ಪುಟ:ಶಕ್ತಿಮಾಯಿ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮ ಶಕ್ತಿಮಯಿ ಆದರೆ ಯಾವ ಕಾರಣದದಿಂದಲೋ ಅವನು ತನ್ನ ಸೇನಾಪತಿಯಾದ ಆಜೀಮಖಾನನಿಗೂ ಸುವರ್ಣ ಗ್ರಾಮದಲ್ಲಿಯೇ ಮನೆಮಾಡಿಕೊಂಡಿರ ಲಿಕ್ಕೆ ಹೇಳಿದ್ದನು. ಈ ಮೇಲೆ ಹೇಳಿದಂತೆ ಗಾಯಸುದ್ದೀನನ ಕಿವಿಗೆ ತಂದೆಯ ಗುಪ್ತ ಆಲೋಚನೆಯು ಬೀಳಲು ಅವನು ಮುಂದೆ ಹೋಗಿ ತಂದೆಗೆ ಭೆಟ್ಟಿ ಯಾಗಲೇ ಇಲ್ಲ. ಸುಮ್ಮನೆ ತನ್ನ ಡೇರೆಗೆ ಬಂದು ಸುವರ್ಣ ಗ್ರಾಮಕ್ಕೆ ಹೊರಡುವ ಸಿದ್ಧತೆಯನ್ನು ನಡೆಸಿದನು. ತನ್ನ ಎಷ್ಟೋ ಸೈನ್ಯಸಾಮಾಂತಾದಿ ಪರಿವಾರವನ್ನು ಅಂದೇ ರಾತ್ರಿ ತನ್ನೂರಿಗೆ ರ ವಾನಿಸಿ ಬಿಟ್ಟನು. ಉಳಿದ ಸೈನ್ಯವನ್ನು ತನ್ನ ಸಂಗಡ ಒಯ್ಯುವ ದಕ್ಕೆ ಸಿದ್ಧಪಡಿಸಿಟ್ಟು ಕೊಂಡು ತನ್ನ ಸ್ನೇಹಿತನಾದ ಕುತುಬನ-ಆದೇ ಮಖಾನನ ತಮ್ಮನ-ಹಾದೀ ನೋಡುತ್ತ ಕುಳಿತನು. ಕುತುಬನು ಬಹು ಬುದ್ದಿವಂತನು, ಸ್ನೇಹಕ್ಕೆ ಯೋಗ್ಯನು, ಅದರಲ್ಲಿಯ ಆತನಲ್ಲಿರತಕ್ಕೆ ಮುಖ್ಯಗುಣವಾದ ಸಮಯೋಚಿತತನವು ಅವನಲ್ಲಿ ಹೆಚ್ಚಾಗಿದ್ದದರಿಂದ ಅವನು ಗಾಯಸುದ್ದೀನನ ಪರಮ ಸ್ನೇಹಿತನಾ ಗಿದ್ದನು. ಗಾಯಸುದ್ದೀನನ ಲಕ್ಷ್ಯವು ಶಕ್ತಿಯ ಕಡೆಗೆ ತಿರುಗಿದೆ ಯೆಂಬದು ಆ ಚಾಣಾಕ್ಷನಿಗೆ ತಿಳಿದ ಕೂಡಲೆ ಅವನು ಅವಳ ಮಟ್ಟ ನ್ನು ಪರೀಕ್ಷಿಸುವುದಕ್ಕಾಗಿ ಕಗ್ಗತ್ತಲೆಯಲ್ಲಿ ಆ ನಟ್ಟಡವಿಯೊಳಗೆ ಹೋಗಿ ಶಕ್ತಿಗೆ ಭೆಟ್ಟಿಯಾದನು. ಹಿಂದೆ ಐದನೆಯ ಪ್ರಕರಣದಲ್ಲಿ ವರ್ಣಿಸಿದಂತೆ ಅಡವಿಯಲ್ಲಿ ಭೋಳೇಬಂದು ಬಿದ್ದದ್ದ ಶಕ್ತಿಯ ಬಳಿಗೆ ಬಂದು ಆಕೆಯೊಡನೆ ಮಾಡಿ ಆಕೆಯ ಇಂಗಿತವನ್ನು ತಿಳಕೊಂಡ ಮುಸಲ್ಮಾನನೇ ಈ ಕುತುಬನು, ಇಂಥ ಸಾಹಸಿಯಾದ ಹಾಗೂ ಯಜಮಾನನ ಕಾರ್ಯವನ್ನು ಕೇವಲ ಮನಮುಟ್ಟಿ ಮಾಡುವ ಕು ತುಬನು ಗಾಯಸುದ್ದೀನನ ಪ್ರಾಣಪದಕವಾದದ್ದರಲ್ಲಿ ಆಶ್ಚರ್ಯ ವೇನು?