ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ಕರ್ಣಾಟಕ ಕಾವ್ಯಕಲಾನಿಧಿ ಸೇರಿ ತಮ್ಮ ಜ್ಜೆಯಿಂ ಮೆಲಕುಗಳಂ ಮಾಡಲಿ, ಹಂದಿಗಳು ತಮ್ಮ ಮನಬಂದಂತೆ ಕಟ್ಟೆಗಳಲ್ಲಿರುವ ಕೊನ್ನಾರೆ ಗೆಡ್ಡೆಗಳು ತಮ್ಮ ಮುಖದಿಂದಗೆದು ಭಕ್ಷಿಸಲಿ; ನಾರಿ ಯೊಡನೆ ಸೇರಿರುವ ಎನ್ನ ಧನುಸ್ಸಂ ಒಂದು ಪ್ರದೇಶದಲ್ಲಿರಿಸಿ ವಿಶ್ರಮಿಸಿಕೊಳ್ಳು ವಂತೆ ಮಾಡುವುದು” ಎನಲಾ ಸೇನಾಪತಿಯು ( ಪ್ರಭುವಾದ ತಮ್ಮ ಚಿತ್ರಕ್ಕೆ ಹೇಗೆ ಯುಕ್ತವಾಗಿ ತೋಜುವುದೋ ಆ ಪ್ರಕಾರವಾಗಿ ಆಜ್ಞಾನುಸಾರವಾಗಿ ನಡೆ ದು ಕೊಳ್ಳುವೆನು' ಎಂದು ನುಡಿಯಲಾ ರಾಯನು..'ಎಲೈ ಸೇನಾಪತಿಯೇ, ಮೊದ ಲು ಅರಣ್ಯವಂ ಮುತ್ತಿಗೆಯಂ ಗೆಯ್ಯುವುದಕ್ಕೋಸುಗ ಪೋಗಿದ್ದ ಸೇನಾ ಜನವೆಲ್ಲ ವಂ ಈ ತಪೋವನಕ್ಕೆ ದೂರವಾಗಿಯೇ ಹಿಂದಿರುಗಿ ಹೋಗುವಂತೆ ಮಾಡುವುದು; ಹಾಗ ಲ್ಲದೆ ಈ ತಪೋವನಕ್ಕೆ ಬಾಧೆಯಾದಲ್ಲಿ ಋಷಿಗಳು ಶಾಪವನ್ನೀಯುವರು; ಮತ್ತು ಈ ಋಷಿಗಳು ಶಾಂತಗುಣಪ್ರಧಾನರಾಗಿರ್ದರೂ ಇವರಲ್ಲಿ ಸಮಸ್ತ ಪ್ರಪಂಚಮಂ ದಹಿಸುವುದಕ್ಕೆ ಯೋಗ್ಯವಾದ ಒಂದಾನೊಂದು ತೇಜಸ್ಸು ಇರುವುದು; ಹೇಗೆಂದರೆ:- ಸೂರ್ಯಕಾಂತಶಿಲೆಗಳು ಮುಟ್ಟುವುದಕ್ಕೆ ಯೋಗ್ಯಂಗಳಾಗಿರ್ದರೂ ಅವುಗಳ ಮೇಲೆ ಸೂರ್ಯಕಿರಣಂಗಳು ಬೀಳಲು ಹೇಗೆ ಅಗ್ನಿ ಯನ್ನುಂಟು ಮಾಡುತ್ತಿರುವುವೋ ಅದ ಅಂತ ಅನ್ಯರಿಂದ ಅಪಮಾನಂಗಳುಂಟಾದಲ್ಲಿ ಕೋಪದಿಂ ಶಾಪವನ್ನಿಯವರಾದ ೦ದ ನಮ್ಮ ಸೇನಾಜನಗಳು ವನಕ್ಕೆ ಬಾರದಂತೆ ಮಾಡುವುದು ” ಎಂದು ಅಪ್ಪ ಣೆಯನ್ನಿತ್ತು ಕಳುಹಲು ; ಆ ವಿದೂಷಕನು ಸೇನಾಪತಿಯು ಪೋಗುವುದು ನೋಡಿ, ಆ ಬೇಟೆಯಾಡು ವೆನೆಂಬ ಉತ್ಸಾಹವಾರ್ತೆಯಂ ಬಿಟ್ಟು ದಾಸೀಪುತ್ರನೇ ಪೋಗು ” ಎಂದು ನುಡಿಯು ತಿರಲು; ಆ ರಾಯನು ಸುತ್ತಲೂ ಒತ್ತಿನಲ್ಲಿರ್ದ ಜನರಂ ನೋಡಿ-ನೀವೆಲ್ಲಾ ಬೇಟೆ ಯಾಡುವುದಕ್ಕೆ ಧರಿಸಿರ್ದ ವೇಷವನ್ನಿಳುಹಿ ಅಲ್ಲಲ್ಲಿ ವೃಕ್ಷಂಗಳ ನೆಳಲಿನಲ್ಲಿ ವಿಶ್ರಮಿ ಸಿಕೊಳ್ಳುವುದು ” ಎಂದು ಆಜ್ಞೆಯನ್ನಿತ್ತು ಸಮಸ್ತರಂ ಕಳುಹಲು; ವಿದೂಷಕನು ರಾಯನಂ ಕು ತು- ಎಲೈ ರಾಯನೇ, ನೀನು ಒಂದು ಪ್ರಾ ಣಿಯಿಲ್ಲದಂತೆ ಎಲ್ಲರಂ ಕಳುಹಿಸಿದೆಯಾದ್ದಂ ಮುಂದೆ ಇಲ್ಲಿ ನಾನಾ ವಿಧವಾದ ಬಳ್ಳಿಗಳಿಂ ಸೂರ್ಯಕಿರಣಂಗಳಿಗೆ ಸ್ಥಳವನ್ನೀಯದಂತೆ, ಸುತ್ತುವರಿದು ನೇತ್ರಾನಂದ ವನ್ನುಂಟುಮಾಡುತ್ತಲಿರುವ ಈ ಸಂಪಗೆಯ ವೃಕ್ಷದ ತಂಪಾದ ನೆರಳಿನಲ್ಲಿ ಕುಳಿತು ಕೊಳ್ಳುವುದು; ನಾನು ನಿನ್ನೊಡನೆ ಸುಖದಿಂ ಕುಳಿತು ಕೊಳ್ಳುವೆನು ” ಎಂದು