ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೮ -ಕರ್ಣಾಟಕ ಕಾವ್ಯಕಲಾನಿಧಿ ಆ ರಾಯನು_“ ಪ್ರಿಯಂವದೆಯು ನಿಶ್ಚಯವಾಕ್ಯವಂ ಪೇಳಿರುವಳು. ಹೇಗೆಂ ದರೆ:-ಈ ಶಕುಂತಲೆಯ ಮುಖವು ಅಧಿಕ ಸಂತಾಪದಿಂ ಹೇರಳವಾಗಿ ಕೃಶಂಗ ಳಾದ ಕಪೋಲಂಗಳೆಂ ಯುಕ್ತವಾಗಿರುವುದು. ಇವಳ ವಕ್ಷ%ಳವು ಕ್ರೂರನಾದ ಮಾರನ ತಾಪದಿಂ ಸ್ವಲ್ಪ ಮೃದುವಾದ ಸ್ತನಗಳಿಂದಿಂಬುಗೊಂಡಿರುವುದು. ಇವಳ ನಡುವು ಅತ್ಯಂತ ಕೃಶವಾಗಿ ಪೆರ್ಮೊಲೆಗಳ ಭಾರವಂ ಪೊಲಾ೦ದೆ ಇರುವುದು. ಇವಳ ಭುಜಂಗಳು ಮೊದಲು ಸ್ತನಗಳ ಭಾರಕ್ಕೆ ಒಗ್ಗಿರ್ದರೂ ಈಗ ತಾಪದಿಂ ಬಲಹೀನಂಳಾಗಿರುವುದಿ೦ ಬಹಳವಾಗಿ ಬಗ್ಗಿ ರುವುವು. ಮತ್ತು ಎಲೆಗಳನ್ನು ಉದುರಿಸುವ ವಾಯುಸ್ಪರ್ಶವಂ ಪಡೆದಿರುವ ದುಂಡುಮಲ್ಲಿಗೆಯ ಬಳ್ಳಿಯಂತೆ ಒಂದಾ ನೊಂದು ಬಿಳೇಹದ ಕಾಂತಿಯಿಂ ಯುಕ್ತಳಾಗಿ, ಮನ್ಮಥನಿಂ ತಾಪಯುಕ್ತಳಾಗಿ, ದುಃಖಪಡಿಸುವಳಂತೆಯ ಮನೋಹರಳಾಗಿಯೂ ತೋಡುವಳು ” ಎಂದು ತನ್ನೊಳು ತಾನು ನುಡಿದು ಕೊಳ್ಳುತ್ತಿರಲು ; ಶಕುಂತಲೆಯ. ಎಲ್ ಸಖಿಯರುಗಳಿರಾ, ನಿಮ್ಮನ್ನು ಳಿದು ಅನ್ಯರಾದ ಯಾರಿಗೆ ನಾನು ಎನ್ನ ಸಂತಾಪವನ್ನು ಸಿರುವೆನು. ಆದರೂ ತಾಪವನ್ನುಂಟು ಮಾಡುವಳಾಗುವೆನು ಎಂದು ಎನ್ನಂತರಂಗದ ವೃತ್ತಾಂತವಂ ಪೇಳದೆ ಇರುವೆನು ಎನಲಾಸಖಿಯರೀಶ್ವರು. ಎಲೆ ಶಕುಂತಲೆ, ನೀನು ತಾಪಕ್ಕೆ ಕಾರಣವೇ ಪೇಳದೆ ಇರುವುದಿಂದಲೇ ಇಂತು ಸಂಕಟವನ್ನನುಭವಿಸುತ್ತಿರುವೆ. ಅದಲ್ಲದೆ ನಿನ್ನ ಹೃದಯದಲ್ಲಿರುವುದಂ ಬಹಿರಂಗಕ್ಕೆ ಪ್ರಕಾಶನಂ ಗೆಯ್ದೆ ಯಾದೊಡೆ ಸ್ವಲ್ಪ ಪರಿಹಾರವಾಗಿ ಸಹಿಸತಕ್ಕ ತಾಪವುಳ್ಳವಳಾಗುವೆ' ಎಂದು ನುಡಿಯಲು ; ರಾಯನು ಆಸಖಿಯರೀರ್ವರು ಶಕುಂತಲೆಯೊಡನೆ ಸಲ್ಲಾಪವಂ ಗೆಯ್ಯುವದಂ ಕೇಳಿ, " ಸಮಾನಸುಖದುಃಖವುಳ್ಳ ಅನಸೂಯೆ ಪ್ರಿಯಂವದೆಯರು ಬಾಲೆಯಾದ ಶಕುಂತಲೆಯಂ ತಾಜಕಾರಣವಂ ಕೇಳುತ್ತಿರುವರು. ಅವಳು ತನ್ನ ಮನೋವ್ಯಥೆಗೆ ಕಾರಣಂ ಸಂದೇಹವಿಲ್ಲದೆ ಅವರೊಡನೆ ಪೇಳುವಳು. ನಾನಾದರೋ ಆ ಶಕುಂ ತಲೆಯಿ:o ಅಭಿಲಾಷೆಯು ಯುಕ್ತವಾಗಿರುವಂತೆ ಹಿಂದಿರುಗಿ ನೋಡಲ್ಪಟ್ಟಿರುವೆನು. ಆದರೂ ಅಷ್ಟ ಅಲ್ಲೇ ಎನ್ನ ಅಭಿಲಾಷೆಯಿರುವುದೆಂದು ಹೇಳುವಳೋ ಎಂಬ ವಾಕ್ಯವಂ ಕೇಳಲಿಚ್ಛೆಯುಳ್ಳ ಕಿವಿಗಳಿಂ ಕುತೂಹಲಿಯಾಗಿರುವೆನು ” ಎಂದು ತಿಳಿ ಯುತ್ತಿರಲು ; ಆ ಶಕುಂತಲೆಯು ಲಜ್ಜೆಯಿಂ ಯುಕ್ತಳಾಗಿ, ಪ್ರಾಣಪ್ರಿಯರಾದ ಸಖಿಯರುಗಳಿರಾ, ಈ ತಪೋವನವಂ ಸಂರಕ್ಷಿಸುವೆನೆಂದು ಒಂದ ರಾಜರ್ಷಿ