ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ, ೧೭೯ ನಾಗಿ ಯಜ್ಞಭಾಗಕ್ಕೆ ಅಧೀಶ್ವರನಾದ ಇಂದ್ರನಂ ಪೆತ್ತಿರುವರೋ, ಯಾವ ಇವರೀ ರ್ವರಲ್ಲಿ ಪರಮ ಪುರುಷನಾದ ಮಹಾವಿಷ್ಣುವು ತಾನು ಉಪೇಂದ್ರನಾಗಿ ಪುಟ್ಟುವು ದಕ್ಕೆ ಇ ಜೈಸಿದನೋ, ಚತುರ್ಮುಖಬ್ರಹ್ಮನಿಗೆ ಮೊಮ್ಮಕ್ಕಳಾಗಿ ದಕ್ಷಬ್ರಹ್ಮನಿಂ ಪುಟ್ಟಿದ ಅದಿತಿಯಂ ಮರೀಚಿಖುಷಿಯಿಂ ಪುಟ್ಟಿದ ಕಾಶ್ಯಪಬ್ರಹ್ಮನಂ ಕುತು ನಮಸ್ಕಾರವಂ ಗೆಯ್ಯುವೆ ” ಎಂದು ನುಡಿಯಲು ; ಮಾತಲಿ ಯು" ಮಹಾರಾಜನಾದ ನೀನು ಪೇಳುವ ವಾಕ್ಯವು ಯಥಾ ರ್ಥವೇ ಸರಿ ” ಎಂದು ನುಡಿಯುತ್ತಿರಲು , ರಾಯನು ಮಹಾ ಖುಷಿಯಾದ ಕಶ್ಯಪಬ್ರಹ್ಮನ ಸಮಾಜವಂ ಸೇರಿ, * ಪಪುತ್ರರಿಂದೊಡಗೂಡಿ ಇಂದ್ರನಿಂ ಪ್ರೇರಿತನಾದ ದುಷ್ಯಂತರಾಯನು ನಮ ಸ್ಕಾರವಂ ಗೆಯ್ಯುವನು' ಎಂದು ತನ್ನ ನಾಮಗ್ರಹಣಪೂರ್ವಕವಾಗಿ ಸಾಷ್ಟಾಂಗ ನಮಸ್ಕಾರವಂ ಗೆಯ್ಯಲು : ಕಶ್ಯ ಸಬ್ರಹ್ಮನು... ಎಲೈ ದುಷ್ಯಂತರಾಯನೆ, ನೀನು ಚಿರಂಜೀವಿಯಾಗಿ ಸಮಸ್ತ ಭೂಮಂಡಲವಂ ಪರಿಪಾಲಿಸು ! ” ಎಂದು ಆಶೀರ್ವಾ ದವಂ ಗೆಯ್ಯಲು : ಅದಿತಿಯು ಎಲೈ ರಾಯನೆ, ಭೂಮ್ಯ೦ತರಿಕ್ಷದಲ್ಲಿ ನಿರರ್ಗಳಸಂಚಾರ ವುಳ್ಳ ರಥವಳ್ಳವನಾಗು ಎನಲು :

  • ಶಕುಂತಲೆಯು ಅವರ ಸಮಾಪನಂ ಸೇರಿ, “ ಪೂಜ್ಯರಾದ ನಿಮ್ಮಾರ್ವರಿಗೂ ಪುತ್ರಿಯಾದ ಶಕುಂತಳೆ ಯು ನಮಸ್ಕರಿಸುವಳು ಎಂದು ಸಾಷ್ಟಾಂಗಪ್ರಣಾ ಮ ವಂ ಗೆಯ್ಯಲು ;

- ಕಶ್ಯಪನು- ಎಞ ಪುತ್ರಿಯಾದ ಶಕುಂತಲೆಯೇ, ನಿನ್ನ ಪತಿಯಾದ ಈ ದುಷ್ಯಂತರಾಯನು ಇಂದ್ರನಿಗೆ ಸಮಾನನಾಗಿರುವನು, ನಿನ್ನ ಪುತ್ರನಾದ ಸರ್ವ ದಮನನು ಜಯಂತನಿಗೆ ಸದೃಶನಾಗಿರುವನು ಆದ್ದ¥೦ ನಿನಗೆ ಇನ್ನೊಂದಾಶೀರಾ ದವು ಯೋಗ್ಯವಲ್ಲ ; ಪುಲೋಮ ಪುತ್ರಿಯಾದ ಶಚೀದೇವಿಗೆ ಸಮಾನಳಾಗು : 1) ಎಂದಾಶೀರ್ವಾದವಂ ಗೆಯ್ಯಲು ; ಅದಿತಿಯು ಶಕುಂತಲೆಯಂ ಕುಳಿ ತು- ಎಲ್‌ ಪುತ್ರಿಯಾದ ಶಕುಂತ ಲೆಯೇ, ನೀನು ನಿನ್ನ ಪತಿಯಾದ ಈ ರಾಯನ ಬಹುಮಾನಕ್ಕೆ ಪಾತ್ರಳಾಗು. ನಿನ್ನ ಪುತ್ರನಾದ ಈ ಸರ್ವದಮನನು ನಿನ್ನ ವಂಶಕ್ಕೂ ನಿನ್ನ ಪತಿಯ ವಂಶಕ್ಕೂ ಆನಂದಕರನಾಗಲಿ ! ” ಎಂದು ಆಶೀರ್ವಾದವಂ ಗೆಯ್ಯಲು : ಆ ಕಶ್ಯಪಖುಷಿಯು ಸಮಸ್ತರು ಕುಳಿತುಕೊಳ್ಳುವಂತೆ ಆಜ್ಞೆಯನ್ನೀಯಲು ಅವರೆಲ್ಲರೂ ಆ ಋಷಿಯ ಸಮೀಪದಲ್ಲಿ ಕುಳಿತು ಕೊಳ್ಳಲು ;