ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕ h& ಓಡುವ ಹುಣ್ಣಿಯಿಂ ನಾವು ಬಹುದೂರವಾಗಿ ಬಂದೆವು. ಈಗಲು ಈ ಮೃಗವು ಕೊಂಕುಗೂಡಿದ ಕತ್ತಿನಿಂ ಮನೋಹರವಾಗಿ, ಬೆಂಬಿಡದೆ ಪೋಗುತ್ತಿರುವ ನಮ್ಮ ರಥವಂ ಬಾರಿಬಾರಿಗೂ ನೋಡುತ್ತ, ಎನ್ನ ಬಾಣಪತನದ ಭಯದಿ೦ ತನ್ನ ಶರೀ ರದ ಮುಂಭಾಗವು ಹಿಂಭಾಗದಲ್ಲಿ ಅಡಗಿಸಿ, ಓಡುವ ಶ್ರಮದಿಂ ತೆರೆಯಲ್ಪಟ್ಟ ಬಾಯಿ, ಅರ್ಧಚರ್ವಿತವಾಗಿ ಜಾಳ' ದ ದರ್ಭೆಯ ತೃಣದಿಂ ವ್ಯಾಪ್ತವಾದ ಮಾರ್ಗ ವುಳ್ಳುದಾಗಿ, ಅಧಿಕಲಂಘನೆಯಿಂದಾಕಾಶದಲ್ಲಿ ಬಹಳವಾಗಿ ಭೂಮಿಯಲ್ಲಿ ಸ್ವಲ್ಪ ವಾಗಿ ಓಡುತಿರುವುದು ನೋಡು. ಎನ್ನಯ ಪ್ರಯತ್ನವೂ ಈ ಮೃಗವನ್ನನು ಸರಿಸಿ ಪೋಗುವುದ ಉಾದುದಲ್ಲದೆ ಸಂಹರಿಸುವ ದಳ ಲ್ಲಾಗಲಿಲ್ಲ” ವೇದು ನುಡಿ ಯಲಾಸಾರಥಿಯು ( ಎಲೈ ಸ್ವಾಮಿಯೇ ಹಳ್ಳತಿಟ್ಟು ಭೂಮಿಯಾದುದಲ್ಲ.'ದ ನಾನು ಅಶ್ವರಜ್ಜುಗಳಂ ಸಿರೋಧವಂ ಗೆಯ್ಯಲು ರಥವು ಜಾಗ್ರತೆಯಾಗಿ ಪೋಗ ದಾದುದ೬೦ ಮೃಗಕ್ಕೂ ನಮಗೂ ಬಹಳ ದೂರಮಾದುದು. ಈಗ ಸಮಪ್ರದೇ ಕಕ್ಕೆ ಬಂದಿರುವ ನಿನಗೆ ಈಮೃಗವು ಸುಲಭಸಾಧ್ಯವಾಗುವುದು.” ಎಂದು ನುಡಿ ಯಲಾದುಷ್ಯಂತರಾಯನು ಜಾಗ್ರತೆಯಿಂದ ರಥವು ನಡೆಸುವಂತೆ ಆಜ್ಞೆಯನ್ನೇ ಯಲಾಸಾರಥಿಯು ಆ ರಾಯನ ಆಜ್ಞಾನುಸಾರವಾಗಿ ಅಧಿಕ ವೇಗದಿಂದ ರಥವಂ ನಡೆಸುತ್ತ ರಾಯನಂ ಕುತು.'ಎಲೈ ಸ್ವಾಮಿಯೇ, ಈಶ್ವರಟ್ಟುಗಳಂ ಸಡಿಲವಂ ಗೆಯ್ಯಲಾಗಿ ಬಹುನೀಟವಾದ ಕಾಯಂಗಳಿ, ಶಿರಸ್ಸಿನಲ್ಲಿ ಕದಲದೆ ಒಪ್ಪ ತಿರುವ ಚವರಿಯ ಕೊನೆಗಳಿ೦, ಚಂಚಲವಿಲ್ಲದೆ ಜತೆಗೊಳಿಸಿರುವ ನೀಟವಾದ ಕರ್ಣ ಗಳಿಂ ಯುಕ್ತವಾದ ರಥಾಶ್ವಂಗಳು ತಮ್ಮ ಖುರಪ್ರಟದಿಂದೇಳೋ ಧೂಳುಗಳಿಂದ ದಾಟುವುದಕ್ಕೆ ಅಸಾಧ್ಯಂಗಳಗಿ ಮುಂಗಡೆಯಲ್ಲಿ ಪೋಗುವ ಮೃಗವೇಗವಂ ಸಹಿ ಸಲಾಕವೋ ಎಂಬಂತೆ ಅತಿವೇಗದಿಂ ಪೋಗುತಿರುವವು. ಆವಂ ನೋಡು ” ಎಂದು ನುಡಿಯಲಾವಾಕ್ಯವಂ ಕೇಳ ರಾಯನು ” ಎಲೈ ಸಾರಥಿಯೇ, ನೀನು ಪೇಳ ವಾಕ್ಯವು ಯಥಾರ್ಥವೇ ಸರಿ. ಈಕುದುರೆಗಳು ಹೊರಾಂಗಳ ಮಾಜಿ ದುವಾಗಿ ತೋಕ ವುವು. ಹೇಗೆಂದರೆ-ಯಾವ ಪದಾರ್ಥವ ದೂರದಲ್ಲಿ ಎನ್ನ ದೃಷ್ಟಿಗೆ ಸ್ವಲ್ಪವಾಗಿ ಕಾಣುವುದೋ ಅದು ಜಾಗ್ರತೆಯಾಗಿ ವಿಶಾಲಾವಾಗುವುದು. ಯಾವ ಮಾರ್ಗ ಮೊದಲಾದ ವಸ್ತುಗಳು ಅರ್ಧದಲ್ಲಿ ತುಂಡುಗೈ ದಂತೆ ತೋಕವುವೋ ಅವು ಒಂದು ನಿಮಿಷದಲ್ಲಿ ಕೂಡಿದಂತೆ ಕಾಣುವುವು. ಯಾವ ಪದಾರ್ಥವು ಸ್ವಭಾವಮಾಗಿ ಡೊಂ ಕಾಗಿ ತೋ೬ುವುದೋ ಅದು ಆಕ್ಷಣದಲ್ಲಿ ಸಮರೇಖೆಯುಳ್ಳುದಾಗಿ ತೋಯುವದು. ಈ ರಥದ ಅಧಿಕವೇಗದಿಂ ಎನಗೆ ದೂರವಾಗಿ ವಂದು ವಸ್ತುವೂ ಇಲ್ಲದೆ ಪಾರ್ಶ್ವದಲ್ಲಿ