‖ ೧೮ ‖
ಕೆಯ್ಗೆ ನಮೋ ನಮೋ ಪದೆದು ಕಂಪಿಸುತೀಶ್ವರ ನಿಮ್ಮನರ್ಚಿಪಾ
ಬಾಯ್ಗೆ ನಮೋ ನಮೋ ತೊದಳದುನ್ನತಭಕ್ತಿಯೊಳೆಯ್ದೆ ಪಾಡುವಾ
ಮೆಯ್ಗೆ ನಮೋ ನಮೋ ಪುಳಕಂ ಕೆಲಸಾರ್ಚುತೆ ಸೋಂಕಿ ಪೆರ್ಚುವಾ
ಸುಯ್ಗೆ ನಮೋ ನಮೋ ಬಿಡದ ಲಲ್ಲೆಯ ನೇಹದೆ ಹಂಪೆಯಾಳ್ದನಂ೪॥ ೧೯
‖
ಉಡುವೊಡೆ ಸಂತತಂ ಪುಲಿದೊವಲ್ ನಿಮಗಲ್ಲದೊಡಾ ದಿಗಂಬರಂ
ಪಡುವೊಡೆ ರುದ್ರಭೂಮಿ ನಿಮಗಲ್ಲದೊಡಾ ನಿಗಮೋತ್ತಮಾಂಗಮು-
ಣ್ಬೊಡೆ ವಿಷಮಲ್ಲದಿರ್ದೊಡೆ ಸಮಸ್ತ ಜಗಂ ನಿಮಗೇನನೆಂದಪರ್
ತುಡುವೊಡೆ ಸರ್ಪನಲ್ಲದೊಡೆ ಕುಂಜರಚರ್ಮವೆ ಹಂಪೆಯಾಳ್ದನೇ‖ ೨೦
‖
ವಿನುತ೧ಬ್ರಹ್ಮಾಂಡಮಂ ಪುಟ್ಟಿಪ ಹರಹರ ಪಾಲಿಪ್ಪ ಸಾಮರ್ಥ್ಯರೆಂದೊ೦-
ದಿನಿಸುಂ ಕೊಂಡಾಡಿ ಭಾಪೆಂದಜಹರಿಗಳನಾಂ ಬಣ್ಣಿಸುತ್ತಿರ್ಪೆನೇ ಭೋಂ-
ಕನೆ ನಿಮ್ಮೊಂದಾಜ್ಞೆಯೆನ್ನೀ ಮನಕೆ ಮಸಕದಿಂದಂದು ತೋರಲ್ಕಹೋ ನ-
ಚ್ಚಿನ ವಾಕ್ಯಂ ಮುದ್ರಿಸಲ್ ಸುಮ್ಮನಿರುತೆ೨ ಮರವಟ್ಟೆಂ ವಿರೂಪಾಕ್ಷಲಿಂಗಾ‖ ೨೧
‖
ನವನಿಧಿ ಬಾರ ಪುಣ್ಯನಿಧಿ ಬಾರ ಮಹಾನಿಧಿ ಬಾರ ಭಕ್ತರು-
ತ್ಸವನಿಧಿ ಬಾರ ಭಾಗ್ಯನಿಧಿ ಬಾರ ಸುಧಾರಸಕಾಯಕಾಂತಿಯು-
ದ್ಭವನಿಧಿ ಬಾರ ಸತ್ತ್ವನಿಧಿ ಬಾರ ಕೃಪಾನಿಧಿ ಬಾರ ಸತ್ಯಸಂ-
ಭವನಿಧಿ ಬಾರ ತತ್ತ್ವನಿಧಿ ಬಾರೆಲೆ ಬಾರೆಲೆ ಹಂಪೆಯಾಳ್ದನೇ‖ ೨೨ ‖
ಹರಹರ ಕರ್ಮದೊಳ್ ಬಳಲದಿಂತು ಬರ್ದುಂಕಿದೆನೈ ಸದಾಶಿವಾ
ನರಪರ ಸೇವೆಯೊಳ್ ಕುದಿಯದಿಂತು ಬರ್ದುಂಕಿದೆನೈ, ಮುಖಾರಿಯ-
ಸ್ಥಿರಪರದೈವದೊಳ್ ತೊಡರದಿಂತು ಬರ್ದುಂಕಿದೆನೈ ಮಹೇಶ ಮ-
ದ್ಗುರುವೇ ಪುರಾರಿ ಪೂಜ್ಯನೆ ನಿಜಾಂಘ್ರಿಗೆ ಸಾರ್ಚೆಲೆ ಹಂಪೆಯಾಳ್ದನೇ‖ ೨೩
ಪುಟ:ಶತಕ ಸಂಪುಟ.pdf/೬೪
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೨೪
ಶತಕ ಸಂಪುಟ