ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೬೧ ಅಧ್ಯಾ, ೭೩.] ದಶಮಸ್ಕಂಧವು. wvಬಂಧವಿಮುಕ್ತರಾದ ರಾಜರು ಕೃಷ್ಣನನ್ನು ಸ್ತುತಿಸಿದುದು+w ಓ ಪರೀಕ್ಷಿದ್ರಾಜಾ ! ಜರಾಸಂಧನಿಂದ ಯುದ್ಧದಲ್ಲಿ ಪರಾಜಿತರಾಗಿ, ಸೆರೆಸಿಕ್ಕಿದ ರಾಜರ ಸಂಖ್ಯೆಯು ಇಪ್ಪತ್ತು ಸಾವಿರದ ಎಂಟುನೂರರವರೆ ಗಿದ್ದಿತು. ಅವರೆಲ್ಲರನ್ನೂ ಜರಾಸಂಧನು ಒಂದಾನೊಂದುಪಕ್ವತದ ತಪ್ಪ ಲಲ್ಲಿ ನಿರ್ಬಂಧಿಸಿಟ್ಟಿದ್ದನು. ಈಗ ಕೃಷ್ಣಾನುಗ್ರಹದಿಂದ ಅವರೆಲ್ಲರೂ ಬಂಧ ವಿಮುಕ್ತರಾಗಿ, ಕೃಷ್ಣನನ್ನು ನೋಡುವುದಕ್ಕಾಗಿ ಬಂದರು. ಅವರ ದುಸ್ಥಿತಿ ಯನ್ನು ಕೇಳಬೇಕೆ? ಬಹುಕಾಲದಿಂದ ಸ್ನಾನವಿಲ್ಲದೆ ಕೊಳೆಯೇರಿದ ಮೈ ! ಮಾಸಿದ ವಸ್ತಗಳು!ತಕ್ಕ ಆಹಾರವಿಲ್ಲದೆ ಬಹುಕಾಲದ ಕಾರಾಗೃಹನಿರ್ಬಂಧ ದಿಂದ ಕೃಶವಾದ ಅವಯವಗಳು! ಬಾಡಿದ ಮುಖಕಾಂತಿ ! ಇಂತಹಸ್ಥಿತಿ ಯಲ್ಲಿ ಅವರೆಲ್ಲರೂ ಬಂದು, ನೀಲಮೇಘಶ್ಯಾಮನಾಗಿ, ಪೀತಾಂಬರದಿಂ ದಲೂ, ಶ್ರೀವತ್ಸಚಿಹ್ನದಿಂದಲೂ, ಕಮಲದಳದಂತಿರುವ ಕಣ್ಣುಗಳಿಂ ದಲೂ, ಪ್ರಸನ್ನ ಮುಖದಿಂದಲೂ, ಶಂಖಚಕ್ರಗದಾಪದ್ಮಗಳೊಡಗೂಡಿದ ಚತುರ್ಭುಜಗಳಿಂದಲೂ, ಕಿರೀಟಕುಂಡಲ, ಹಾರ, ಕಟಕ,ಕಟಿಸೂತ್ರಾಂಗದ ಕೌಸ್ತುಭ, ವನಮಾಲಾದ್ಯಲಂಕಾರಗಳಿಂದಲೂ ಶೋಭಿತನಾಗಿ, ಲೋಕ ಮೋಹನಾಕಾರವುಳ್ಳ ಶ್ರೀಕೃಷ್ಣನನ್ನು ಕಂಡರು. ಅವರೆಲ್ಲರೂ ಆ ಕೃಷ್ಣ ನ ದಿವ್ಯಸೌಂದಠ್ಯವನ್ನು ಕಣ್ಣುಗಳಿಂದ ಕುಡಿಯುವಂತೆಯೂ, ನಾಲಗೆ ಯಿಂದ ನಕ್ಕುವಂತೆಯೂ, ಮೂಗಿನಿಂದ ಆಘಾಣಿಸುವಂತೆಯೂ, ತೋಳು ಗಳಿಂದ ಆಲಿಂಗಿಸುವಂತೆಯೂ, ತೃಪ್ತಿಯಿಲ್ಲದೆ ನೋಡುತಿದ್ದು, ಎಲ್ಲರೂ ಆ ಕೃಷ್ಣನ ಪಾದಗಳನ್ನು ಹಿಡಿದು ತಲೆಬಗ್ಗಿ ನಮಸ್ಕರಿಸಿದರು, ಆಗ ಅವರಿಗೆ - ಆಕೃಷ್ಣದರ್ಶನದಿಂದುಂಟಾದ ಮಹಾನಂದವು, ಹಿಂದೆ ಅವರು ಬಹುಕಾಲ ದಿಂದ ಅನುಭವಿಸುತಿದ್ದ ಕಾರಾಗೃಹದ ಕಷ್ಟಗಳೆಲ್ಲವನ್ನೂ ಕ್ಷಣಮಾತ್ರ ದಲ್ಲಿ ಮರೆಯುವಂತೆ ಮಾಡಿತು.ಎಲ್ಲರೂ ಬದ್ಧಾಂಜಲಿಗಳಾಗಿ ನಿಂತು ಹೀಗೆಂ ದು ಸ್ತುತಿಸುವರು. « ದೇವದೇವೇಶಾ ! ಆಶ್ರಿತದುಃಖನಿವಾರಕಾ ! ಅವ್ಯ ಯಾ ! ಕೃಷ್ಣಾ! ನಿನಗೆ ನಮಸ್ಕಾರವು! ಶರಣಾಗತರಾದ ನಮ್ಮನ್ನು ದ್ಧರಿಸು! ಈಗ ನೀನು ನಮ್ಮನ್ನು ಜರಾಸಂಧನ ಬಂಧದಿಂದ ಬಿಡಿಸಿದರೂ, ಅದಕ್ಕಿಂ ತಲೂ ಭಯಂಕರವಾದ ಸಂಸಾರಬಂಧದಿಂದ ನಮ್ಮನ್ನು ಬಿಡಿಸತಕ್ಕ ಭಾರ