ವಿಷಯಕ್ಕೆ ಹೋಗು

ಪುಟ:ಶ್ರೀಮತೀ ಪರಿಣಯ ನಾಟಕಂ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಥಮಾಂಕ೦. ಕೂಡಲೆ ಊಟ ! ಇವೆರಡುಹೊರತು ಪ್ರಪಂಚಕ್ಕೆ ಬೇರೆ ಯಾ ವಕಾರವೂ ಅಷ್ಟು ಅವಶ್ಯವೆಂದು ನನಗೆ ತೋರಲಿಲ್ಲ ! ರಾತ್ರಿ. ಊಟಮಾಡಿ ಸುಖವಾಗಿ ಮಲಗಿದ್ದ ನನಗೆ, ಈಗ ಬೆಳಗ್ಗೆ ನಿನ್ನ ಕೂಗಾಟದಿಂದ ಸಿದ್ರಾಭಂಗವಾಗಿ, ಹಾಸಿಗೆಯಿಂದ ಹಾಗೆಯೇ ಎದ್ದು ಬಂದೆನು. ಈಗ ತಿರುಗಿ ಊಟಮಾಡಿ ಮಲಗ, ಬೇಕಾದುದೊಂದೇ ನನ್ನ ಮೇಲೆ ಬಿದ್ದ ದೊಡ್ಡ ಕಾರಭಾರವು. ಇದಕ್ಕಾಗಿ ನಾವುನಾವು ಆಲೋಚಿಸಬೇಕಾದುದೇನಿದೆ ? ಸೂತ್ರ-ಆಗ್ಯನೆ! ಹಾಗಲ್ಲ ! ಇದೋ ! ಜಗನ್ಮಂಗಳಕರವಾದ ಈಗಿನ ನವು ರಾತ್ರಿ ಮಹೋತ್ಸವವನ್ನು ಕೊಂಡಾಡುವುದಕ್ಕಾಗಿ, ಕಂ11 ಸರಸಕವಿತಾರಸಜ್ಜರ್‌ ಭರತಾಗಮನಿಪುಣರಖಿಲಶಾಸ್ತಾಭಿಜ್ಜರ್‌ | ನೆರೆದಿರ್ಷ್ಪರಿಲ್ಲಿ ನಿರ ತೃರಹೃದಯರ್‌ ಸದಯರೆಮ್ಮ ಪಣೋದಯದಿಂ || ಆದುದರಿಂದ ಈಗ ನಾವು ನಮ್ಮ ಗಾನನಾವ್ಯಗಳಿಂದ ಇವರ ಮನಸ್ಸನ್ನು ಸಂತೋಪಡಿಸಿ, ನಿಮ್ಮ ವಿದ್ಯೆಯನ್ನು ಸಫಲಗೊಳಿ ಸುವುದಕ್ಕೆ ತಕ್ಕ ಅವಕಾಶವು ದೊರೆತಿರುವುದು, ಶೃಂಗಾರ ವೀರ ರದಾದರಸಭರಿತವಾದ ನಟಕವನ್ನಾಡಿ, ಇವರ ಮನಸ್ಸನ್ನು ರಂಜಿಸುವವಿಷಯದಲ್ಲಿ, ನನಗೆ ನಿನ್ನ ಸಹಾಯವು ಅತ್ಯವಶ್ಯವಾ ಗಿರುವುದು. ವಿದೂ-ಭರತಾಚಾರಾ ! ಬಹಳ ಚೆನ್ನಾಗಿ ಹೇಳಿದೆ ! ಆ ಬಾಲ್ಯಬ್ರಹ್ಮ ಚಾರಿಯಸ ದ ನನಗೆ ಶೃಂಗಾರರಸದ ಗಂಧವೇ ತಿಳಿಯದು! ವೃದ್ಧ ಬ್ರಾಹ್ಮಣನಾದ ನಾನು, ವೀರರೌದ್ರರಸಗಳನ್ನ ಭಿನಯಿಸುವು ದಕ್ಕೆ ಹೋದರೆ, ಅದೂ ಕೇವಲರಸಾಭಾಸವಾಗುವುದಲ್ಲದೆ ಬೇರೆಯಲ್ಲ. ಆದುದರಿಂದ ನನ್ನಂತೆ ವೈದಿಕ ಬ್ರಾಹ್ಮಣರ ಚರಿ ತ್ರದಿಂದ ಮಿತ್ರಿತವಾಗಿ, ಹಾಸ್ಯರಸವನ್ನು ಹೆಚ್ಚಾಗಿ ತೋರಿಸ ತಕ್ಕ ನಾಟಕವೇನಾದರೂ ಇದ್ದರೆ,ಅದನ್ನು ಪ್ರದರ್ಶಿಸುವವಿಷ