ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ೧೭೬ ಶಕುಂತಲೆಯು ಪೂರ್ವದಲ್ಲಿ ತನ್ನಿಂ ಪೋಗಿರ್ದ ಮುದ್ರಿಕೆಯಂ ರಾಯನ ಬೆರಳಿನಲ್ಲಿ ಕಂಡು, : ಎಲೈ ಆರ್ಯಪುತ್ರನೇ, ಸ್ವಾಮಿಯೇ, ಪೂರ್ವದಲ್ಲಿ ಎನಗೆ ಕೊಟ್ಟಿರ್ದ ಮುದ್ರಿಕೆಯಲ್ಲವೆ ನಿನ್ನ ಹಸ್ತದಲ್ಲಿರುವುದು?' ಎಂದು ಕೇಳಲು; ರಾಯನು ಸಂಶಯವೇನು? ಆ ಮುದ್ರಿಕೆ ದೊರಕಿರ್ದುದಿ೦ದ ನಿನ್ನ ಸ್ಮರಣೆಯು ಎನಗೆ ಉಂಟಾಯಿ. ತು” ಎಂದು ನುಡಿಯಲು, ಶಕುಂತಲೆಯು ಈ ಮುದ್ರಿಕೆಯು ಆರ್ಯಪುತ್ರನಾದ ನಿನ್ನ ವಿಶ್ವಾಸ ಕಾಲದಲ್ಲಿ ದುರ್ಲಭವಾಗಿ ಸಮಯದಲ್ಲಿ ವಿಷಮವನ್ನು ಂಟುಮಾಡಿದುದು' ಎಂದು ನುಡಿಯಲ.; ದುಷ್ಯಂತರಾಯನು ಎಲೆ ಶಕುಂತಲೆ, ಎಳಬಳ್ಳಿಯು ಋತುಗಳಿಗೆ ಗುಳುತಾಗಿರುವ ಪುಷ್ಪಮಂ ಧರಿಸುವಂತೆ ಈ ಮುದ್ರಿಕೆಯಂ ನೀನು ಧರಿಸು ಎಂದು ನುಡಿಯಲು; ಶಕುಂತಲೆಯು ಎಲೈ ಸ್ವಾಎಯೆ, ಈಯುಂಗರದಲ್ಲಿ ಎನಗೆ ಆಸೆ ಯಿಲ್ಲದೆ ಇರುವುದು, ಮೊದಲು ಧಾರಣೆಯಂ ಮಾಡಿದ್ದ ಅ೦ ದುಃಖಕ್ಕೆ ಕಾರಣ ವಾದುದಾದ್ದ ಅ೦ ನೀನೇ ಧಾರಣೆಯಂ ಗೆಯ್ಯಬಹುದು' ಎಂದು ಬಿನ್ನಿಸುತ್ತಿರು ವಷ್ಟಅಲ್ಲೇ ಕಶ್ಯಪಬ್ರಹ್ಮನ ಸಮಾಜಕ್ಕೆ ಪೋಗಿರ್ದ ಇಂದ್ರಸಾರಥಿಯು ಬಂದು, ಪಪುತ್ರಸಹಿತನಾಗಿರುವ ರಾಯನಂ ನೋಡಿ. ಎಲೈ ಮಹಾರಾಯನೇ, ದೈವಯೋಗದಿಂದೀಗ ಪತ್ನಿಪುತ್ರರಿಂದೊಡಗೂಡಿ ವೃದ್ಧಿ ಯಂ ಪೊಂದುತ್ತಿರುವೆ ಎಂದು ನುಡಿಯಲು; ರಾಯನು--II ಎಲೈ ಮಾತಲಿಯೇ, ನಿನ್ನ೦ಥ ಮಿತ್ರನು ಎನಗೆ ದೊರಕಿದ್ದ ಕ೦ದ ಎನ್ನ ಮನೋರಥವು ಸಫಲವಾದುದು. ಆದರೂ ನಾನೀ ಶಕುಂತಲೆಯೊಡ ಗೂಡಿದ ಸಂತೋಷವರ್ತಮಾನವು ಪೂಜ್ಯನಾದ ಇಂದ್ರನಿಗೆ ತಿಳಿದುದೋ ಏನು? ಎಂದು ಬೆಸಗೊಳ್ಳಲು; ಮಾತಲಿಯು ನಕ್ಕು- ಎಲೈ ಮಹಾರಾಜನೇ, ಅಷ್ಟ ನಕಾಸಿದ್ದಿ ಯಂ ಪಡೆದಿರುವ ಮಹಾಮಹಿಮರಾದವರಿಗೆ ತಿಳಿಯದೆ ಇರುವ ವೃತ್ತಾಂತವೇ ಇಲ್ಲ” , ಎಂದು ನುಡಿದು, « ಈಗ ಮರೀಚ ಪುತ್ರನಾದ ಕಶ್ಯಪಬ್ರಹ್ಮನು ಸಂತುಷ್ಟ ಚಿತ್ರ ನಾಗಿ ಕುಳಿತಿರುವನು. ನೀನು ಪೋದಲ್ಲಿ ದರ್ಶನವನ್ನೀಯುವನು ಎಂದು ನುಡಿಯಲು; 23 S