ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಕಲ್ಲೋಲದ ತೃತೀಯುತರಂಗಂ ಅನಂತರದಲ್ಲಿ ವಿದೂಷಕನು ಪ್ರತಿಷ್ಠಾನನಗರವಂ ಕುಯ ತು ಬಂದು, ರಾಯ ನ ಅಂತಃಪುರವಂ ಪ್ರವೇಶಿಸಿ, ದುಷ್ಯಂತರಾಯನ ಮಾತೃಸನ್ನಿ ಧಿಯಂ ಸೇರಿ, ರಾಯ ನು ಮೃಗಯಾವಿಹಾರವಂ ಗೆಯ್ಯು ಅನೇಕ ದುಷ್ಟ ಮೃಗನಂ ಸಂಹರಿಸಿದ ರೀತಿಯಂ, ಋಷಿಗಳು ಬಂದು-ಯಜ್ಞ ಸಂರಕ್ಷಣೆ ಯಂ ಗೆಯ್ದು ರಾಕ್ಷಸನಿಗ್ರಹವಂ ಮಾಳ್ಳು ದೆಂದು ತನ್ನಾಶ್ರಮಕ್ಕೆ ರಾಯನಂ ಕರೆದು ಕೊಂಡು ಹೋದ ಸಂಗತಿಯನ್ನೆಲ್ಲ ವಂ ವಿಸ್ತಾರವಾಗಿ ಶಕುಂತಲೆಯ ವೃತ್ತಾಂತ ಹೊಳಿತು ಬಿನ್ನೆ ಸುತಿರಲು; ಇತ್ತಲಾದುಷ್ಯಂತರಾಯನು ಆರಾತ್ರಿಯಲ್ಲಿ ತಾನಿರ್ದ ಸ್ಥಾನದಲ್ಲೇ ಇರ್ದು ಪ್ರಾತಃಕಾಲವಾಗಲು ನಿತ್ಯಕರ್ಮಾನುಷ್ಟಾನವಂ ಗೆಯ್ದು ರಥಾರೂಢನಾಗಿ ಕಣ್ಯಾಶ್ರಮಕ್ಕೆ ಪೋಗಲು;

  • ಕಣ್ವಮುನೀಶ್ವರನ ಶಿಷ್ಯರುಗಳು ರಾಯನು ಕಂಡು ಸಂತೋಷಭರಿತರಾಗಿ, Cಅಧಿಕ ಮಾಹಾತ್ಮಿಯುಳ್ಳ ಈ ದುಷ್ಯಂತರಾಯನು ನಮ್ಮ ಶ್ರಮವಂ ಪ್ರವೇ ಶವಂಗೆಯ ಮಾತ್ರದಿಂದಲೇ ನಾವು ಮಾಡುವ ಯಜ್ಞಾದಿಕಾರ್ಯಗಳು ನಿಮ್ಮ ರಹಿತಂಗಳ ದುವು. ಹೀಗಿರುವಲ್ಲಿ ರಾಯನು ಧನುಸ್ಸಿನಲ್ಲಿ ಬಾಣವಂ ಪೂಡಿ, ಶಿಂಜಿನೀ ಧ್ವನಿಯಂ ಗೆದ್ದವನಾದರೆ ಪೇಳತಕ್ಕುದೇನು!” ಎಂದು ಹರ್ಷಾಲಾಪವಂಗೆಯ್ಯುತ, ರಥವನ್ನಿಳಿದು ಪಾದಚಾರಿಯಾಗಿ ಬಂದ ರಾಯಂಗೆ ರಮ್ಯವಾದ ಸ್ಥಾನದಲ್ಲಿ ಪೀಠವ ನಿತ್ತು, ಮಧುಪರ್ಕಾದಿಗಳಿಂದುಪಚರಿಸುತ್ತಿರಲು;

ಅವರಲ್ಲಿ ಯಜ್ಞಕಾರ್ಯವಂ ವಿರಚನೆಯಂ ಗೆಯ್ಯುವುದಕಲ್ಲಿ ಉದ್ಯುಕ್ತನಾ ದೊರ್ವ ಖವಿ ಪುತ್ರನು ದರ್ಭೆಗಳ ತರುವುದಕ್ಕೋಸುಗ ಪೊಲಿಸಾರಿ ಬಂದು, “ಪ್ರಿಯಂವದೆಯೇ, ಲಾವಂಚದ ಗಂಧವಂ ದಂಟಿನೊಡಗೂಡಿದ ತಾವರೆಯೆಲೆಗಳಂ ಯಾತಕ್ಕೋಸುಗ ತೆಗೆದುಕೊಂಡು ಪೋಗುವೆ ? ” ಎನ್ನಲು; ಪ್ರಿಯಂವದೆಯು: ಎಲೈ ಸ್ವಾಮಿಯೇ, ನಮ್ಮಶಕುಂತಲೆಯು ಈ ಬೇಸಿ ಗೆಯ ಬಿಸಿಲನ್ನು ಸಹಿಸಲಾಗಿದೆ ಬಲವಾಗಿ ಸಂತಾಪವಂ ಹೊಂದುತಿರುವಳಾ ದೃ೫.೦ ಶೀತೋಪಚಾರವಂ ಗೆಯ್ಯು ಅವಳ ಶರೀರದ ಸಂತಾಪವು ಪೋಗುವಂತೆ ಮಾಡಲೋಸುಗ ಇವಂ ತೆಗೆದುಕೊಂಡು ಪೋಗುವೆನು” ಎನ್ನಲು;