ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೩೫ ಅಧ್ಯಾ, ೭೪.) ದಶಮಸ್ಕಂಧವು. ರ್ಜುನರೊಡನೆ ಬಂದು, ಧರ್ಮರಾಜನಿಗೆ ನಮಸ್ಕರಿಸಿ,ತಾನು ನಡೆಸಿ ಬಂದ ಕಾ ಲ್ಯಗಳೆಲ್ಲವನ್ನೂ ಅವನಿಗೆ ತಿಳಿಸಿದನು. ಆ ವೃತ್ತಾಂತಗಳನ್ನು ಕೇಳಿ ಧರ್ಮ ರಾಜನು, ಕಣ್ಣುಗಳಲ್ಲಿ ಆನಂದಬಾಷ್ಪವನ್ನು ತುಳುಕಿಸುತ್ತ, ಸಂತೋಷಪರ ವಶನಾಗಿ ಮಾತಾಡಲಾರದೆ ಸುಮ್ಮನಿದ್ದನು. ಇದು ಎಪ್ಪತ್ತು ಮೂರನೆಯ ಅಧ್ಯಾಯವು. w+ ಧರ್ಮರಾಜನ ರಾಜಸೂಯಯಾಗವು rw ಓ! ಪರೀಕ್ಷಿದ್ರಾಜಾ! ಧರ್ಮರಾಜನು ಜರಾಸಂಧನ ವಧವನ್ನೂ,ಶ್ರೀ ಕೃಷ್ಣನ ಪ್ರಭಾವವನ್ನೂ ಕೇಳಿ ಪರಮಾನಂದಭರಿತನಾಗಿ, ಅವನೊಡನೆ « ಕೃಷ್ಣಾ ! ಮೂರುಲೋಕಕ್ಕೂ ಪೂಜ್ಯರಾದ ಸನಕಾದಿಗಳೂ, ಇತರ ಸಮಸ್ತಜನವೂ, ಲೋಕಪಾಲಕರೂ, ನಿನ್ನ ಆಜ್ಞೆಯೇ ತಮಗೆ ಪರಮ ಭಾಗ್ಯವೆಂದು ತಿಳಿದು, ಅದನ್ನು ಎಷ್ಟೋ ಭಕ್ತಿಯಿಂದ ತಿರಸಾಧಾರಣಮಾ ಡುತ್ತಿರುವರು. ಅಂತಹ ಸೀನು, ಲೋಕದಲ್ಲಿ ತಾವೇ ಪ್ರಭುಗಳೆಂಬ ಅಹಂಕಾ ರದಿಂದ ಬೀಗಿದ ನಮ್ಮಂತಹ ಅಲ್ಪರಾಜರ ಮಾತನ್ನು ಎಷ್ಟೋ ಗೌರವ ದಿಂದ ತಲೆಯಲ್ಲಿ ಧರಿಸಿ ನಡೆಸುತ್ತಿರುವೆಯಲ್ಲವೆ ? ಇದು ನಿನ್ನ ಮಾಯಾನಟ ನವಲ್ಲದೆ ಮತ್ತೇನು? ಈ ಕಾಠ್ಯಗಳಿಂದ ನೀನು ಲೋಕದಲ್ಲಿ ಕೀರ್ತಿಯನ್ನು ಸಂಪಾದಿಸಬೇಕಾದುದೂ ಇಲ್ಲ: ಏಕೆಂದರೆ, ಈ ಸಮಸ್ತ ಜಗತ್ತಿಗೂ ನೀನೇ ಉಪಾದಾನಕಾರಣನು ಈ ಜಗತ್ತೆಲ್ಲವೂ ನಿನ್ನ ಸ್ವರೂಪವಾಗಿಯೇ ಇರುವುದು, ಇದಕ್ಕೆ ನಿಮಿತ್ತ ಕಾರಣನೂ ನೀನೇ ! ಸಾಂತಶ್ಯಾಮಿಯಾದ ಪರಬ್ರಹ್ಮವೂ ನೀನೇ : ಸೂರನ ಉದಯಾಸ್ತಮಯಗಳಿಂದ ಅವನ ತೇಜ ಸ್ಸಿಗೆ ವೃದ್ಧಿಯನ್ನಾಗಲಿ, ಹಾನಿಯನ್ನಾಗಲಿ ಹೇಗೆ ಆರೋಪಿಸುವುದಕ್ಕಿಲ್ಲ ವೋ, ಹಾಗೆಯೇ ಈ ನಿನ್ನ ಕಾಠ್ಯಗಳಿಂದ ನಿನ್ನ ತೇಜಃಪ್ರಭಾವವು ಹೆಚ್ಚು ಕಡಿ ಮೆಯಾಗುವ ಹಾಗಿಲ್ಲ! ಅಥವಾ ನಿನ್ನ ವಿಷಯವು ಹಾಗಿರಲಿ! ನಿನ್ನನ್ನು ನಂಬಿದ ಭಕ್ತರೂಕೂಡ, ದೇಹಾಭಿಮಾನವುಳ್ಳ ಪಶುಪ್ರಾಯರಾದ ಮೂಢಜನರಂತೆ ತಾನೆಂದೂ, ತನ್ನ ದೆಂದೂ, ನೀನೆಂದೂ, ನಿನ್ನ ದೆಂದೂ, ಭೇದಬುದ್ಧಿಯನ್ನಿಡ ಲಾರರು. ಹೀಗಿರುವಾಗ ಆ ಆತ್ಮಾಭಿಮಾನದಿಂದಲೇ ಉಂಟಾಗತಕ್ಕ ಹಾನಿ