ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-- ಶಾಕುಂತಲ ನಾಟಕ ನವೀನಟೀಕೆ ୮ & ಸ್ಥಾನದಲ್ಲಿರ್ದುಕೊಂಡು ಅನೇಕವಾಗಿ ಸೇವೆಯ ಮಾಳ ಸ್ತ್ರೀಯರಿಂದ ಧನ ಕನಕ ರತ್ನಭೂಷಣಮೊದಲಾದ ವಿಭವದಿಂ ಕೂಡಿ ದೊರೆತನಕ್ಕೆ ಯೋಗ್ಯವಾದ ಆಯಾಯ ಕಾರ್ಯಗಳಲ್ಲಿ ಒಂದು ಕ್ಷಣವಾದರೂ ಸಾವಕಾಶವಿಲ್ಲದಿರುತ್ತ ಪೂರ್ವದಿಕ್ಕೆ೦ಬ ಸ್ತ್ರೀಯು ಸೂರ್ಯನಂ ಪಡೆಯುವಂತೆ ಪವಿತ್ರ ಕರನಾದ ತೇಜೋವಂ ತನಾದ ನತ್ರನಂ ನಡೆದು ಎನ್ನ ಪ್ರಯೋಗದಿಂದುಂಟಾದ ದುಃಖವಂ ಮಯ ಯುತ್ತಿರುವೆ ಎಂದು ಶಕುಂತಳೆಯ ಮಸ್ತಕ ನಂ ತನ್ನ ಹಸ್ತದಿಂ ನೇವರಿಸು ತಿರಲು ; ಶಕುಂತಳೆಯು ಮರಳಿ ಅವನ ಪಾದಂಗಳಿಗೆ ವಂದನೆಯಂ ಗೆಯ್ಯಲು ; ಮುನಿಯು ನಿನ್ನ ಮನೋರಥವಿದ್ದಂತೆ ನಿನ್ನ ಕಾರ್ಯಗಳೆಲ್ಲಾ ಕೈಗೂ ಡಲಿ ! ” ಎಂದು ಆಶೀರ್ವಾದವಂ ಗೆಯ್ಯಲು , ಶಕುಂತಳೆಯು ತನ್ನ ಸಖಿಯರುಗಳ ಸಮಾಪನಂ ಸೇರಿ, " ಎ ಪ್ರಾಣ ಪ್ರಿಯರುಗಳಿರಾ, ಸೀವೀರ್ವರೂ ಎನ್ನ೦ ಏಕಕಾಲದಲ್ಲಿ ಆಲಿಂಗನಂ ಗೆಯ್ಯುವುದು ) ಎಂದು ನುಡಿಯಲು : - ಸಖಿಯರುಗಳೀರ್ವರು ಅದೇ ರೀತಿಯಿಂದಾಶಕುಂತಳೆಯನ್ನಾ ಲಿಂಗಿಸಿ, * ಎಲ್‌ ಸುಂದರಿಯೇ, ನಿನ್ನ ಪತಿಯಾದ ದುಷ್ಯಂತರಾಯನು ಅನೇಕವಾದ ರಾಜ್ಯ ವಂ ಪರಿಪಾಲನೆಯ೦ ಗೆಯ್ಯುವ ಕಾರ್ಯಗೌರವದಿಂ ಗಾಂಧರ್ವವಿವಾಹದಿಂ ನಿನ್ನ೦ ವಿವಾಹಿತಳಂ ಮಾಡಿಕೊಂಡ ವೃತ್ತಾಂತವಂ ಒಂದುವೇಳೆ ಮರೆತವನಾದರೆ ಅವನ ನಾಮಾಂಕಿತದಿಂ ಯುಕ್ತವಾದ ಈ ಮುದ್ರಿಕೆಯನ್ನಾರಾಯಂಗೆ ತೋx ಸುವುದು ಎಂದಾವುಂಗರವನ್ನಾ ಶಕುಂತಳೆಯ ಹಸ್ತಕ್ಕೆ ಕೊಡಲು ; ಶಕುಂತಳೆಯು_* ಎಲ್ ಸಖಿಯರುಗಳಿರಾ, ಈ ಸಮಯದಲ್ಲಿ ಈ ಮು ದ್ರಿಕೆಯನ್ನಿತ್ತು ಕ್ಷೇಮವನ್ನು ಂಟುಮಾಡಿದಿರಿ. ದೊರೆಯಾದ ದುಷ್ಯಂತರಾಯನು ಬಹುಜನ ಸ್ತ್ರೀಯರಿಗೆ ವಲ್ಲಭನಾದ್ದ«ಂದೊಂದು ಸಮಯದಲ್ಲಿ ಎನ್ನಂ ಮಹಿಳೆ ತತೂ ಮರೆಯಬಹುದು ” ಎನಲು ; ಸಖಿಯರು-_6 ಎಲೆ ಶಕುಂತಳೆಯೇ, ನೀನು ಭಯವಂ ಪೊಂದಬೇಡ. ಲೋಕದಲ್ಲಿ ಅತಿಸ್ನೇಹವು ಎಲ್ಲಿ ಉಂಟಾಗುವುದೋ ಆಸ್ಥಳದಲ್ಲಿ ಮೊದಲು ಕಷ್ಟವ ನೈ ಯೋಚಿಸಬೇಕಾಗಿರುವುದು. ಯಾವುದಿರ್ದರೂ ನಿನ್ನ ತಂದೆಯ ಆಶೀರ್ವಾದ ಪ್ರಭಾವದಿಂ ಶುಭವಾಗುವುದು' ಎಂದು ಮಧುರಾಲಾಪವಂ ಗೆಯ್ಯುತಿರಲು, ಆಷ ತಲ್ಲೇ ಶಾರ್ಬ್ಲರವನ್ನು ಎಲೆ ಶಕುಂತಳೆಯೇ, ನೀನು ಸರ್ವರಿಗೂ