ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ೧೮೩ ನಾದ್ದಿ೦ದಲೆ ಅವನ ಪುತ್ರಿಯಾದ ಈ ಶಕುಂತಲೆಯಂ ತಿರಸ್ಕರಿಸಿದಾಗ ಎನಗೆ ಶಾಪವನ್ನಿಯಲಿಲ್ಲ ” ಎನಲು; ಕಶ್ಯಪನು- ಎಲೈ ರಾಯನೇ, ಅವನು ತನ್ನ ತಪಃಪ್ರಭಾವದಿಂ ಸಕಲ ಚರ್ಯವಂ ತಿಳಿದವನಾದರೂ ಅವನಿಗೆ ಈ ವೃತ್ತಾಂತವು ಪ್ರೀತಿಕರವಾದುದà2o ನಾವು ಹೇಳಿ ಕಳುಹಿಸಬೇಕು” ಎಂದು ನುಡಿದು ಸಮೀಪದಲ್ಲಿರ್ದ ಶಿಷ್ಯನಂ ಕರೆದು, ಎಲೈ ಗಾಲವನೇ, ನೀನು ಈc.ಕ್ಷಗಮನದಿಂ ಕಣ್ಯಾಶ್ರಮಕ್ಕೆ ಪೋಗಿ ನಿನ್ನ ಪುತ್ರಿಯಾದ ಶಕುಂತಲೆಯು ಸಮಸ್ತ ಶುಭಲಕ್ಷಣಲಕ್ಷಿತನಾದ ಪುತ್ರನಂ ಪಡೆದು ದುರ್ವಾಸಋಷಿಯ ಶಾಪದಿಂ ಬಿಡಲ್ಪಟ್ಟವಳಾಗಿ ಪತಿಯಾದ ದುಷ್ಯಂತ ರಾಯನಿಂದೊಡಗೂಡಿ ಸಂತೋಷಭರಿತಳಾಗಿರುವಳೆಂಬ ಶುಭವಾರ್ತೆಯಂ ಪೇಳಿ ಬರುವುದು' ಎಂದು ಅಪ್ಪಣೆಯನ್ನೀಯಲು; ಗಾಲವನು ಆಜ್ಞೆ ಯಾದಂತೆ ನಡೆದುಕೊಳ್ಳುವೆನೆಂದು ಅಂತರಿಕ್ಷಮಾರ್ಗ ದಲ್ಲಿ ಪೋಗಲು; - ಕಶ್ಯಪನು_ಎಲೈ ಮಹಾರಾಯನೇ, ನೀನು ನಿನ್ನ ಪತ್ನಿಪುತ್ರರಿಂದೊಡ ಗೂಡಿ, ಮಣಿಮಯವಾದ ಇಂದ್ರರಥಾರೋಹಣವಂ ಗೆಯ್ದು ಪ್ರಸಿದ್ಧ ಮಾದ ಪ್ರತಿಷ್ಟಾನಗರವಂ ಕುರಿತು ಪೋಗುವುದು ಎಂದು ಆಜ್ಞೆಯನ್ನೀಯಲು; ರಾಯನು ಪತ್ನಿ ಪುತ್ರರಿಂ ಸಮೇತನಾಗಿ ಆ ಕಶ್ಯಪಬ್ರಹ್ಮನ ಚರಣಾರ ಎಂದಕ್ಕೆ ನಮಸ್ಕಾರವಂ ಗೆಯ್ಯಲು; ಋಷಿಯು~ ಎಲೈ ರಾಯನೇ, ಎನ್ನ ಪುತ್ರನಾದ ದೇವೇಂದ್ರನು ಕಾಲ ಕಾಲದಲ್ಲಿ ಮಳೆಗಳನ್ನು ಂಟು ಮಾಡಿ ಸಮಸ್ತರಾದ ನಿನ್ನ ಪ್ರಜೆಗಳಲ್ಲಿ ಸದಾಸಂತೋ ಷವನ್ನುಂಟುಮಾಡಲಿ; ನೀನು ಅಶ್ವಮೇಧ ವಾಜಪೇಯ ರಾಜಸೂಯ ಪೌಂಡರೀಕ ಮೊದಲಾದ ಯಜ್ಞಗಳಂ ಮಾಡಿ ಸ್ವರ್ಗವಾಸಿಗಳಾದ ದೇವತೆಗಳಿಗೆ ಸಂತೋಷ ವನ್ನುಂಟುಮಾಡು. ಈರೀತಿಯಿಂ ನೀವಿಬ್ಬರೂ ಸ್ವರ್ಗಮರ್ತ್ಯಪಾತಾಳಲೋಕಂ ಗಳಂ ಸಲಹುವುದe'೦ ಶ್ಲಾಘನೀಯವಾದ ಚರ್ಯಂಗಳಿಂ ಅನೇಕ ಯುಗಂಗಳಂ ಕಳೆಯುವುದು ಎಂದು ಆಶೀರ್ವಾದವಂ ವಿರಚಿಸಲು; ರಾಯನು- ಎಲೈ ಸ್ವಾಮಿಯೇ, ತಾವು ಅಪ್ಪಣೆಯನ್ನಿತ್ತಂತೆ ಭಕ್ತಿ ಯುಕ್ತನಾಗಿ, ಶ್ರೇಯಸ್ಕರವಾದ ಕಾರ್ಯಗಳಲ್ಲಿ ಯತ್ನವುಳ್ಳವನಾಗುವೆನು” ಎಂದು ಬಿನ್ನೆಸಲು;