ವಿಷಯಕ್ಕೆ ಹೋಗು

ಪುಟ:ಶ್ರೀಮತೀ ಪರಿಣಯ ನಾಟಕಂ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

w ತೃ ತಿ ಯಾ೦ಕ ೦nww ಅಸ್ಥಾನ:-ಆರಮನೆಯ ಉದ್ಯಾನದ ಮುಂದಿನ ಬಯಲು. (ಮನ್ಮಥನು: ಕಬ್ಬಿನ ಬಿಲ್ಲನ್ನೂ, ಪುಷ್ಪಬಾಣಗಳನ್ನೂ ಹಿಡಿದು, ಆತುರದಿಂದ ಈ ಪ್ರವೇಶಿಸುವನು.) ಮನ್ಮಥಂ-ಆಹಾ! ಆ ನಾರದನ ಮನಸ್ಸನ್ನು ಕದಲಿಸಬೇಕೆಂದು ಬಹಳ ಹೊತ್ತಿನಿಂದ ನಿರೀಕ್ಷಿಸುತ್ತಿದ್ದ ನನಗೆ, ಈಗ ತಕ್ಕ ಅವಕಾಶವು ಸಿಕ್ಕಿರುವುದು!ಈಗ ನಾರದನು ಈ ಉದ್ಯಾನವನವನ್ನು ಪ್ರವೇಶಿ ಸುವನು.ಸಹಜವಾಗಿಯೇ ಇಲ್ಲಿನ ಸನ್ನಿವೇಶಗಳು ಎಂತಹ ಜಿತೇಂ ಬ್ರಿಯರಿಗಾದರೂ ಕಾಮೋದ್ದೀಪನವನ್ನುಂಟುಮಾಡುವಂತಿರು ವುವು.ಇದರಮೇಲೆ ನಾನು, ನನ್ನ ಪ್ರಿಯಮಿತ್ರನಾದ ವಸಂತ ನನ್ನು ಮುಂದಾಗಿಯೇ ಅಗ್ಲಿಗೆ ಕಳುಹಿಸಿ, ನಾರದನು ಅಲ್ಲಿಗೆ ಬರು ವಷ್ಟರಲ್ಲಿ,ಪುಷ್ಪ ಪ್ರವಾದಿಸಮೃದ್ಧಿಗಳಿಂದ ಅದಕ್ಕೆ ಮತ್ತಷ್ಟು ಕಳೆಯೇರಿಸುವಂತೆ ಮಾಡುವೆನು. ಆ ಸನ್ನಿ ವೇಶವನ್ನು ಕಣ್ಣಿಂದ ನೋಡುವಾಗಲೇ, ನಾರದನಿಗೆ ಸಂದ್ರಿಯಗಳೂ ಕದಲುವು ವು. ಆದೇಸಮಯದಲ್ಲಿ ನಾನೂ ಕಣ್ಮರೆಯಾಗಿದ್ದು, ಈ ನನ್ನ ಪುಷ್ಪಬಾಣಗಳನ್ನು ಪ್ರಯೋಗಿಸುವೆನು. ಅವನ ಮನಸ್ಸು ಹೇಗೆ ಮೊಹಾಕುಲವಾಗದಿರುವುದೂ ನೋಡುವೆನು! ವೃ|| ಲಲಿತೋದ್ಯಾನದ ಲಕ್ಷಿ ಯಿಂ ಶುಕ ಪಿಕಪ್ರಧ್ಯಾನದಿಂ ಶೀತಲಾ ನಿಲಸುಸ್ಪರ್ಶನದಿಂ ಪ್ರಕೃಷ್ಣಸುಮನಸೌಗಂಧ್ಯದಿಂ ಸತ್ಸಲಾ ! ವಳಿಯಿಂದಾಮುನಿಯಂ ಮರುಳೊಳಿಸತಂ ಪಂಚೇಂದ್ರಿಯಕ್ಷೆಭದಿಂ | ಸಲೆ ವೈರಾಗ್ಯದ ಬೀಡೆನಿಪ್ಪ ಮನದೋಳಿ ಸೀಮೋಹಮಂ ಬಿತ್ತುವೆಂ || ಆಹಾ ! ದೇವೇಂದ್ರನು ನನಗೆ ಮಾಡಿದ ಗೌರವವನ್ನು ಸಹಿಸ ಲಾರದೆ, ದೇವಸಭೆಯಲ್ಲಿ ನನ್ನನ್ನು ನಿಂದಿಸಿ ಅವಮಾನಪಡಿ