ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೦೮ ಶ್ರೀಮದ್ಭಾಗವತವು (ಅಧ್ಯಾ, ೬೪. ಣಸ್ವತ್ತನ್ನು ಅಜ್ಞಾನದಿಂದ ಭುಜಿಸಿದರೂ ಅದು ಕುಲವನ್ನು ಮೂರು ತಲೆಮರೆಗಳವರೆಗೆ ಕೆಡಿಸಿ ಬಿಡುವುದು ಬಲಾತ್ಕಾರದಿಂದ ಕಿತ್ತು ತಿಂದರೆ, ಹಿಂದಿನ ಹತ್ತು ತಲೆಮರೆಗಳನ್ನೂ, ಮುಂದಿನ ಹತ್ತು ತಲೆಮರೆಗಳನ್ನೂ ನಾಶಮಾಡಿಬಿಡುವುದು, ಯಾವರಾಜರು ತಮ್ಮ ರಾಜ್ಯಾಧಿಕಾರದ ಮದ ದಿಂದ ಕಣ್ಣು ಕಾಣದೆ, ಬ್ರಹ್ಮ ಸ್ವತ್ತಿಗೆ ದುರಾಶೆಪಡುವರೋ, ಅವರು ಮುಂದೆ ತಾವು ಹೊಂದತಕ್ಕ ನರಕವನ್ನೂ, ತಮಗಾಗುವ ಆತ್ಮನಾಶವ ಮ್ಯ ತಿಳಿಯಲಾರದ ಮೂಢರೇಹೊರತು ಬೇರೆಯಲ್ಲ. ರಾಜರಾಗಲಿ, ರಾ ಜನ ಕಡೆಯವರಾಗಲಿ, ಕುಟುಂಬಿಗಳಾದ ಬ್ರಾಹ್ಮಣರ ಸ್ವತ್ತನ್ನ ಪಹರಿಸಿ, ಅವರನ್ನು ಗೋಳಾಡಿಸಿದ ಪಕ್ಷದಲ್ಲಿ, ಆ ಬ್ರಾಹ್ಮಣರ ಕಣ್ಣಿನಿಂದ ಬಿಳುವ ಬಾಷ್ಪಬಿಂದುಗಳಿಂದ ನೆಲದ ಮೇಲಿರುವ ಎಷ್ಟು ರೇಣುಗಳು ನೆನೆಯುವು ವೋ,ಅಷ್ಟು ಸಂವತ್ಸರಗಳವರೆಗೆ ಅವರುಕುಂಭೀಪಾಕವೆಂಬ ನರಕದಲ್ಲಿ ಬಿದ್ದು ಬೇಯುವರು. ತಾನಾಗಿ ಕೊಟ್ಟುದಾಗಲಿ, ಮತ್ತೊಬ್ಬರು ಕೊಟ್ಟು ಬಾಗಲಿ ಬ್ರಾಹ್ಮಣಸಿಗೆ ಸೇರಿದ ಸ್ವತನ್ನ ಪಹರಿಸಿದವನು, ಅರುವತ್ತು ಸಾವಿರವರ್ಷಗಳ ವರೆಗೆ ಅಮೇಧ್ಯದಲ್ಲಿ ಕ್ರಿಮಿಯಾಗಿ ಹುಟ್ಟಿ ನರಳುವನು. ಆದುದರಿಂದ ಓ ಮಿತ್ರರೆ! ಆ ಬ್ರಾಹ್ಮಣಸ್ವತ್ತು ಮಾತ್ರ ನನಗೆ ಎಂದಿಗೂ ಬೇಡ ! ಅದನ್ನ ನುಭವಿಸಿದ ರಾಜರನೇಕರು, ಅಲ್ಪಾಯುಸ್ಸುಳ್ಳವರಾಗಿಯೂ, ಪರಾಜಿತರಾ ಗಿಯೂ,ರಾಜ್ಯಭಷ್ಯರಾಗಿಯೂ ಕೆಟ್ಟುಹೋಗಿರುವರು. ಅದರಿಂದ ಬ್ರಹ್ಮ ಸ್ವವೆಂದರೆ ನನ್ನ ಎದೆಯು ನಡುಗುವುದು. ನೀವೂ ಹೀಗೆಯೇ ಭಾವಿಸಬೇಕು! ನಿಮ್ಮಲ್ಲಿ ಅಪರಾಧಿಯಾದ ಬ್ರಾಹ್ಮಣನಿಗೂ ನೀವು ದ್ರೋಹವನ್ನೆಣಿಸಬಾದ ದು! ಬ್ರಾಹ್ಮಣನೊಬ್ಬನು ಅಜ್ಞತೆಯಿಂದ ನಿಮ್ಮನ್ನು ಹೊಡೆದರೂ, ಬೈದ ರೂ, ನೀವು ಅವನನ್ನು ನಮಸ್ಕರಿಸಬೇಕು, ನಾನು ಬ್ರಾಹ್ಮಣರನ್ನು ಎಷ್ಟು ಮಟ್ಟಿಗೆ ಗೌರವಿಸಿ ನಮಸ್ಕರಿಸುವೆನೋ, ಹಾಗೆಯೇ ನೀವೂ ನಮಸ್ಕರಿಸು ತಿರಬೇಕು, ಇದಕ್ಕೆ ವಿಪರೀತವಾಗಿ ನಡೆದವರು, ನನ್ನ ನಿಗ್ರಹಕ್ಕೆ ಪಾತ್ರ ರಾಗುವರು. ಬ್ರಹ್ಮಸ್ವವೆಂಬುದು, ತಿಂದವರನ್ನು ಮಹಾಭ ಯಂಕರವಾದ ನರಕದಲ್ಲಿ ತಳ್ಳಿಬಿಡುವುದು, ನೃಗಚಕ್ರವರ್ತಿಯು ಈ ವಿಷಯದಲ್ಲಿ ಅಜ್ಞಾನ ಹಿಂದ ಮಾಡಿದ ಕಾಠ್ಯಕ್ಕೂ ಎಂತಹ ಫಲವನ್ನು ಅನುಭವಿಸಬೇಕಾಯಿತು