ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆಕೊಂಡು, ಉಚಿತವಾದ ಮಧುರಾಲಾಸದಿಂದೆಲ್ಲ ರಂ ಮನ್ನಿಸಿ ಅಪ್ಪಣೆಯನ್ನಿತ್ತು, ತಾನು ತನ್ನ೦ತಃಪುರಪ್ರವೇಶವಂ ಗೆಯ್ಯು ನವರತ್ನದ ಗೊಂಬೆಗಳಿಂ ಬಿತ್ತರವಾಗಿ ಸುತ್ತುವರಿದ ಮುತ್ತಿನ ಕುಚ್ಚುಗಳಿಂದ ರಮಣೀಯತೆಯಂ ಪೊಂದಿದ ವಜ್ರದ ಸ್ತಂಭ೦ಗಳಿ೦ದಿಂಬುವಡೆದು, ಮೊಲ್ಲೆ ಮಲ್ಲಿಗೆ ಜಾಜಿ ಸೇವಂತಿಗೆ ಮೊದಲಾದ ಪರಿ ಮಳಭರಿತವಾದ ಪುಷ್ಪಮಾಲೆಗಳಿಂ ಮಖ ಲೋಕಸೌಂದರವನ್ನೊಳಗೊಂಡಿರುವ ವಜ್ರದ ಹಜಾರದಲ್ಲಿ ಪವಳದ ಪಾದಗಳಿ೦ ಪರಿಷ್ಕೃತವಾದ ಪೀಠದೊಳು ಕುಳಿತು ನರ್ಮಸಚಿವನಾದ ವಿದೂಷಕನೊಡನೆ ವಿನೋದವಾಕ್ಯವಂ ಪೇಳುತ್ರ ಸಂತುಷ್ಟ ಚಿತ್ತನಾಗಿ ಕುಳಿತಿರಲು ; ಅಷ್ಟ ಅಲ್ಲೇ ಸಂಗೀತಶಾಲೆಯಲ್ಲಿ ಒಂದಾನೊಂದು ಕರ್ಣ ಸುಖವನ್ನುಂಟು ಮಡುವ ಸಂಗೀತವು ಕೇಳಲಾಗಲು ; ವಿದೂಷಕನು ಕಿವಿಗೊಟ್ಟು ಕೇಳಿ * ಎಲೈ ಮಿತ್ರನಾದ ಮಹಾರಾಯನೇ, ಸಂಗೀತಶಾಲೆಯಲ್ಲಿ ಚಿತ್ರ ಮನಿರಿಸುವ ಪಂಚಮ ಸ್ವರದಿಂದಚಿತವಾದ ಗಾನ ಸ್ವರವು ಕೇಳಿ ಬರುವುದು. ಈ ಸ್ವರವಂ ಕೇಳಲು ಹಂಸಪದಿಕೆಯೆಂಬ ಸ್ತ್ರೀಯು ವರ್ಣಗಳ ಪರಿಚಯವಂ ಮಾಡುವಂತೆ ತೋ*ುವುದು. ಎನಲು ; ದುಷ್ಯಂತರಾಯನು ಎಲೈ ವಿದೂಷಕನೇ, ಸದ್ದು ಮಾಡದಿರು. ನಾನು ಈ ಗಾನಸ್ವರದ ಸಂಗತಿಯಚೆನ್ನಾಗಿ ಕೇಳುವೆನು ” ಎಂದು ನುಡಿದು, ನಿಶ್ಚಲ ನಾಗಿ ಕಿವಿಗೊಟ್ಟು - ಎಲೈ ಭ್ರಮರವೇ, ನೀನು ನೂತನವಾದ ಮಕರಂದ ರಸ ದಲ್ಲಿ ಆಸಕ್ತನಾಗಿ, ಮನಬಂದಂತೆ ಮಾವಿನ ಗೊಂಚಲನ್ನು ಚುಂಬನಂಗೆಯ್ದು ಈ ಕಮಲವಾಸದಿಲ ಸಂತುಷ್ಟನಾಗಿ, ಆ ಗೊಂಚಲನ್ನೇನು ಕ- ರಣದಿಂ ಮತಿ ರುವೆಯೋ ತಿಳಿಯದು ” ಎಂದು ಹಾಡುತ್ತಿರುವ ಮಧುರರಾಗದಿಂ ಯುಕ್ತವಾದ ಸಂಗೀತಸ್ವರವಂ ಕೇಳಿ, ಈ ಗೀತವು ಶೋಭನವಾದ ರಾಗಪ್ರವಾಹವನ್ನು ಂಟು ಮಾಡುವುದು ! ” ಎಂದು ಶ್ಲಾಘನೆಯಂ ಗೆಯ್ಯುತ್ತಿರಲು ; ವಿದೂಷಕನು - ಎಲೈ ಮಹಾರಾಜನೇ, ಈ ಗಾನಸ್ವರದ ಮುಖ್ಯಾ ರ್ಥವು ನಿನ್ನ ಮನಕ್ಕೆ ತಿಳಿದುದೋ, ಏನು ? ” ಎಂದು ಕೇಳಲು; ರಾಯನು. ಎಲೈ ವಿದೂಷಕನೇ, ಕೇಳು. ಹಂಸಪದಿಕೆಯೆಂಬ ಸ್ತ್ರೀಯು ತಂಬಿಯ ನೆವಗೆಯು ನಾನು ಒಬ್ಬಾಳೊಬ್ಬ ಸ್ತ್ರೀಯೊಡನೆ ಚುಂಬನಾ ಲಿಂಗನ ಪೂರ್ವಕವಾಗಿ ರತಿಗೆಯು ಈಗ ಅವಳಂ ಮರೆದು ಭೂಮಿಯ ವಿಚಾರಣೆ ಯಲ್ಲಿ ಆಸಕ್ತನಾಗಿರುವನಂತೆ ನಿಂದಿಸಲ್ಪಟ್ಟಿರುವೆನು. ಈಗ ನೀನು ಪೋಗಿ ಆ ಹಂಸ 13