ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

--ಶಾಕುಂತಲನಾಟಕ ನವೀನಟೀಕೆ ೭೫ ಅಂತರ್ಧಾನನಾದನು” ಎಂದು ನುಡಿಯಲು, ಆ ಅನಸೂಯೆಯು-11 ಎಲೆ ಪ್ರಿಯಂವದೆಯೇ, ನೀನು ಹೇಳಿದಂತೆಯಾ ದರೆ ನಮ್ಮ ಶಕುಂತಲೆಯಂ ಸಂತೋಷಗೊಳಿಸಬಹುದು. ಹೇಗೆಂದರೆ- ರಾಯನು ತಾನು ಪೋಗುವಾಗ ತನ್ನ ನಾಮಧೇಯಾಂಕಿತವಾದ ಮುದ್ರೆಯುಂಗರವಂ ಎನ್ನ ಸ್ಮರಣೆಗೆ ಕಾರಣವಾಗಿರಲೆಂದು ಆ ಶಕುಂತಲೆಯ ಬೆರಳಲ್ಲಿಟ್ಟು ಪೋಗಿರುವು ದನ್ನಾ ಶಕುಂತಲೆಯು ನಮ್ಮ ವಶಕ್ಕೆ ಕೊಟ್ಟಿರುವಳಷ್ಟೆ. ಅದಕ್೦ ನಮ್ಮ ಶಕುಂತಲೆಯು ಸಾಧಿಸುವುದಕ್ಕೆ ಯೋಗ್ಯವಾದ ಉಪಾಯವುಳ್ಳವಳಾಗಿ ಜೀವಿ ಸುವಳು ” ಎಂದು ನುಡಿಯಲು; ಆ ಪ್ರಿಯಂವದೆಯು (ಎಲೆ ಅನಸೂಯೆ, ನಮ್ಮ ಶಕುಂತಲೆಗೆ ಸೌಭಾಗ್ಯ ಪ್ರದಳಾದ ಗೌರಿಯ ಪೂಜೆಯಂ ಚೆನ್ನಾಗಿ ಎರಚಿಸುವ, ನಡೆ ಎಂದು ಅವಳು ಕರೆದುಕೊಂಡು ಬರುತ, ತಿರುಗಿನೋಡಿ ಪರ್ಣಶಾಲೆಯಲ್ಲಿ ಕುಳಿತಿರುವ ಶಕುಂತ ಲೆಯಂ ಕಡು_II ಎಲೆ ಅನಸೂಯೆ ನಮ್ಮ ಪ್ರಿಯಸಖಿಯಾದ ಶಕುಂತಲೆಯಂ ನೋಡು, ಎಡಗೆಯ್ಯಲ್ಲಿರಿಸಿದ ವದನವುಳ್ಳವಳಾಗಿ, ಚಿತ್ರದಲ್ಲಿ ಬರೆದಿರುವಳಂತೆ ತನ್ನ ಪತಿಯಾದ ದುಷ್ಯಂತರಾಯನಂ ಪೊಂದಿದ ಚಿಂತೆಯಿಲ್ಲ, ತನ್ನ ಶರೀರದಲ್ಲಿ ಜ್ಞಾನವಿಲ್ಲದೆ ಇರುವಳು. ಹೀಗಿರುವಲ್ಲಿ ಅತಿಥಿಯಾಗಿ ಬಂದ ದುರಾಸಋಷಿಗೆ ಸತ್ಕಾರವಂ ಮಾಡದೆ ಪೋದಳೆಂಬುವುದು ಕೇಳತಕ್ಕುದೇನು? ” ಎಂದು ನುಡಿಯಲು; ಆ ಅನಸೂಯೆಯು ಎಲೆ ಪ್ರಿಯಂವದೆಯೇ, ದುರಾಸಋಷಿಯಿತ್ಯ ಶಾಪವೃತ್ತಾಂತವು ನಮ್ಮಿಬ್ಬರ ಮುಖದಲ್ಲಿರತಕ್ಕುದೇ ಹೊಯಿತು ಅನ್ಯರಿಗೆ ಪೇಳ ತಕ್ಕುದಲ್ಲಾ ನಮ್ಮಿಬ್ಬರಿಂ ಸಕಲ ಪ್ರಯತ್ನ ದಿಂದಲೂ ಸ್ವಭಾವವಾಗಿ ಮೃದುವಾದ ಶರೀರವುಳ್ಳ ಶಕುಂತಲೆಯು ಸಂರಕ್ಷಿತಳಾಗತಕ್ಕವಳು ” ಎಂದು ಹೇಳಲು; ಆ ಪ್ರಿಯಂವದೆಯುಎಲೆ ಸಖಿಯೇ, ಕೇಳು. ಈಗ ಬಿಸಿನೀರಿನಿಂದ ಇರುವಂತಿಗೆಬಳ್ಳಿಯಂ ನನೆಯಿಸುವಂತೆ ಈ ಕ್ರೂರಮಾದ ಶಾಪವೃತ್ತಾಂತವಂ ನುಡಿದು ಕೋಮಲಾಂಗಿಯಾದ ಶಕುಂತಲೆಯಂ ಬಳಲಿಸುವುದಕ್ಕೆ ಯಾರು ತಾನೇ ಇಚ್ಛಿಸುತ್ತಿರುವರು ? ” ಎಂದು ನುಡಿಯುತ್ತ, ಗೌರೀಪೂಜೆಯಂ ಗೆಯ್ಯುವುದಕೆ ಪೋಗಲು; ಅನಿತಳು ಸಾಯಂಕಾಲವಾಗಲು; ಇತ್ತಲು ಕಣ್ಯ ಋಷಿಯ ಶಿಷ್ಯನೋರೈನು ಮಲಿಗಿರ್ದು ಎದ್ದು, 11 ಮಣಿ ತೀರ್ಥದಿಂ ಹಿಂದುರುಗಿ ಬರುತ್ತಿರುವ ಗುರುವಾದ ಕಣ್ವ ಋಷಿಯಿಂದ ರಾತ್ರೆಯು