ಪುಟ:ಶತಕ ಸಂಪುಟ.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೮

ಶತಕ ಸಂಪುಟ


ಹಣಮಂ ನೆತ್ತರನೇಣಕೋಣಕುರಿಯಂ ಹಾರಾಯುಧಂ ಬೀಳ್ವುದಂ
ಕುಣಬಂ ಲುಬ್ಧಕನಂ ವಿಕಾರತನುವಂ ಮೇವಾಡನುಂ ಪತ್ತುವಂ-
ದಣಮಂ ಕೆಂಪಿನ ಪೂವನೆಣ್ಣೆದಲೆ ನೂತ್ನಾಗಾರಮಂ ದೈತ್ಯರಂ
ಕನಸೊಳ್ ಕಾಣಲುಬಾರದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೮೯ ‖

ಕೊಳನಂ ತಾವರೆಯಂ ತಳಿರ್ತ ವನಮಂ ಪೂದೋಟಮಂ ವಾಜಿಯಂ
ಗಿಳಿಯಂ ಬಾಲಮರಾಳನಂ ಬಸವನಂ ಬೆಳ್ಳಕ್ಕಿಯಂ ಛತ್ರಮಂ
ತಳಿರಂ ಪೂರ್ಣತಟಾಕಮಂ ಭುಜಗನಂ ದೇವರ್ಕಳಂ ತುಂಬಿಯಂ
ತಿಳಿಯಲ್‌ ಸ್ವಪ್ನದಿ ಲೇಸೆಲೈ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೯೦ ‖

ಪಶುಗಳ್ ಕ್ರೂರಮೃಗಂಗಳಂಡಜಗಳುಂ ಸರ್ಪಂಗಳುಂ ಕಣ್ಗೆ ಕಾ-
ಣಿಸಿದತ್ಯುಗ್ರಗ್ರಹಂಗಳುಂ ಪಟುಭಟರ್ ವಿದ್ವಜ್ಜನರ್‌ ಮಂತ್ರಿಗಳ್
ಋಷಿಗಳ್ ಮಿತ್ರರು ಬಂಧುಗಳ್ ಪ್ರಜೆಗಳುಂ ತಾವೆಲ್ಲರುಂ ತಮ್ಮಯಾ
ಶಿಶುವಂ ಪಾಲಿಸದಿರ್ಪರೇ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೯೧ ‖

ರಣದೊಳ್ ಶಕ್ರನ ತೇರನೇರಿದ ಮಹಾಶೈಲಾಳಿ ಬೆಂಬತ್ತೆ ಮಾ-
ರ್ಗಣದಿಂ ಚಿಮ್ಮಿದ ಸಪ್ತಸಾಗರಗಳಂ ದಿಕ್ಕೆಂಟು ಮೂಲೋಕಮಂ
ಕ್ಷಣದೊಳ್ ವೆಚ್ಚವ ಮಾಡಿ ಬೇಡೆ ಬಲಿ ಸಾಲಕ್ಕಂಜಿ ಬಿಟ್ಟೋಡಿದಂ
ಋಣಭಾರಕ್ಕೆಣೆಯಾವುದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೯೨ ‖

ಅಡಿಮೂರೀಯೆನಲೀಯನೆ ಬಲಿನೃಪಂ ಮೂಲೋಕಮಂ ಖಂಡಮಂ
ಕಡಿದೀಯೆಂದೆನೆ ಪಕ್ಕಿಗೀಯನೆ ನೃಪಂ ತನ್ನಂಗದಾದ್ಯಂತಮಂ
ಮೃಡ ಬೇಕೆಂದೆನೆ ಸೀಳ್ದು ತನ್ನ ಸುತನಂ ನೈವೇದ್ಯಮಂ ಮಾಡನೇ
ಕೊಡುವರ್ಗಾವುದು ದೊಡ್ಡಿತೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೯೩ ‖

ಹೊರಬೇಡಂಗಡಿ ಸಾಲವೂರ ಹೊಣೆಯಂ ಪಾಪಂಗಳಂ ನಿಂದೆಯಂ
ಮರೆಬೇಡಾತ್ಮಜ ಸತ್ಕಳತ್ರಸಖರೊಳ್ ನ್ಯಾಯಂಗಳೊಳ್ ಸತ್ಯದೊಳ್
ಸೆರೆಬೇಡಂಗನೆ ಪಕ್ಷಿವೃದ್ಧತರುಣರ್ ಗೋವಿಪ್ರದಾರಿದ್ರರೊಳ್