ಪುಟ:ಶಕ್ತಿಮಾಯಿ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ ೬೩ ಆದರೂ ಸೇನಾಪತಿಯು ನಿಮಗೆ ದಂಡಿಸಬಂದರೆ ನೀವು ಅವನ ದಂಡಿ ನೊಳಗಿನ ಚಾಕರಿಯನ್ನು ಬಿಟ್ಟು ನನ್ನ ಬಳಿಗೆ ಬರಿ. ನನ್ನಲ್ಲಿ ನಿಮ್ಮ ನು ಚಾಕರಿಗೆ ಇಟ್ಟು ಕೊಳ್ಳುವನು. ಈಗ ಸೇನಾಪತಿಯು ಎಲ್ಲಿರು ವನು? ನಿಮಗೆ ಗೊತ್ತುಂಟೋ? ಸೈನಿಕರು--ನಮಗೆ ಈಕೆಯನ್ನು ಹಿಡಕೊಂಡು ಹೋಗಲು, ಅಪ್ಪಣೆ ಕೊಟ್ಟು ಸೇನಾಪತಿಯು ಮನೆಗೆ ಹೋದಂತೆ ಕಾಣುತ್ತದೆ. ಬಳಿಕ ಕುವರನು ಯೋಗಿನಿಯನ್ನು ಕರಕೊಂಡು ಕೆಲದಾರೀ ಕ್ರಮಿಸಿದನು. ಆಗ ಅವನು ಯೋಗಿನಿಗೆ-ತಾಯಿ, ನಡೆಯಿರಿನ್ನು ನಿಮ್ಮ ಸ್ಥಾನಕ್ಕೆ ಹೋಗಿ ಸ್ವಸ್ಥವಾಗಿರಿ, ಎಂದು ಹೇಳಿ ತಾನು ತನ್ನ ಬಿಡಾರಕ್ಕೆ ಹೊರಟನು. ಅವನು ತನ್ನ ದಿವಾಣಖಾನೆ ಯನ್ನು ಹೊಕ್ಕು ನೋಡುತ್ತಾನೆ, ಅಲ್ಲಿ ಬಾದಶಹನ ಸೇನಾಪತಿಯಾದ ಆಜೀಮಖಾನನು ಬಂದು ಕುಳಿತಿದ್ದನು. ಸೇನಾಪತಿಯು ಕುಮರ ನಿಗೆ ಬಗ್ಗಿ ಮರು ಮೂರು ಸಾರೆ ಮುಜುರೆ ಮೂಡಿದನು, ಕುಶಲ ವಾರ್ತೆಗಳಾದ ಬಳಿಕ ಕುವರನು-ಯಾಕೆ ಸೇನಾಪತಿಗಳೇ ಇತ್ತ ಯಾವ ಕಡೆಗೆ ಬಂದಿದ್ದೀರಿ? ಎಂದು ಕೇಳಿದನು. ಸೇನಾಪತಿಯಾದ ಆದೇಮಖಾನ,-ಮಹಾರಾಜರೇ, ಬಾದಶ ಹರವರ ಅಪ್ಪಣೆಯ ಮೇರೆಗೆ ತಮ್ಮೆಡೆಗೆ ಬಹು ಅವಸರದ ಕೆಲಸಕ್ಕಾಗಿ ಬಂದಿದ್ದೆನು; ಆದರೆ ಮಹಾರಾಜರು ಮನೆಯಲ್ಲಿದ್ದರಿಂದ ಈ ವರೆಗೆ ದಾರೀಕಾಯುತ್ತ ಇಲ್ಲಿಯೇ ನಿಂತಿರಬೇಕಾಯಿತು. ಮಹಾರಾಜರು ಇಂಥ ನಸರಿನಲ್ಲಿ ಅದಾವ ಕಡೆಗೆ ಹೊರಟಿದ್ದರು? ಕುಮರ-ನಾನು ಸಹಜವಾಗಿ ಮಂದಿರದ ಹೊರಗೆ ಬಂದಿರು ನಿಮ್ಮ ಸೈನಿಕರ ಡಂಗುರವು ಕೇಳಿಸಿತು. ಆಗ ಅದೇನೆಂದು ದಂಡಿನ ಸಮೀಪಕ್ಕೆ ಹೋಗಿ ಕೇಳುತ್ತಿರಲು, ನವಾಬ ಗಾಯಸುದ್ವೀನನು ರಾಜದ್ರೋಹಿಯೆಂದು ತಿಳಿದುದಲ್ಲದೆ, ಪ್ರತಿಬಂಧಿಸಲ್ಪಟ್ಟ ಒಬ್ಬ