ವಿಷಯಕ್ಕೆ ಹೋಗು

ಪುಟ:ಶ್ರೀಮತೀ ಪರಿಣಯ ನಾಟಕಂ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಂಕ೦. ೧೭ ಅನೇಕಭಾಗದಲ್ಲಿ ಮೇಲೆನಿಸಿರುವನು. ಹಾಗಿದ್ದರೂ ಅವನು ತನ್ನ ಪದವಿಗಾಗಿ ತಾನು ಗತ್ವ ಪಡದೆ, ನಿನ್ನಂತೆ ಉನ್ಮಾರ್ಗದಲ್ಲಿ ಪ್ರವರ್ತಿಸದೆ, ಎಲ್ಲರಲ್ಲಿಯೂ ವಿನೀತನಾಗಿ, ಭಗವದ್ಭಕ್ತಿಯೇ ತನ್ನ ಸರೈಶ್ವರವೆಂದು ತಿಳಿದಿರುವನು. ಅವನು ಸಾಕ್ಷಾದ್ವಿಷ್ಟು ಸಮಾನನಾದು, ರಿಂದ ಆಂತವನ ದರ್ಶನವೇ ನಮ್ಮ ತಪಸ್ಸಿಗೆ ಫಲರೂಪವಾಗಿರುವುದು, ದೇವೇಂದ್ರಾ: ಇನ್ನು ಮೇಲಾದರೂ ನೀನು ಆ ದಾರಿಯನ್ನ ನುಸರಿಸು ! ಇದರಮೇಲೆ ನಿನ್ನ ಇಷ್ಟದಂತೆ ನಡೆ ! (ಹೋಗುವನು.) ಇಂದ್ರಂ-ಚಿಂತಾಕುಲನಾಗಿ ಮನ್ಮಥನನ್ನು ನೋಡಿ) ಮಿತ್ರನೆ: ನಾವು ಸರಸವಾಗಿ ಆರಂಭಿಸಿದ ಉತ್ಸವವು ಹೇಗೆ ವಿರಸವಾಗಿ ಪರಿಣ ಮಿಸಿತು!ನೋಡಿದೆಯಾ ? ನಿಷ್ಕಾರಣವಾಗಿ ನಾವಿಬ್ಬರೂ ಆ ಮಹರ್ಷಿಯ ಕೋಪಕ್ಕೆ ಪಾತ್ರರಾದೆವು. ಮನ್ಮಥಂ-(ನಗುತ್ತ) ದೇವೇಂದ್ರಾ ! ನನಗೇನೂ ಇದರಲ್ಲಿ ಪ್ರಮಾದವು ತೋರಲಿಲ್ಲ.. ಯೋಗಿಗಳಿಗೂ,ನನಗೂ ಜನ್ಮ ದೈವವೆಂಬುದು ಸಹ ಜವಾಗಿಯೇ ಇರುವುದು, ಇದಕ್ಕಾಗಿ ಚಿಂತೆಯೇಕೆ ? ಇಂದ್ರಂ-ಮಿತ್ರನೆ! ಹಾಗಲ್ಲ ! ಇಂತಹ ಮಹಾತ್ಮರ ಕೋಪವು ಅನರಹೇ ತುವಾಗದಿರದು! ಆದುದರಿಂದ ಹೇಗಾದರೂ ಈಗ ಆ ನಾರದ ನನ್ನು ಪ್ರಸನ್ನನನ್ನಾಗಿ ಮಾಡಿದಹೊರತು, ನನ್ನ ಮನಸ್ಸಿಗೆ ಸಮಾಧಾನವಿಲ್ಲ. ಈ ಉತ್ಸವ ಸಂಭ್ರಮಗಳನ್ನು ಇಷ್ಟಕ್ಕೆ ನಿಲ್ಲಿಸುವೆವು. ಮನ್ಮಥಂ-ಹಾಗಿದ್ದರೆ ಪ್ರಭುವಿನ ಇಷ್ಟದಂತಾಗಲಿ ! (ತೆರೆಯು ಬೀಳುವುದು.) ಇದು ಪ್ರಥಮಾಂಕವು,