ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೦ - ಕರ್ಣಾಟಕ ಕಾವ್ಯಕಲಾನಿಧಿ--- ರಿಸಬೇಕು' ಎಂದು ನುಡಿಯುತ್ತ, ಮುಂಬರಿದು ಬಂದು, ಮುಂಬಾಗದೊಳ್ ಮೊಳ ಕೆದೇವ ಸೀಮಾವಿನ ಕೆಂದಳಿರಂ ನೋಡಿ.. ಈ ಮಾವಿನ ಚಿಗುರು ಕೋಗಿಲೆ ಗಳಿಗೆ ಸಂತೋಷಕಾರಿಯಾಗಿಯ, ವಸಂತಮಾಸಕ್ಕೆ ಪ್ರಾಣರೂಪವಾಗಿಯ, ಸುಗಂಧಭರಿತಮಾಗಿಯ ಇರುವುದರಿ೦ ತುಂಬಿ ಬರುವ ತುಂಬಿಗಳ ಪಾಗೆ ಗಳಿo ಭಗ್ನವಾಗಿ ಷತೃತುಗಳಿಗೂ ಮಂಗಳಸ್ವರೂಪವಾಗಿರುವುದೆಂದು ತಿಳಿಯುವೆನು ಎಂದು ತನ್ನೊಳು ತಾನು ಮಾತನಾಡಿಕೊಳ್ಳುತ್ತಿರಲು; ಸಂಗಡ ಬ೦ದಿರುವ ಮಧುಕರಿಕೆಯೆಂಬ ಸಖಿಯು ಎಲೆ ಪರಬ್ಧತಿಕೆ, ಒಬ್ಬಳೇ ಏನೋ ಒಂದು ವಾಕ್ಯವಂ ನುಡಿಯುತ್ತಿರುವೆ ಎನಲಾಪರಭೌತಿಕೆಯು* ಎಲೆ ಮಧುಕರಿಕೆಯೇ, ಈ ಹೆಣ್ಣು ಕೋಗಿಲೆಯು ಸೀಮಾವಿನ ಮೊಗರುಗಾಯ ನೋಡಿ ಹುಚ್ಚು ಹಿಡಿದಂತೆ ಕುಣಿಯುತ್ತಿರುವದು” ಎನಲಾಮಧುಕರಿಕೆಯು ಜಾ ಗ್ರತೆಯಿಂ ಸಖಿಯ ಸಮೀಪಕ್ಕೆ ಬಂದು- ಎಲೆ ಸಖಿಯೆ, ವಸಂತಕಾಲವು ಪ್ರಾಪ್ತ ಮಾದುದೆ? ?” ಎಂದು ನುಡಿಯಲವಳು.. ಈಗ ವಸಂತಕಾಲವು ಬಂದಿರುವುದು. ನಿನ್ನ ಎಲಾಸಗಾನಕ್ಕೆ ಸಮಯ ದೊರಕಿರುವುದು ” ಎಂದು ನುಡಿಯಲಾ ಮಧು ಕರಿಕೆಯು, ಎಲೆ ಸಖಿಯೇ, ಎನ್ನ೦ ಬೀಳದಂತೆ ಸಿಡಿದುಕೊ, ನಾನು ಕಾಮದೇವನ ಪೂಜೆಗೋಸುಗ ತುದಿಗಾಲಿನಿಂ ನಿಂತು ಸೀಮಾವಿನ ಚಿಗುರು ಕೊಯ್ಯುವೆನು ) ಎಂದು ನುಡಿಯಲು; ಪರಭೌತಿಕೆಯು-1 ಎನಗೂ ಆ ಮನ್ಮಥ ಮಹಾದೇವನ ಪೂಜಾ ಫಲವಂ ಸಂಪಾದಿಸಲಿಕ್ಷೆ ಇರುವುದು ” ಎಂದು ನುಡಿಯಲಾಮಧುಕರಿ ಕೆಯು-1 ಎನಗೆ ಹೇಗೆ ಮನ್ಮಥಪೂಜೆಯಲ್ಲಿ ಬುದ್ದಿ ಪುಟ್ಟಿರುವುದೂ ನಿನಗೂ ಅದೇ ಮೇರೆಗೆ ಇಟ್ಟಿರುವುದಾದ* ನಮ್ಮಿಬ್ಬರಿಗೂ ಮನವೊಂದಾಗಿ ಶರೀರವೆರಡಾಗಿ ರುವದು ” ಎಂದು ನುಡಿದು, ಆ ಪರಬ್ಧತಿಕೆಯ ಅವಲಂಬನವಂ ಗೆಯ್ಯು ಸೀ ಮಾವಿನ ಚಿಗುರಂ ಕೆಯ್ಯುವುದಕ್ಕೆ ಕುಚಂಗಳು ಊರ್ಧ್ವಭಾಗವಂ ಸೇವಂತೆ, ತ್ರಿವಳಿಗಳು ಮರೆಯಾಗುವಂತೆ, ನೀಟವಾದ ದೇಹವು ನೋಟಕ್ಕಾರ್ಯವ ನ್ನುಂಟುಮಾಡುವಂತೆ, ನಿತಂಬಗಳ ಭಾರಕ್ಕೆ ತೊಡೆಗಳಲ್ಲಿ ಕಿಳುನಡುಕವು ಪ್ರಟ್ಟು ವಂತೆ, ತುದಿಗಾಲಿನಿಂ ನಿಂತು... ಎಲೆ ಪರಭೌತಿಕೆಯೇ ಈ ಔತಾಂಕುರವು ಇನ್ನೂ ಚೆನ್ನಾಗಿ ಒಲಿಯದಿದ್ದರೂ ವ್ರತಭೇದವಂ ಗೆಯ್ಯಲು ಅಧಿಕ ಪರಿಮಳವ ನ್ನುಂಟುಮಾಡುತ್ತಿರುವುದು ಎಂದು ನುಡಿದು, ಕಪೋತಹಸ್ತವಂ ಗೆಯ್ಯು, ಆ ಚಿಗು ರಂ ಕರದಲ್ಲಿ ಪಿಡಿದು- ಎಲೈ ಮಾವಿನಚಿಗುರೆ, ನಿನ್ನ ನಾನು ಧನುರ್ಧಾರಿಯಾದ ಮನ್ಮಥನಿಗೆ ಕೊಡುತ್ತಿರುವೆನು, ನೀನು ವಿರಹಿಜನರು ಗಳ ಹೃದಯವೇ ಲಕ್ಷ ವು