ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ -ಕರ್ಣಾಟಕ ಕಾವ್ಯಕಲಾನಿಧಿ ಏನೋ ಒಂದು ಕಾರ್ಯವು ವಿಜ್ಞಾಪನೆಯಂಗೆಯ್ಯುವೆನೆಂದು ಬಂದು ಬಾಗಿಲಲ್ಲಿ ಕಾದಿರುವನು ಎನಲು; ಆ ರಾಯನು ಬರಹೇಳುವುದೆಂದು ಅಪ್ಪಣೆಯನ್ನೀಯಲು ; - ಆ ಕಂಚುಕಿಯು ಬಂದು ಆ ಗಾಮಪಾಲಕನ ಕರೆದುಕೊಂಡು ಪೋಗಿ ರಾಯನ ಮುಂಬಾಗದೊಳ್ ಬಿಡಲು : ಆ ಗ್ರಾಮಪಾಲಕನು ದಂಡಾಕಾರವಾಗಿ ನಮಸ್ಕಾರವಂ ಗೆಯ್ತು ರತ್ನ ಮುದ್ರಿ ಕೆಯಂ ರಾಯನ ಸಮೀಪದಲ್ಲಿರಿಸಿ, ಆ ಮುದ್ರಿಕೆಯು ಬಂದ ಸಂಗತಿಯೆಲ್ಲ ಮಂ ಪಾಮಾಗಿ ಬಿನ್ನೆ ಸಲು; ರಾಯನು ಆಉಂಗುರವಂ ನೋಡಿದ ಕ್ಷಣದಲ್ಲಿ ದೂರ್ವಾಸಋಷಿಯ ಶಾಪ ವುತೊಲಗಿ ಶಕುಂತಳೆಯ ಸ್ಮರಣೆಯುಂಟಾಗಲಾಗಿ, ಆ ಉಂಗುರವಂ ಕರದಲ್ಲಿ ಹಿಡಿದು ನೋಡಿ, ಶಕುಂತಳೆಯೊಡನೆ ತಾನು ಮಾಡಿದ ಸಮಸ್ತ ವೃತ್ತಾಂತವಂ ಸ್ಮರಿಸಿ ಕೊಂಡು ಕಂಬನಿಯಂ ಬಿಡುತ್ತಾ, ಗ್ರಾಮಾಧಿಪತಿಯಂ ಕು” ತು, 16 ಎಲೆ ಗ್ರಾಮಪಾಲಕನೇ, ಈ ಉಂಗುರದ ಕ್ರಯಕ್ಕೆ ಸರಿಯಾಗಿ ಬೆಸ್ತರವನಿಗೆ ಹಣ ಕೊಡುವಂತೆ ನನ್ನಾ ಜೈಯಾಗಿರುವುದೆಂದು ಕೋಶಾಧಿಕಾರಿಗೆ ಹೇಳಿ ತೆಗೆದುಕೊಂಡು ಪೋಗುವುದು ಎಂದು ಹೇಳಲು; ಇತ್ತಲು ಆ ಭಟರುಗಳಿಬ್ಬರಲ್ಲಿ ಸೂಚಕನೆಂಬುವನು ಜಾನುಕನಂ ಕು¥' ತು, «« ಎಲೈ ಸ್ನೇಹಿತನೇ, ಒಡೆಯನಾದ ಗ್ರಾಮಾಧಿಪತಿಯು ಮಹಾರಾಜನಾದ ದುಷ್ಯಂತರಾಯನ ಸಭಾಸ್ಥಾನಕ್ಕೆ ಪೋಗಿ ಬಹು ಹೊತ್ತಾದರೂ ಇನ್ನೂ ಸಾವ ಕಾಶವಂ ಮಾಡುವನು ”” ಎಂದು ನುಡಿಯಲು; ಜಾನುಕು-'ಎಲೈ ಸೂಚಕನೇ, ಕೇಳು. ದೊರೆಗಳಾದವರು ಸಮಯವು ತು ಪೋಗುವುದಕ್ಕೆ ಯೋಗ್ಯರಲ್ಲದೆ ಮನಬಂದಂತೆ ಪೋಗುವುದಕ್ಕೆ ಆಗಲಾಚದಾದ್ದರಿ೦ ಸಾವಕಾಶವಾಗಿ ಕಾಣು ವುದು ” ಎಂದು ನುಡಿಯಲಾ ಸೂಚಕನು- ಎಲೆ ಜಾನುಕನೇ ಈಗ ಮುದ್ರಿ ಕೆಯಂ ಕದ್ದಿರುವ ಈ ಬೆಸ್ತರವನಿಗೆ ಮರಣ ಸಮೀಪಿಸಿರುವುದು. ಇವನ ಮರಣ ಕಾಲಕ್ಕೆ ಕಂಠಕ್ಕೆ ಹಾಕುವ ಪುಷ್ಪ ಮಾಲೆಯಂ ಕಟ್ಟುವುದಕ್ಕೆ ಎನ್ನ ಹಸ್ತಂಗಳು ತ್ವರೆ ಪಡುತ್ತಿರುವುವು ” ಎನ್ನಲು ; ಆ ಬೆಸ್ತರವನು, ( ಎಳ್ಳೆ ಭಟಗುಗಳಿರಾ,ಕೇಳಿ, ಮಹಾರಾಜನಾದ ದುಷ್ಯಂ ತರಾಯನು ಚೌರ್ಯ ಮೊದಲಾದ ಅಪರಾಧವೊಂದೂ ಇಲ್ಲದೆ ಅಕಾರಣವಾಗಿ ಒಬ್ಬರಂ ಕೊಲ್ಲಿಸುವುದಲ್ಲಿ ಕಾರಣನಾಗಲಾನು.” ಎಂದು ನುಡಿಯುತ್ತಿರಲು;