ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೦ ಕರ್ಣಾಟಕ ಕಾವ್ಯಕಲಾನಿಧಿ ವೆಂದು ತೋಜುವುದು, ಆದರೆ ಇವನು ಈ ಋಷಿಗಳಿಗೆ ಯೋಗ್ಯವಾದ ತಪೋ ವನದಲ್ಲಿ ವಾಸವಂ ಗೆಯ್ಯುವುದು' ೦ದಿಂತು ನುಡಿದೆನು ಎಂದು ಹೇಳಿ, ಆ ಬಾಲ ಕನ ಕೆಯ್ಯ ಪೀಡಿತವಾದ ಆ ಸಿಂಹದ ಮರಿ' ಯಂ ಬಿಡಿಸಿ, ಆ ಬಾಲಕನ ಮೇ ಯಡವಿ, ಯಾವ ಪುರುಷನ ಕುಲಾಂಕುಗರೂಪವಾದ ಈ ಪುತ್ರನಂ ಮುಟ್ಟಿದ್ದು'೦ ದನ್ನ ಅಂಗಗಳಲ್ಲಿ ಒಂದಾನೊಂದು ಅತಿಶಯವಾದ ಆನಂದ ಪುಟ್ಟುತ್ತಿರುವುದು, ಸುಕೃತಶಾಲಿಯಾದ ಯಾವ ಪುರುಷನಿಗೆ ಇವನು ಸಾಕಾಷ್ಟುತ್ರನೋ ಅವ ನಿಗೆ ಇವನು ಏನು ಸಂತೋಷವನ್ನುಂಟುಮಾಡುವನೋ ತಿಳಿಯದು.” ಎಂದು ತನ್ನ ಮನದಲ್ಲಿ ಆಲೋಚಿಸುತ್ತಿರಲ ; ಆ ಋಷಿಯು ಆ ಬಾಲಕನ ಮುಖವಂ ರಾಯನಂ ಸಹ ನೋಡಿ, ಅತ್ಯಾಶ್ಚರ್ಯವುಂಟಾದುದೆಂದು ನುಡಿಯಲು; ರಾಯನು ಎಲೌ ಪೂಜ್ಯಳೇ, ನಿನಗೆ ಆಶ್ಚರ್ಯವುಂಟಾಗುವುದಕ್ಕೆ ಕಾರಣವೇನು ? ಎನ್ನಲು ; ಆ ಸ್ತ್ರೀಯು ಅಯ್ಯಾ ಪೂಜ್ಯನೇ, ಈ ಪುತ್ರನ ಆಕಾರ ನಿನ್ನ ಆಕಾರ ನೋಡುವವರಿಗೆ ನಿಮ್ಮಿಬ್ಬರಿಗೆ ಏನೋ ಒಂದು ಸಂಬಂಧವಂ ಪೇಳುತ್ತಿರುವುದು, ಅಪರಿಚಿತನಾದರೂ ನಿನ್ನಾ ಕಾರವು ಈ ಪುತ್ರನೊಡನೆ ಸ್ವಲ್ಪವಾದರೂ ತಾರತಮ್ಯ ವಿಲ್ಲದೆ ಇರುವುದ್ದ೦ದ ನಾನು ಆಶ್ವರ್ಯಯುಕ್ತಳಾದೆನು” ಎಂದು ನುಡಿಯಲು; ರಾಯನು ಆ ಕುಮಾರನಂ ಎತ್ತಿಕೊಂಡು ಶಿರಸ್ಸನ್ನಾಘ್ರಾಣಿಸಿ, ಮುಖ ದಲ್ಲಿ ಮುತ್ತಿಟ್ಟು, ಆ ಖಷಿಯಂ ಕು” ತು-- ಎಲ್‌ ಪೂಜ್ಯಳೇ ಈ ಬಾಲ ಕನು ಋಷಿಪುತ್ರನಲ್ಲ ವೆಂದು ಹೇಳುತ್ತಿರುವೆ ಯಷ್ಟೆ. ಹಾಗಾದರೆ ಇವನು ಯಾವ ರಾಜಪುತ್ರನು, ಯಾವ ವಂಶದಲ್ಲಿ ಹುಟ್ಟಿದವನು? ಎಂದು ಕೇಳಲು; ಆ ಸ್ತ್ರೀಯು-ಇವನು ಪುರುವಂಶದಲ್ಲಿ ಪುಟ್ಟಿ ದವನು ಎನ್ನಲು ; ರಾಯನು-- ಎನಗೂ ಈ ಪುತ್ರನಿಗೂ ಒಂದೇ ವಂಶವಾದುದು. ಆದ್ದ ಲಿಂದಲೆ ಈ ಸ್ತ್ರೀಯು ನಮ್ಮಿಬ್ಬರಿಗೂ ಸಮಾನವಾದ ಆಕಾರವುಂಟಾದುದಂದು ನುಡಿಯುತ್ತಿರುವಳು. ಆದರೂ ಪುರುವಂಶದವರ ಮಾಹಾತ್ಮಿಯು ಅತ್ಯಧಿಕವಾ ಗಿರುವುದು ; ಮತ್ತು ಆ ವಂಶದ ರಾಯರುಗಳು ಮೊದಲು ಭೂ ಸಂರಕ್ಷಣೆಯಂ ಗೆಯ್ಯುವುದಕ್ಕೋಸುಗ ಸುಧಾಶುಭ್ರವಾಗಿರುವ ನವರತ್ನಮಯಂಗಳಾದ ಗೃಹಂಗ ಳಲ್ಲಿ ವಾಸವಂ ಗೆಯ್ಯುತ್ತ ಅನೇಕ ಸುಖವನ್ನನುಭವಿಸಿ, ಅನಂತರದಲ್ಲಿ ವನವಾಸವಂ ವ