್ನ ಜಾಲವನ್ನು ಗಾಯಸುದ್ದೀನನ ಮೇಲೆ ಚೆಲ್ಲಿ, ಅವನಲ್ಲಿ ಶಕ್ತಿಯ ವಿಷಯವಾಗಿ ಸಂಶಯಪಿಶಾಚವು ಹುಟ್ಟುವಂತೆ ಪ್ರಯತ್ನಿಸಲುದ್ಯುಕ್ತನಾದನು. ಹದಿನಾರನೆಯ ಪ್ರಕರಣ >>% ಸನ್ಯಾಸಿನೀ ತಥಾಸ್ತು !

    • ಕಾರಾಗೃಹವನ್ನು ಹೊಕ್ಕ ಕೂಡಲೆ ಅಲ್ಲಿಯ ಆ ಘನವಾದ ಅಂಧಃಕಾರದಲ್ಲಿ ಶಕ್ತಿಮಯಿಗೇನೂ ಕಾಣಿಸಲೊಲ್ಲದು. ಆಗ ಅವ ಳು ಕಾವಲುಗಾರನಿಗೆ ದೀಪ ತರಹೇಳಿ, ಅವನು ಅದನ್ನು ತರುವವರೆಗೆ ಬಾಗಿಲಲ್ಲಿಯೇ ಕಣ್ಣು ಮುಟ್ಟಿ ನಿಂತು ಕೊಂಡಳು. ಅರಕ್ಷಣದಲ್ಲಿ ಸೇ ವಕನು ದೂರದಿಂದ ದೀಪ ತರಹತ್ತಿದನು. ಆ ದೀಪದ ಬೆಳಕು ಆ ಕ ಣೆಯ ಕಿಟಕಿಯ ಕಿಂಡಿಗಳೊಳಗಿಂದ ಒಳಗೆ ಬೀಳಲು, ಶಕ್ತಿಮಯಿಯು ತನ್ನ ದೃಷ್ಟಿಯ ಕಿರಣಗಳನ್ನು ಆ ದೀಪದ ಕಿರಣಗಳೊಡನೆ ಆ ಕೋಣೆ ತುಂಬ ಪಸರಿಸಿ ತನ್ನ ಪ್ರಿಯ ಬಾಲ್ಯಸಖನಾದ ಗಣೇಕದೇವನನ್ನು ಶೋಧಿ" ಸಲಿಕ್ಕೆ ಆತುರ ಪಡಹತ್ತಿದಳು. ಆಗ ಮಧ್ಯ ರಾತ್ರಿಯು ಮೀರಿತ್ತು; ಮೂರನೆಯ ಜಾವದ ಆ ರಾತ್ರಿಯಲ್ಲಿ ನಸುಗಾಳಿಯಿಂದ ಎಲ್ಲ ಕಡೆಗೂ