ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

134 ಕರ್ಣಾಟಕ ಕಾವ್ಯಕಲಾನಿಧಿ. - ಹಿತನಾದ್ಧ ಹಿ೦ದಿ೦ತು ಸ್ತೋತ್ರವಂ ಗೆಯ್ಯುವುದು ಯುಕ್ತವಾಗಿರುವುದು. ಆದ ರೂ ನಾನು ಅರಣ್ಯವಾಸಿಯಾಗಿ ರಾಯನ ಹಂಗಿಲ್ಲದೆ ಇದ್ದರೂ ಸೋತ್ರವಂಗೆಯ್ಯ ಬೇಕಾಗಿರುವುದು. ಹೇಗೆಂದರೆ-ಲೋಕದಲ್ಲಿ ವೃಕ್ಷಂಗಳು ಫಲಪುಷ್ಪಂಗಳಿಂ ಪೂರಿತಂಗಳಾಗಿ ಜನೋಪಕಾರಾರ್ಥವಾಗಿ ಬಾಗಿರುವುವು; ಮೇಘಗಳು ನೂತನ ಮಾದ ಜಲವಂ ಪಾನನಂ ಗೈದು ಮಳೆಗರೆಯುವುದಕ್ಕೋಸುಗ ಭೂಮಿಗೆ ದೂರ ದಿಂ ಜೋಲುತ್ತಿರುವುವು; ಸತ್ಪುರುಷರಾದವರು ಅಧಿಕೈಶ್ವತ್ಯದಿಂ ಯುಕ್ತರಾದರೂ ತಮ್ಮ ಮಯ್ಯಾದೆಯಂ ಮಾಂದೆ ಸದ್ದು ಣಾನ್ವಿತರಾಗಿರುವರು. ಹಾಗೆಯೇ ಸರಿ. ಪರೋಪಕಾರಿಗಳಾದ ಮನುಷ್ಯರ ಸ್ವಭಾವವು ಜನಮನೋರಂಜಕವಾಗಿರುವುದು. ಆದ್ದ೦ ಸಮಸ್ತ ಲೋಕಸಂರಕ್ಷಣಾರ್ಥವಾಗಿ ಪುಟ್ಟಿರುವ ಈ ದುಷ್ಯಂತರಾಯನ ಸದ್ಗುಣಂಗಳಂ ವರ್ಣಿಸುವುದಕ್ಕೆ ಅಸಾಧ್ಯ೦ಗಳಾಗಿರುವುದು ' ಎನ್ನ ಲು; ರಾಯನ ಸಮೀಪದಲ್ಲಿರ್ದ ದ್ವಾರಪಾಲಕಸ್ತ್ರೀಯು ಬರುವ ಋಷಿಗಳಂ ಕಂಡು, ಎಲೈ ಸ್ವಾಮಿಯೇ, ಈ ಋಷಿಗಳು ಪ್ರಸನ್ನ ಮುಖರಾಗಿ ಬರುವು ದಳkಇದು ಶುಭವರ್ತಮಾನವ ಪೇಳುವರೆಂದು ತೋಡುವುದು? ಎಂದು ನುಡಿಯve. ರಾಯನು ಆ ಋSHPಮಧ್ಯದಲ್ಲಿ ರಾಜಲಕ್ಷಿಯಂತೆ ಬರುತ್ತಿರುವ ಶಕುಂತಲೆಯಂ ಕಂಡು, ದೂರಾ ಸಋಷಿಯ ಶಾಪಬಲದಿಂ ಆ ಶಕುಂತಲೆಯ ಗುಲಿತಂ ಮ ಕತೆ ತು, ಆ ದ್ವಾರಪಾಲಕಿಯಂ ಕುತು--ಎಲಿ ವೇತ್ರವತಿಯೇ, ಬಿಸಿಲಿಂ ಒಣಗಿ ಬಿ ದ ತಗೆಲೆಯ ನಡುವೆ ತಳತಳಿಸುತ್ತಿರುವ ಚಿಗುರಿನೊ ಪಾದಿಯಲ್ಲಿ ಶುದ್ಘಾ೦ಗರಾದ ಈ ಋಷಿಗಳ ನಡವೆ ಮೇಲುಮುಸುಕಿನಿಂದಳ ವಟ್ಟು ಒಂದು ಮಟ್ಟಾಗಿ ಹೊಸೆಸಸುವ ದೇಹಕಾಂತಿಯುಳ್ಳ ಒಬ್ಬಾಳೊಬ್ಬ ಸ್ತ್ರೀಯು ಬರುತ್ತಿರುವಳು. ಇವಳಾರು? ಎಂದು ನುಡಿಯಲು; ಆ ನೇತ್ರವತಿಯು-I: ಎಲೈ ಸ್ವಾಮಿಯೇ, ಕಾಮಕ್ರೋಧಾದಿಗಳು ಮೊದ ಲಾದ ವಿಷಯಾಸಕ್ತಿಯಂ ಬಿಟ್ಟಿರುವ ಈ ಋಷಿಗಳು ಸ್ತ್ರೀಯನ್ನೊಳಕೊಂಡು ಬರುವುದಿಂದೆನ್ನ ಮನವು ಅತ್ಯಾಶ್ಚರದಿಂ ಯುಕ್ತವಾಗಿರುವುದು. ಆದರೂ ಆ ಸ್ತ್ರೀಯ ಆಕಾರವು ನೋಡುವುದಕ್ಕೆ ರಮಣೀಯವಾಗಿರುವುದು' ಎಂದು ನುಡಿಯಲು; ದುಷ್ಯಂತರಾಜನು- ಎಲೆ ವೆತ್ರವತಿಯೇ, ದೊರೆಯದ ನಾನು ಪರ ಹತ್ತಿ ಯಂ ನೋಡುವುದು ಯುಕ್ತ ಮಲ್ಲ” ಎನಲು;