ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೬ -ಕರ್ಣಾಟಕ ಕಾವ್ಯಕಲಾನಿಧಿ ಉತ್ಪತ್ತಿಗೆ ಕಾರಣನೆಂದು ತಿಳಿ ” ಎಂದು ನುಡಿದು ಅಧಿಕವ್ಯಸನಾತುರಳಾಗಿರಲು ದುಷ್ಯಂತರಾಯನು ಆ ಶಕುಂತಳೆಯ ಪಾದಪದ್ಮಂಗಳಲ್ಲಿ ಬಿದ್ದು - ಪ್ರಾಣ ಕಾಂತೆ, ನಾನು ತಿರಸ್ಕಾರವಂ ಗೆಯ್ಯದಿಂದುಂಟಾದ ಅಪ್ರಿಯವು ನಿನ್ನ ಹೃದಯ ದಿಂ ಬಿಟ್ಟು ಪೋಗಲಿ! ನೀನು ಎನ್ನ ಸಮೀಪವಂ ಕುಳತಿತು ಬಂದಮೇಲೆ ಎನಗೆ ಅಜ್ಞಾನವು ಅತ್ಯಂತ ಬಲವಾಗಿರ್ದುದು. ಮತ್ತೂ ಅಧಿಕಮದ ಅಜ್ಞಾನಯುಕ್ತ ರಾದ ಜನರುಗಳು ಶುಭಕರವಾದ ವಸ್ತುಗಳು ಪ್ರಾಪ್ತವಾದರೂ ತಿರಸ್ಕಾರವಂ ಗೆಯ್ಯುತ್ತಿರುವರು. ಹೇಗೆಂದರೆ:-ಜಾತ್ಯಂಧನು ಶಿರಸ್ಸಿನಲ್ಲಿ ಪರಿಮಳಭರಿತವಾದ ಪುಷ್ಪಮಾಲೆಯಂ ಸರ್ಪವೆಂಬ ಭ್ರಾಂತಿಯಿಂ ತೆಗೆದಿಡುವಂತೆ ಎಂದು ನುಡಿಯಲು; ಶಕುಂತಲೆಯು ಕಂಬನಿಗಳಂ ಬಿಡುತ್ತ ಎಲೈ ಸ್ವಾಮಿಯೇ, ಈಪ್ರಕಾ ರಕ್ಕೆ ಮಾಡದೆ ಇರು” ಎಂದು ನುಡಿದು, “ಆಗ ನಿನ್ನ ಸಂದರ್ಶನಕ್ಕೆ ಬಂದ ದಿವಸ ಗಳಲ್ಲಿ ಎನ್ನ ಪೂರ್ವಾರ್ಜಿತವಾದ ಕರ್ಮವು ಬಲವತ್ತರವಾಗಿ ಶೋಭನವಾದ ಚರಿತ್ರಕ್ಕೆ ಪ್ರತಿಬಂಧಕವಾಗಿರುತಿರ್ದುದು. ಮಹಾತ್ಮನಾದ ನೀನು ಯಾವ ಕಾರಣ ದಿಂ ಎನ್ನ ವಿಷಯದಲ್ಲಿ ಆ ಪ್ರಕಾರಕ್ಕೆ ನಿಷರಹೃದಯನಾದೆಯೋ ಆದ್ದಿ೦ದಲೇ ಎನ್ನ ಕರ್ಮವು ಬಲವತ್ತರವಾದುದಲ್ಲದೆ ನಿನ್ನಿಂದ ಎಳ್ಳೆನಿತಾದರೂ ಅಪರಾಧವಿಲ್ಲ ಎಂದು ನುಡಿಯಲು ; ರಾಯನು ಭೂಮಿಯಿಂದೆದ್ದು ನಿಲ್ಲಲು, ಶಕುಂತಲೆಯು ಎಲೈ ಸ್ವಾಮಿಯೇ, ದುಃಖಪಾತ್ರಳಾದ ಎನ್ನ ಹೇಗೆ ಸ್ಮರಿಸಿಕೊಂಡು ಇಲ್ಲಿಗೆ ಬಂದೆಯೋ ಅದು ಅಪ್ಪಣೆ ಯನ್ನೀಯಬೇಕು, ಎಂದು ವಿಜ್ಞಾಪನೆದುಂ ಗೆಯ್ಯಲು ; ರಾಯನು ಎಲೆ ಬಿಂಬಾಧರೆ, ಕೀಳಲ್ಪಟ್ಟ ವಿಷಾದವೆಂಬ ಶಲ್ಯವುಳ್ಳವ ನಾದ ಮೇಲೆ ಎಲ್ಲ ವಂ ವಿವರಿಸುವೆನು, ಆದರೂ ಎಲೆ ಕೃಶೋದರಿ, ಪೂರ್ವದಲ್ಲಿ ನೇತ್ರಗಳಿ೦ ಬಿದ್ದು ಯಾವ ನಿನ್ನ ಬಿಂಬಾಧರವಂ ಬಾಧಿಸುತ್ತಿರ್ದ ಕಣ್ಣೀರಿನ ಬಿಂದು ಗಳಿ೦ ಅಜ್ಞಾನದಿಂದ ಉಪೇಕ್ಷೆಯಂ ಗೆಯ್ದೆನೋ ಈಗ ನಿನ್ನ ನೇತ್ರಾಂತವಂ ವ್ಯಾಪಿಸಿರುವ ಅದೇ ಕಂಬನಿಗಳಂ ಎನ್ನ ಹಸ್ತಗಳಿಂದೊರಸಿ ಹೋಗಲ್ಪಟ್ಟ ಪಶ್ಚಾ ತಾಪವುಳ್ಳವನಾಗುವೆನು ಎಂದು ಶಕುಂತಲೆಯಂ ತನ್ನ ತೊಡೆಯಲ್ಲಿ ಕುಳ್ಳಿರಿಸಿ, ಮುತ್ತಿನಂತೆ ಅಂಚಿನಲ್ಲಿ ಒಪ್ಪುತ್ತಿರುವ ಕಂಬನಿಗಳಂ ತನ್ನ ದುಕೂಲಾಗ್ರಗಳಿಂ ದೊರಸಿ, ಧಮ್ರವರ್ಣ ವಾಗಿರ್ದರೂ ಕೊಂಕುಗೂಡಿ ಇರುವ ಮುಂಗುರುಳುಗಳಂ ತಿರ್ದಿ ಸರಿಮಾಡುತ್ತಿರಲು;