ಈ ಪುಟವನ್ನು ಪ್ರಕಟಿಸಲಾಗಿದೆ
೮೮
ಶತಕ ಸಂಪುಟ
|
ಸತ್ವದಿಂದಲಿ೨ ಮಲೆತ೩ ಗಜವ ನಿಲಿಸಿದಡೇನು
ಮತ್ತೆ ಕೇಸರಿಯೊಡನೆ ಕಾದಿ ಜಯಿಸಿದಡೇನು
ಬಿತ್ತರದ ಛಪ್ಪನ್ನ ಭಾಷೆಗಳ ಕಲಿಕಲಿತು ಪ್ರೌಢನಾಗಿರ್ದಡೇನು
ಸತ್ತು ಮರಮರಳಿಸಿ ಹುಟ್ಟುವ ಬಾಧೆಯನು ಕಳೆದು
ನಿತ್ಯ ನಿರ್ಮಲ ನಿಜಾನಂದನಾಗಿರುವ'ಪರ
ಮಾತ್ಮ'ವಿದ್ಯಕ್ಕೆಣೆಯೆ ನಿಜಲಿಂಗ ಭವಭಂಗ ಶರಣಜನವರದ ಜಯತು || ೯೮
|
ಗೋತ್ರಕುಲಜಾತೆಯ ಕಳತ್ರ ಕಮನೀಯ ಚಾ
ಚಿತ್ರ ಚತುರಾಸ್ಯ ಶಿರಪಾತ್ರ ನಿರ್ಮಲ ಧವಳ
ಗಾತ್ರ ನಾರದಸ್ತೋತ್ರ ಮಿತ್ರ ಹರಿಣಾಂಕ ಶಿಖಿನೇತ್ರ ಭವಲತಲವಿತ್ರ
ನೇತ್ರ ಶ್ರವಣಭೂಷ ಶತಪತ್ರಸಖ ಶರಧಿ
ಪುತ್ರಶೇಖರ ಪಂಚವಕ್ತ ಮಾಂ ಪಾಹಿಂ ಲೋ
ಕತ್ರಯಾಧಿಪ ದೇವ ನಿಜಲಿಂಗ ಭವಭಂಗ ಶರಣಜನವರದ ಜಯತು || ೯೯ ||
ರುದ್ರಾಣಿಯರಸ ಕನಕಾದ್ರಿಬಾಣಾಸನ ಸ
ಮುದ್ರಾತ್ಮಭವಮೌಳಿ ಭದ್ರನಾಗಿಹ೧ ವೀರ
ಭದ್ರನಂ ಪಡೆದ ಬಲಭದ್ರ೨ರಾಜಸು೨ಮಿತ್ರ ಕುದ್ರಾಂಧಕಾಸುರಹರ
೩ರುದ್ರನಂ ನಾಕಜೋ೩ಪದ್ರ ಸಂಹರನ ದುರಿ
ತಾಧಿಕುಲಿಶಂ ತುಂಗಭದ್ರತೀರದೊಳೆ ಸೆವ
ಕದುಭವಮರವಾಸ ನಿಜಲಿಂಗ ಭವಭಂಗ ಶರಣಜನವರದ ಜಯತು|| ೧೦೦ ||