ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ೧೨೫ ಮಲ್ಲ ಎಂದು ನುಡಿಯುತ್ತಿರುವೆಯಷ್ಟೆ. ಹಾಗಾದರೆ ಪೇಳುವೆನು, ಲೋಕದಲ್ಲಿ ಅವರ ವರ ಜಾತಿಗೆ ಯೋಗ್ಯವಾಗಿರುವ ಕಾಠ್ಯವು ಎಂಥ ದುಷ್ಟವಾದಾಗ್ಯೂ ಬಿಡತಕ್ಕುದಲ್ಲ ವಾಗಿರುವುದು. ಹೇಗಂದರೆ - ಶ್ಲೋತ್ರಿಯನಾದ ಬ್ರಾಹ್ಮಣನು ಯಜ್ಞವಂ ಗೆಯುವ ಕಾಲದಲ್ಲಿ ಪಶುವಧೆಯಂ ಮಾಲ್ಪ ಕಾರದಿಂ ಕ್ರೂರನಾದಾಗ ಸತ್ವರ ದಯಕೆ ಪಾತ್ರನಾಗಿ ಯೋಗ್ಯನಾಗುವುದಕಂದ ಸ್ವಜಾತಿಧರ ವಂ ಬಿಡತಕ್ಕುದು ಯುಕ್ತ ಮಲ್ಲ.” ಎಂದು ನುಡಿಯಲು ; ಆ ಗ್ರಾಮಪಾಲಕನು- ಎಲಾ ಬೆಸ್ತರವನೇ ಅದಂತಿರಲಿ. ಈ ಉಂಗುರವು ನಿನ್ನ ಸಮೀಪಕ್ಕೆ ಬಂದ ಸಂಗತಿಯಂ ಸತ್ಯವಾಗಿ ಹೇಳು” ಎಂದು ನುಡಿಯಲು; ಬೆಸ್ತರವನು- ಎಲೈ ಸ್ವಾಮಿಯೇ, ನಿಶ್ಚಯವಾಗಿ ಆಶಾವತಾರ ತೀರ್ಥದಲ್ಲಿ ಬಲೆಯಂ ಬೀಸಿ ಅನೇಕ ಮತೃಗಳಂ ಪಿಡಿಯುವಲ್ಲಿ ಒಂದು ರಕ್ತವರ್ಣ ಮಾಗಿರ್ದ ಮೀನಂ ಕಂಡು ಆದಂ ಭೇದಿಸಲು ಅದಲಿ ಉದರದಲ್ಲಿ ಈ ರತ್ನಖಚಿತ ಮಾಗಿರ್ದ ಉಂಗುರವಿರಲು, ಇದಂ ನೋಡಿ ಬಡವನಿಗೆ ಭಾಗ್ಯವು ಬಂದಂತೆ ಅತಿ ಸಂತುಷ್ಟನಾಗಿ ಈ ಪುರಕ್ಕೆ ಬಂದು ಇದಂ ವಿಕ್ರಯವಂ ಗೆಯಲೋಸುಗ ವರ್ತಕನಿಗೆ ಮಾಡಿಸುತ್ತಿರುವಲ್ಲಿ ನಿಮ್ಮ ಕೈಗೆ ಸಿಕ್ಕಿದೆನು. ಇದೀಗ ಎನಗೆ ಮುದ್ರೆಯು ದೊರಕಿದ ಸಂಗತಿಯು, ಇನ್ನು ಮೇಲೆ ಎನ್ನು ಸಂರಕ್ಷಿಸಿದರೂ ಸಂರಕ್ಷಿಸಿ, ಇಲ್ಲವಾದಲ್ಲಿ ಸಂಹರಿಸಿದರೂ ಸಂಹರಿಸಿ; ಯಥಾರ್ಥವಾಗಿ ಹೇಳಿರು ವೆನು ಎಂದು ನುಡಿಯಲು ; ಆ ಗ್ರಾಮಪಾಲಕನು «« ಇವನು ಪೇಳುವ ಈ ವಾಕ್ಯವು ಸತ್ಯ ಮಾಗಿ ತೋರುವುದು. ಈ ರತ್ನ ಮುದ್ರಿಕೆಯು ಮತ್ಸಗಂಧವ್ರಳುದಾಗಿರು ವುದು. ಆದ್ದಂದೀ ಉಂಗುರವಂ ತೆಗೆದುಕೊಂಡು ಮಹಾರಾಜನಾದ ದುಷ್ಯಂತ ರಾಯನ ಅರಮನೆಗೆ ಪೋಗಿ ಈ ಮುದ್ರಿಕೆಯ ಸಂಗತಿಯ ವಿಜ್ಞಾಪನೆಯಂ ಗೆಯು ಸ್ವಾಮಿಯಾದವನು ಏನಪ್ಪಣೆಯಯ್ಯುತ್ತಿರುವನೋ ಅದಂ ತೆಗೆದು ಕೊಂಡು ಜಾಗ್ರತೆಯಾಗಿ ಬರುವೆನು. ಅದುವರೆಗೂ ಈ ಬೆಸ್ತರವನಂ ಈ ಕೋಟೆಯ ಬಾಗಿಲಲ್ಲಿ ಜಾಗರೂಕರಾಗಿ ಕಾದುಕೊಂಡಿರುವುದು ' ಎಂದು ಆ ಭಟ ರುಗಳಿಗೆ ಅಪ್ಪಣೆಯನ್ನಿತ್ತು, ದುಷ್ಯಂತರಾಯನ ಸಭಾ ಸ್ಥಾನಕ್ಕೆ ಪೋಗಿ, ಅಲ್ಲಿರ್ದ ವೃದ್ದ ಕಂಚುಕಿಯ೦ ಕರೆದು, ತಾನು ಬಂದಿರುವ ಸಂಗತಿಯಂ ಜಾಗ್ರತೆಯಾಗಿ ರಾಯಂಗೆ ಬಿಸು ಎನಲು; ಆ ಕಂಚುಕಿಯು ಬಂದು-'ಎಲೈ ಮಹಾರಾಯನೇ, ಗ್ರಾಮಾಧಿಪತಿಯು