ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೨ -ಕರ್ಣಾಟಕ ಕಾವ್ಯಕಲಾನಿಧಿ ಮಾರೀಚ ಮಹರ್ಷಿಯು_*ಶಕ೦ತಳೆಯೇ, ಕೇಳು. ಈಗ ನಿನ್ನ ಪತಿಯ ಸಂಗದಿಂ ಕೃತಾರ್ಥಳಾದೆ. ಆದರೂ ಈ ಪ್ರಕಾರವಾಗಿ ಎನ್ನು ತಿರಸ್ಕಾರವಂ ಗೆಯನೆಂದು ಮನದಲ್ಲಿ ವಿಷಾದವಂ ಪೊಂದಬೇಡ. ಮತ್ತು ಕನ್ನಡಿಯಲ್ಲಿರ್ದ ಮಾಲಿನ್ಯವು ಪೋದಮೇಲೆ ನಿರ್ಮಲವಾದ ಛಾಯೆಯು ತೊಡುವಂತೆ ಶಾಪದಿಂ ಬಿಡಲ್ಪಟ್ಟ ನಿನ್ನ ಪತಿಯಲ್ಲಿ ನಿನಗೆ ಸಮಸ್ತಸ್ವಾತಂತ್ರ್ಯವುಂಟಾಗುವುದು' ಎನಲು; ರಾಯನು ಕರಗಳು ಮುಗಿದು, ಎಲೈ ಸ್ವಾಮಿಯೇ, ಈ ಶಕುಂ ತಳೆಯು ಎನ್ನ ವಂಶಕ್ಕೆ ಪ್ರತಿಷ್ಠಾ ರೂಪಳೆಂದು ತಿಳಿಯುತ್ತಿರುವೆನು ” ಎನ್ನಲು ; ಮಾರೀಚ ಖುಷಿಯು ಎಲೈ ರಾಯನೇ, ಅದೇ ರೀತಿಯಿಂದೀ ಶಕುಂ ತಳೆಯಂ ತಿಳಿಯುತ್ತಿರುವ ನೀನು ಈ ಪುತ್ರನನ್ನು ಚಕ್ರವರ್ತಿಯಾಗುವನೆಂಬದಾಗಿ ತಿಳಿದುಕೊ, ಮತ್ತು ಈ ಪುತ್ರನು ನಿಮ್ಮೆನ್ನ ತಪ್ರದೇಶವಿಲ್ಲದೆ ಸಮನಾದ ೮೦ತ ರಿಕ್ಷದಲ್ಲಿ ಸಂಚರಿಸುವ ರತ್ನ ಮಯವಾದ ರಥಾರೂಢನಾಗಿ ದಾಟಿಸಲ್ಪಟ್ಟ ಸಪ್ತ ಸಮುದ್ರವುಳ್ಳವನಾಗಿ, ಸಪ್ತದ್ವೀಪವಂ ಜಯಿಸಿ, ಮೃಗಸ೦ಹಾರಿದಿಂದಿಲ್ಲಿ ಉಂಟಾದ ಸರ್ವದಮನನೆಂಬ ನಾಮಧೇಯವಂ ಬಿಟ್ಟು ಸಮಲೋಕಸ೦ರಕ್ಷಣೆಯಿಂ ಭರತ ನೆಂಬ ನಾಮವಂ ಧರಿಸುತ್ತಿರುವನು ” ಎಂದು ಅಪ್ಪಣೆ ಯನ್ನಿಡಲು ; ರಾಯನು ಆಧಿಕಸಂತೋಷಭರಿತನಾಗಿ, “ಎಲೈ ಸ್ವಾಮಿಯೇ, ನೀನು ಪುತ್ರ ನಿಗೆ ಜಾತಕರ ಮೊದಲಾದ ಕರ್ಮಗಳಂ ಮಾಡಿ ಸಂರಕ್ಷಿಸುತ್ತಿರುವೆಯಾದ್ದfo ನೀನು ಆಶೀರ್ವಾದವಂ ಗೆಯ್ದ ಸಮಸ್ತ ಸದ್ಗುಣಂಗಳು ಈ ಪುತ್ರನಲ್ಲುಂಟಾಗುತ್ತಿ ರುವುವೆಂದು ತಿಳಿಯುವೆನು ಎನ್ನಲು ; ಅದಿತಿದೇವಿಯು ಕಶ್ಯಪಬ್ರಹ್ಮನಂ ಕು೫೨ ತು, 66 ಎಲೈ ಸ್ವಾಮಿಯೇ, ಕಣ್ವಮುನೀಶ್ವರನ ಸಮಿಾಪಕ್ಕೆ ನಿನ್ನ ಪುತ್ರಿಯಾದ ಶಕುಂತಳೆಯು ತನ್ನ ಪತಿಯಾದ ದುಷ್ಯಂತರಾಯನೊಡಗೂಡಿ ಸಂತುಷ್ಟಳಾಗಿರುವಳೆಂಬ ವೃತ್ತಾಂತವಂ ಸಮಾಸ ಸ್ಟರಾದ ಶಿಷ್ಯರಿಗೆ ಹೇಳಿ ಕಳುಹಿಸಬಹುದು. ಇವಳ ತಾಯಿಯಾದ ಮೇನಕೆಯು ಎನ್ನ ಸಮೀಪದಲ್ಲೇ ಇರುವಳಾದ್ದರಿಂದೀ ವೃತ್ತಾಂತವು ತಿಳಿದೇ ಇರುವುದು ) ಎನಲು ; ಆ ಶಕುಂತಳೆಯು- ಎನ್ನ ಹೃದಯದಲ್ಲಿರ್ದ ಅಭಿಪ್ರಾಯವನ್ನು ಅದಿತಿ ದೇವಿಯು ಅಪ್ಪಣೆಯನ್ನಿತ್ತಳು ಎಂದು ತನ್ನ ಮನದಲ್ಲಿ ಯೋಚಿಸುತ್ತಿರಲು; ರಾಯನು(ಎಲೈ ಸ್ವಾಮಿಯೇ, ಕಣ್ವಮುನಿಯು ದುರ್ವಾಸಖುಷಿಯ ಶಾಪ ಮೊದಲಾಗಿ ಸಮಸ್ತವಾದ ಈ ವೃತ್ತಾಂತವಂ ಜ್ಞಾನದೃಷ್ಟಿಯಿಂ ತಿಳಿದವ