ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೯೦ ಅಧ್ಯಾ೭೮. ಶ್ರೀಮದ್ಭಾಗವತವು | -w+ದಂತವಕ್ಕೆ ಎಡೂರಥಸಂಹಾರವು++ ಓ! ಪರೀಕ್ಷಿದ್ರಾಜಾ ! ಶಿಶುಪಾಲ, ಸಾಲ್ಪ, ಪೌಂಡ್ರಕನೇ ಮೊದ ಲಾದ ತನ್ನ ಇಷ್ಟಮಿತ್ರರೆಲ್ಲರೂ,ಕೃಷ್ಣನಿಂದ ಸಂಸ್ಕೃತರಾದುದನ್ನು ನೋ ಡಿ ದಂತವಕ್ಕನು, ಅವರಿಗೆ ಪರೋಕ್ಷದಲ್ಲಿಯಾದರೂ ತನ್ನಿಂದಾದ ಸಹಾ ಯವನ್ನು ಮಾಡಬೇಕೆಂದು ನಿಶ್ಚಯಿಸಿ, ತಾನೊಬ್ಬನೇ ಗದೆಯನ್ನು ಹಿಡಿದು, ಕಾಲುನಡೆಯಿಂದ ಹೊರಟು, ಭೂಮಿಯನ್ನು ನಡುಗಿಸುವಂತೆ ವೇಗದಿಂದ ಹೆಜ್ಜೆಯನ್ನಿಡುತ್ತ, ಕೃಷ್ಣನನ್ನಿ ದಿರಿಸಿ ಬಂದನು. ದಂತವಕ್ರನು ಹೀಗೆ ತನ್ನ ಮೇಲೆ ಬಿಳುವುದಕ್ಕಾಗಿ ಅತ್ಯಾತುರದಿಂದ ಬರುವುದನ್ನು ನೋಡಿ ಕೃಷ್ಣನು, ಗದೆಯನ್ನು ಕೈಗೆತ್ತಿಕೊಂಡು, ಥಟ್ಟನೆ ರಥದಿಂದ ಕೆಳಗಿಳಿದು, ಸಮುದ್ರ ಪ್ರವಾಹವನ್ನು ಅದರ ದಡವು ಹೇಗೋ ಹಾಗೆ, ಆತನನ್ನು ಅಲ್ಲಿಯೇ ತಡೆದುನಿಲ್ಲಿಸಿದನು. ಆಗ ದಂತವಕ್ಕನು, ತನ್ನ ಕೈಯಲ್ಲಿದ್ದ ಗದೆಯ ನ್ನು ಮೇಲಕ್ಕೆತ್ತಿ ಹಿಡಿದು, ಕೃಷ್ಣನನ್ನು ಕುರಿತು ಹೆಮ್ಮೆಯಿಂದ ( ಎಲಾ ! ಕೃಷ್ಣಾ! ದೈವಾಧೀನದಿಂದ ಈಗ ನೀನು ನನ್ನ ಕಣ್ಣಿಗೆ ಸಿಕ್ಕಿಬಿದ್ದಿರುವೆ! ನೀನು ನನ್ನ ಮಾವನ ಮಗನಾಗಿದ್ದರೂ, ನನ್ನ ಮಿತ್ರರೆಲ್ಲರಿಗೂ ದೋಹಮಾ ಡಿ, ನನ್ನನ್ನೂ ಕೊಲ್ಲುವುದಕ್ಕಾಗಿ ಯತ್ನಿ ಸುತ್ತಿರುವೆಯಲ್ಲವೆ ? ಎ: ಮೂ ಢಾ ! ಇದೋ! ಈಗಲೇ ನಾನು ವಜ್ರಾಯುಧಕ್ಕೆ ಸಮಾನವಾದ ಈಗದೆ ಯಿಂದ ನಿನ್ನನ್ನು ಕೊಂದು, ನನ್ನ ಮಿತ್ರರ ಸಾಲವನ್ನು ತೀರಿಸಿಕೊಳ್ಳುವೆನು. ದೇಹದಲ್ಲಿ ಹುಟ್ಟಿದ ವ್ಯಾಧಿಯು ಹೇಗೋಹಾಗೆ, ನೀನು ನನಗೆ ಬಂಧು ರೂಪದಿಂದ ಹುಟ್ಟಿದ ಶತ್ರವೇಹೊರತು ಬೇರೆಯಲ್ಲ. ವ್ಯಾಧಿಯನ್ನು ನೀಗಿಸುವಂತೆ ನಿನ್ನನ್ನು ಕೊಲ್ಲದೆ ಬಿಡಲಾರೆನು. ” ಎಂದು ಕೊರ ವಾಕ್ಯಗಳಿ೦ದ ಧಿಕ್ಕರಿಸಿ, ಆನೆಯನ್ನು ಅಂಕುಶದಿಂದ ತಿವಿಯುವಂತೆ, ತನ್ನ ಗದೆ ಯಿಂದ ಕೃಷ್ಣನತಲೆಯಮೇಲೆ ಪ್ರಹರಿಸಿ,ಸಿಂಹನಾದಮಾಡಿದನು.ಆ ಗದಾ ಪ್ರಹಾರದಿಂದ ಕೃಷ್ಣನು ಸ್ವಲ್ಪ ಮಾತ್ರವೂ ಚಲಿಸದೆ, ಕೌಮೋದಕಿ ಯೆಂಬ ತನ್ನ ಮಹಾಗದೆಯಿಂದ ಆ ದಂತವಕ್ತನ ಎದೆಯಮೇಲೆ ಪ್ರಹರಿಸಿ ದನು. ಈ ಒಂದೇಪ್ರಹಾರಕ್ಕೆ ಆ ದಂತವಕ್ಕನ ಎದೆಯು ಭೇದಿಸಿತು. ಆವ