ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ ಕಣ್ಣು ಸನ್ನೆ ಗಳಿಂದ ಕರೆದು, ಸಖಿಯರಂ ಕಟ' ತು- ಎಲೌ ಬಾಲೆಯರುಗಳಿರಾ, ಈರಾತ್ರೆಯಲ್ಲಿ ಸವಿನುಡಿಗಳಂ ನುಡಿಯುವುದಕ್ಕೆ, ಸಂಗೀತವಂ ಕೇಳುವುದಕ್ಕೆ, ಆಲಿಂಗ'ನವಂ ಗೆಯುವುದಕ್ಕೆ, ರತಿಕಮತ್ಯಾರಮಂ ತೋರಿಸುವುದಕ್ಕೆ, 'ಎಷ್ಟೆಷ್ಟು ದ್ರವ್ಯವಂ ಒತ್ತೆಗೊಡುವರು ಆದಂ ಮೊದಲೊಳು ವಿಚಾರಿಸಿ ಎಂದು ದೂತಿ ಯರಿಗೆ ಹೇಳುತ್ತಿರುವರು. ಇನ್ನು ಕೆಲವು ವೃದ್ದ ವೇಶಿಯರು ಯವನದಿಂ ಕೊಬ್ಬಿ `ರುವ ತಮ್ಮ ಪುತ್ರಿಯರಂ ಕುಳಿ ತು, (C ಎಕೌ ಬಾಲೆಯರುಗಳಿರಾ, ನೀವು ಉಬ್ಬಿ ಬರುವ ಪ್ರಾಯ ವಂ ತಾಳಲಾ ಕೈದೆ ದ್ರವ್ಯದಲ್ಲಿ ಆಸೆಯಿಲ್ಲದೆ ಮುಂಬರಿದು ಬಂದ ಕಾಮುಕರುಗಳಿಗೆ ಕಾಯವನ್ನೀಯುವುದು ನ್ಯಾಯವಲ್ಲ; ಬ್ರಹ್ಮ ವಿಷ್ಣು ಮೊದ ಲಾದ ದಿಕೃತಿಗಳು ಬಂದರೂ ಅವರ ಐಶ್ವರಕ್ಕೂ ರೂ ಗೂ ಗುಣಕ್ಕೂ ವಿದ್ಯಕ್ಕೂ ಮನಸೋಲದೆ ಉಕ್ಕಿ ಬರುವ ಮೋಹವಂ ತಡೆಗೈದು ವೇಶ್ಯಾಧರ್ಮವಂ ಮಾಕದೆ ದ್ರವ್ಯಾಕರ್ಷಣೋಪಾಯದಲ್ಲಿ ಮನವನ್ನಿಟ್ಟು, ಅವರಿಗೆ ಕಾತರವಂ ಪ್ರಟ್ಟಿಸಿ, ನಿಮ್ಮ ಕಾಣದಿರಲು- ಎನ್ನ ಪ್ರಾಣಗಳು ತಾಣಗೆಡುವುವು, ಯಾವಾಗಲು ಎನ್ನ ಮನವು ನಿನ್ನ ಸಂಗವನ್ನೇ ಬಯಸುವುದೆಂದು ಅವನ ಶಿರವಂ ಪಿಡಿದು ಭಾಷೆಯಂಗೈದು, ನಂಬಿ ಗೆಯಂ ಪಟ್ಟಿ ಸಿ ಮೋಹಸಮುದ್ರಗೊಳ್ಳುಳುಗಿಸಿ, ಅವನಲ್ಲಿರುವ ಯಾವದ್ವಿತವನ್ನ ಸ ಹರಿಸಿ ದರಿದ್ರನಾದನೆಂಬುದಂ ತಿಳಿದು ಮನೆಯ ಬಾಗಿಲಿಗೆ ಬಾರದಂತೆ ಗೌಡಿಯರಿಂ ಓಡಿಸುವ ರೀತಿಯಂ ಮಾಡಬೇಕು. ಎಲ್‌ ಕೋಮಲಾಂಗಿಯರುಗಳಿರಾ, ನಿಮ್ಮ ವನವು ನೀರುಗುಳ್ಳೆಯಂತೆ ನಿತ್ಯವಲ್ಲ ವಾದಕಾರಣ ಯಾವ ಪುರುಷನು ಅಧಿಕದ್ರ ವ್ಯವ ಕೊಡುವನೋ ಅವನೇ ದೇವರು, ಅವನೇ ಪ್ರಿಯನಾಯಕನು, ಅವನೇ ಸಕಲಗುಣವುಳ್ಳವನೆಂದು ಸಮಸೊಪಚಾರವಂಗೈದು ಸಂತೋಷವಂ ಸಲಿಸಬೇಕು? ಎಂದು ತಮ್ಮ ಪ್ರಿಯರಿಗೆ ವೇಶ್ಯಾ ನೀತಿಯಂ ಬೋಧಿಸುತ್ತಿರುವರು. ಮತ್ತು ಆ ಪುರದಲ್ಲಿರುವ ಸಮಸ್ತ ಜನಗಳು ಧನಧಾನ್ಯ ಪುತ್ರಪೌತ್ರ ಸಮ್ಮ ಡ್ಡಿಯಂ ಪಡೆದು, ಆಚಾರಪರರಾಗಿ ಅಸತ್ಯವನ್ನಾಚರಿಸದೆ, ಸ್ವಜಾತಿಧರ್ಮಂಗಳನ್ನ ತಿಕ್ರಮಿಸದೆ, ವಿಪತ್ತುಗಳೆಂಬುದಂ ಸ್ವಪ್ನದಲ್ಲಿಯ ಅಲಿಯದೆ, ಪ್ರಭುವಾದವನಲ್ಲಿ ಭಯಭಕ್ತಿಯುಕ್ತರಾಗಿ, ಪ್ರಭುವಿನ ಶ್ರೇಯಸ್ಸಾಮಿಗಳಾಗಿ, ಪಾಪಭೀತರಾಗಿ, ಪರಸ್ತ್ರೀಪರದ್ರವ್ಯಂಗಳನ್ನೊ೦ದು ವೇಳೆಯಾದರೂ ಕಣ್ಣೆತ್ತಿ ನೋಡದೆ, ನಿರಂತರ . ದಲ್ಲಿಯ ಸಂತುಷ್ಟಹೃದಯರಾಗಿರುವರು. ಇಂತು ಸಸೌಖ್ಯ ಸಂಪೂರ್ಣವಾದ ಆಪ್ರತಿಷ್ಟಾನಪುರವನ್ನಾಳ ಇಲ್ವಲ .ರಾಜಪುತ್ರನಾದ ದುಷ್ಯಂತರಾಯನು ಸತ್ಯಸ್ವರೂಪನಾಗಿ ಧರ್ಮೈಕನಿರತನಾಗಿ