ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܬ -- ಕರ್ಣಾಟಕ ಕಾವ್ಯಕಲಾನಿಧಿ ನಿನಗೆ ಅನುರಾಗವು ದೈವವಶದಿಂದುಂಟಾಗಿರುವುದು ನಮಗೆಲ್ಲರಿಗೂ ಸಮ್ಮತ ವಾಗಿರುವುದು. ಲೋಕದಲ್ಲಿ ಮಹಾನದಿಗಳು ಸಮುದ್ರವಂ ಬಿಟ್ಟು ಇನ್ನೊ೦ ದಲ್ಲಿ ಹೇಗೆ ಸಂಗಮವಂ ಪೊಂದಲಾಹಿ ವೋ, ದುಂಡುಮಲ್ಲಿಗೆಯ ಬಳ್ಳಿಯು ಸಿಹಿಮಾವಿನ ಮರವಂ ಬಿಟ್ಟು ಇನ್ನೊಂದು ಗಿಡಕ್ಕೆ ಸುತ್ತಿಕೊಂಡು ಹೇಗೆ ಚೆನ್ನಾಗಿ ಪುಷ್ಪಗಳಂ ಬಿಡಲಾಆದೋ-ಹಾಗೆ ನೀನು ನಿನ್ನ ರೂ ಪಿಗೆ 'ಗುಣಕ್ಕೆ ತಕ್ಕಂತೆ ಆ ಮಹಾರಾಜನಾದ ದುಷ್ಯಂತರಾಯನಲ್ಲಿ ಅನುರಕ್ತಳಾದೆ ಎಂದು ಶ್ಲಾಘನೆಯ೦ ಗೆಯಲು ; ಆ ರಾಯನು-ವಿಶಾಖನಕ್ಷತ್ರಂಗಳೆರಡೂ ಚಂದ್ರಲೇಖೆ 'ನ್ನ ನುಸರಿಸು ವಂತೆ ಈ ಅನಸೂಯೆ ಪ್ರಿಯಂವದೆಯರೀಶ್ವರು ಶಕುಂತಲೆಯನ್ನನುಸರಿಸಿ ಮಧು ರೋಕ್ತಿಗಳನ್ನಾಡುತ ಎಡಬಿಡದೆ ಇರುವುದು ಯುಕ್ತವೇ ಸರಿ ಎಂದು ನುಡಿಯು ತಿರಲು ; ಆಅನಸೂಯೆಯು-'ಈಶಕುಂತಲೆಯ ಮನೋಭಿಪ್ರಾಯವಂ ಗೋಪ್ಯವಾಗಿ ಯಾದರೂ ಸಂಪೂರ್ತಿಯ ವಿರಚಿಸುವುಪಾಯಮಂ ಕಾಣೆನು ಎಂದು ನುಡಿ!ಲಾ ಪ್ರಿಯಂವದೆಯು_* ಎಲ್ ಅನಸೂಯೆಯೇ, ಈಗ ಈ ಕಾರ್ಯವ್ರ ಸಾವಕಾಶ ವೆಂದರೆ ಅಧಿಕ ಚಿಂತೆಯುಂಟಾಗುವದು ಶೀಘ್ರವಾಗಿ ಆಗುವುದೆಂದರೆ ಸಂತೋಷವು ತೋಯುವುದು” ಎನಲಾ ಅನಸೂಯೆಯು ಎಲೆ ಪ್ರಿಯಂವದೆ, ಜಾಗ್ರತೆ ಬಾಗಿ ಆಗುವ ಉಪಾಯವು ಹೇಗೆ ತೋಚುವುದು? ಎನಲಾಪ್ರಿಯಂವದೆಯು.. “ಎಲೆ ಅನಸೂಯೆ, ಕೇಳು. ಮೊದಲೇ ಆ ರಾಜಶ್ರೇಷ್ಠನಾದ ದುಷ್ಯಂತರಾಯನು ನಮ್ಮ ಶಕುಂತಲೆಯನ್ನ ನುರಾಗವೂರಿತಮಾದ ದೃಷ್ಟಿಯಿಂ ನೋಡಿ ತನ್ನ ಮನದಲ್ಲಿರ್ದ ಅನುರಾಗವ ಹೊಸೂಸುವಂತೆ ಮಾಡಿರುವನು. ಇಷ್ಟು ದಿವಸದವರೆಗೆ ಆ ರಾಯನು ವಿರಹದಿಂ ಕೃಶನಾಗಿ ಇರಬಹುದು ಎನಲು; ಆ ಪ್ರಿಯಂವದೆಯಾಡಿದ ವಾಕ್ಯವಂ ಕೇಳಿ, ಅವಳು ಹೇಳಿದಂತೆ ನಾನು ಸಂತಾಪದಿಂದ ತ್ಯಂತಕೃಶನಾಗಿ ಇರುವೆನು. ಹೇಗೆಂದರೆ:--- ಎನ್ನ ಕರದಲ್ಲಿರುವ ರತ್ನ ಖಚಿತವಾದ ಸುವರ್ಣದ ಕಡಗವು-ಈ ಶಕುಂತಲೆಯ ವಿರಹದಿಂದುಂಟಾದ ಹೃದ ಯದಲ್ಲಿರುವ ಮನ್ಮಥನ ಸಂತಾಪದಿಂದಧಿಕಮಾಗಿ ಬಿಸಿಯಾಗಿ, ರಾತ್ರಿಯ ಕಾಲದಲ್ಲಿ ಮಲಗುವಾಗ ಕಡೆಗಣ್ಣುಗಳಿ೦ ಜಾರಿದ, ಕಣ್ಣೀರುಗಳc-ವರ್ಣಹೀನಂಗಳಾದ ರತ್ನ ಗಳುಳ್ಳದಾಗಿ, ಬಹಳವಾಗಿ ಧನುಸ್ಸಿನ ನಾರಿಯ ಘಾತಿಯಿಂ ಗುಹ ತುಳ್ಳುದಾದ