‖
ದೇವ ಮಹೇಶ ದೇವ ಗಿರಿಜಾಧಿಪ ದೇವ ಸಮಸ್ತಭಕ್ತಸಂ-
ಜೀವನ ದೇವ ಕಾಮಮದಮರ್ದನ ದೇವ ಹಿರಣ್ಯಗರ್ಭವಿ-
ದ್ರಾವಣ ದೇವ ವಿಷ್ಣುನಯನಾರ್ಚಿತಪಾದಪಯೋಜ ದೇವ ೩ಸಂ-
ಸೇವಿತ ದೇವದೇವ ಮಮ೪ ರಕ್ಷಕ೪ ರಕ್ಷಿಸು ಹಂಪೆಯಾಳ್ದನೇ‖ ೨೪ ‖
ಪುರವಂ ಸುಟ್ಟವನೀತನೀತನೆ ಹರಿಬ್ರಹ್ಮರ್ಗೆ ಸಾಮರ್ಥ್ಯದೊಂ-
ದಿರವಂ ಕೊಟ್ಟವನೀತನೀತನೆ ಮಹೋಗ್ರಾಭೀಳಸರ್ಪಂಗಳಾ-
ಭರಣಂದೊಟ್ಟವನೀತನೀತನೆ ಲಸತ್ ಶೀತಾಂಶುವಂ ಮೌಳಿಯೊಳ್
ಸ್ಥಿರವಾಗಿಟ್ಟವನೀತನೀತನೆ ವಿರೂಪಾಕ್ಷಂ ಲಲಾಟೇಕ್ಷಣಂ
‖ ೨೫ ‖
ಪರಮೇಶ ಪ್ರಭುವೀತನೀತನೆ ನಿಜಂ ನಂಬಿರ್ದ ಭಕ್ತರ್ಗೆ ತ-
ನ್ನಿರವಂ ತೋರುವನೀತನೀತನೆ ಜಗತ್-ಸಂಹಾರವಂ ಮಾಡುವಾ
ಗರಳಂದಾಳ್ದವನೀತನೀತನೆ ಸಗರ್ವಂ ಪೆರ್ಚೆ ವಾಣೀಶನಾ
ಸಿರವಂ ಕೀಳ್ತವನೀತನೀತನೆ ವಿರೂಪಾಕ್ಷಂ ಲಲಾಟೇಕ್ಷಣಂ
‖ ೨೬ ‖
ಸ್ಮರನಂ ನೋಡಿದನೀತನೀತನೆ ಸಮುದ್ಯತ್ಕೋಪದಿಂ ದಕ್ಷನ
ಧ್ವರಮಂ ಸುಟ್ಟವನೀತನೀತನೆ ಕುರುತ್ತೆಯ್ತಂದು ನಿಂದಂಧಕಾ-
ಸುರನಂ ಮೆಟ್ಟಿದನೀತನೀತನೆ ಕರಂ ಬಂದಾರ್ಪಿನಿಂದಂ ಗಜಾ-
ಸುರನಂ ಸೀಳ್ದವನೀತನೀತನೆ ವಿರೂಪಾಕ್ಷಂ ಲಲಾಟೇಕ್ಷಣಂ
‖ ೨೭ ‖
ವಸುಧಾವಂದಿತನೀತನೀತನೆ ಮಹಾನಾಟ್ಯಾಭಿರಂಗಂ ವಿರಾ-
ಜಿಸೆ ನಿಂದಾಡಿದನೀತನೀತನೆ ನಿತಾಂತಂ ಭಕ್ತಯೂಥಕ್ಕೆ ಸಂ-
ತಸಮಂ ಸಾರ್ಚುವನೀತನೀತನೆ ಮುರಾರಿ ಬ್ರಹ್ಮರೊಲ್ದುಲ್ದು ಪೂ-
ಪುಟ:ಶತಕ ಸಂಪುಟ.pdf/೬೫
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೨೫