ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮. - ಕರ್ಣಾಟಕ ಕಾವ್ಯಕಲಾನಿಧಿ * ರಾಯನು- ಎಲೆ ಶಕುಂತಲೆ, ಪುತ್ರನಾದ ಸರ್ವದಮನನಂ ಎತ್ತಿಕೊ, ನಿನ್ನ ಜತೆಯಲ್ಲಿ ಗುರುವಾದ ಕಶ್ಯಪಬ್ರಹ್ಮನ ಸಂದರ್ಶನಕ್ಕೆ ಪೋಗುವೆನು ) ಎನ್ನಲು; ಶಕುಂತಲೆಯು-- ಎಲೈ ಸ್ವಾಮಿಯೇ, ನಿನ್ನಿಂದೊಡಗೂಡಿ ಕಶ್ಯಪಬ್ರಹ್ಮನ ಸಮಾಪಕ್ಕೆ ಪೋಗುವಲ್ಲಿ ಎನಗೆ ಲಜ್ಜೆಯುಂಟಾಗುವುದು ಎನ್ನಲು ರಾಯನು- ಎಲ್‌ ಕಾಂತ, ಈ ಲಜ್ಜೆಯಿಂದ ಪ್ರಯೋಜನವಿಲ್ಲ. ಸಂ ತೋಷ ಕಾಲದಲ್ಲಿ ಗುರುಗಳ ಸನ್ನಿಧಿಗೆ ಪತ್ನಿಪುತ್ರಸಹಿತವಾಗಿ ಪೋಗಬೇಕು ನಡೆ' ಎಂದು ಅವಳಿಂದೊಡಗೂಡಿ, ಆ ಮಹಾಮಹಿಮನಾದ ಕಶ್ಯಪಋಷಿಯ ಸಮಾ ಪವಂ ಕುತು ಪೋಗಲು? Star ಪತ್ನಿ ಯಾದ ಜಡಗೂಡಿ, ಜಟಾಮಂಡಲಮಂಡಿತನಾಗಿ, ತೇಜೋ ರೂಪನಾಗಿ, ವ್ಯಾಘ್ರಾಜೆನಾಸನದಲ್ಲಿ ಕುಳಿತು, ಮುಂಭಾಗದಲ್ಲಿ ಸಪಕನಾಗಿ ಬರುವ ದುಷ್ಯಂತರಾಜನಂ ಕಂಡು, ತನ್ನ ಪತ್ನಿಯಂ ಕುತು, ಎಲ್ ದಕ್ಷ ಪುತ್ರಿಯಾದ ಅದಿತಿಯೇ, ಪುರೋಭಾಗದಲ್ಲಿರುವವನೇ ಸಮಸ್ತ ಭೂಮಂಡಲವೆಂ ರಕ್ಷಿಸುತ್ತ ನಿನ್ನ ಪುತ್ರನಾದ ಇಂದ್ರನಿಗೆ ಯುದ್ಧ ಭೂಮಿಯಲ್ಲಿ ರಾಕ್ಷಸರ ಸಂಹ ರಿಸಿ ಹಿತವನ್ನುಂಟುಮಾಡುತ್ತಿರುವವನು. ಇವನೇ ದುಷ್ಯಂತರಾಯನೆಂಬ ಮಹಾರಾಜನು, ಮತ್ತು ಯಾವ ಈ ದುಷ್ಯಂತರಾಯನ ಧನುಸ್ಸಿನಿಂದಲೇ ಶತ್ರು ನಿಗ್ರಹವಾಗುತ್ತಿರುವಲ್ಲಿ ಶತಧಾರೆಗಳಿಂ ಯುಕ್ತವಾದ ವಜ್ರಾಯುಧವು ಇಂದ್ರನ ಹಸ್ತಕ್ಕೆ ಆಲಂಕಾರವಾಗಿರುವುದಲ್ಲದೆ ಶತ್ರುಸಂಹಾರಕ್ಕೆ ಯೋಗ್ಯವಾಗಲಾರದು ಎಂದು ನುಡಿಯಳು; ಅದಿತಿಯು ಈ ರಾಯನಂ ನೋಡಿದ ಮಾತ್ರದಿಂದಲೆ ಮಹಾ ಪ್ರಭಾ ವಶಾಲಿಯೆಂದು ತಿಳಿಯುವೆನು ” ಎಂದು ನುಡಿಯಲು; ಆ ಮಾತಲಿಯು ಕಶ್ಯಪಖುಷಿಯ ಸಮಾಸಕ್ಕೆ ಮುಂಬರಿದು ಪೋಗಿ ಕಶ್ಯಪ ಬ್ರಹ್ಮನಂ ಅದಿತಿಯಂ ಕುಹತು- ಎಲೈ ದೇವತೆಗಳಿಗೆ ಮಾತಾಪಿತೃಗಳಾದ ಮಹಾಮಹಿಮರುಗಳಿರಾ, ಪುತ್ರ ಪ್ರೇಮವಂ ಸೂಚಿಸುತ್ತಿರುವ ನಿಮ್ಮ ಕೃಪಾ ದೃ ಷ್ಟಿಯಿಂ ಈ ರಾಜದಂಪತಿಗಳನ್ನು ನೋಡಬೇಕು ” ಎಂದು ಬಿನ್ನೆ ಸಲು ;

  • ರಾಯನು ಆ ಕಶ್ಯಪಬ್ರಹ್ಮನಂ ಕಂಡು, “ ಎಲೈ ಮಾತಲಿಯೇ, ಸಮಸ್ತ ರಾದ ಮುನಿಗಳು ಯಾವ ಈ ಅದಿತಿಕಾಶ್ಯಪರೀರ್ವರಂ ದ್ವಾದಶಾದಿತ್ಯರ ಉತ್ಪತ್ತಿಗೆ ಕಾರಣರೆಂದು ಹೇಳುತ್ತಿರುವರೋ, ಮತ್ತು ಸ್ವರ್ಗಮರ್ತ್ಯ'ಪಾತಾಳಂಗಳಿಗೆ ಒಡೆಯ