ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೯೧ ಅಧ್ಯಾ, ೭೮.] ದಶಮಸ್ಕಂಧವು. ನು, ಬಾಯಿಂದ ರಕ್ತವನ್ನು ಕಕ್ಕುತ್ಯ, ಕೆದರಿದ ತಲೆಯೊಡನೆ ಕೆಳಗೆ ಬಿದ್ದು, ಕೈ ಕಾಲುಗಳನ್ನು ಚಾಚಿ ಪ್ರಾಣವನ್ನು ಬಿಟ್ಟನು. ಹಿಂದೆ ತಿಶುಪಾಲವಧ ಕಾಲ ದಲ್ಲಿ ಹೇಗೋಹಾಗೆ, ಆ ದಂತವಕ್ಕನ ಶರೀರದಿಂದ ಒಂದಾನೊಂದು ದಿವ್ಯ ತೇಜಸ್ಸು ಹೊರಟು, ಅಲ್ಲಿದ್ದವರೆಲ್ಲರೂ ನೋಡುತ್ತಿದ್ದ ಹಾಗೆಯೇ ಕೃಷ್ಣನ ದೇಹದಲ್ಲಿ ಐಕ್ಯ ಕೊಂದಿತು. ಇಷ್ಟರಲ್ಲಿ ಆ ದಂತವಕ್ಯನ ತಮ್ಮ ನಾದ ವಿಡೂರವನೆಂಬವನು, ತನ್ನಣ್ಣನ ಮರಣವನ್ನು ನೋಡಿ ದುಃಖಿತನಾಗಿ,ಕೋ ಪುಂದ ಬುಸುಗುಟ್ಟುತಕೃಷ್ಣನನ್ನು ತೀರಿಸಿಬಿಡಬೇಕೆಂದು ಕೈಯಲ್ಲಿ ಕತ್ತಿ ಗುರಾಣಿಗಳನ್ನು ಹಿಡಿದು ಮುಂದೆ ಬಂದನು. ಅವನು ಬರುತ್ತಿರುವಾಗಲೇ ಕೃಷ್ಣನು ತೀಕ್ಷಧಾರೆಯುಳ್ಳತನ್ನ ಚಕ್ರಾಧದಿಂದ, ಕಿರೀಟಕುಂಡಲವಿಶಿಷ್ಟ ವಾದ ಅವನ ತಲೆಯನ್ನು ಕತ್ತರಿಸಿಕೆಡಹಿದನು. ಓ! ಪರಿ ಕ್ಲಿದ್ರಾಜಾ! ಹಿಂದೆ ಕೃಷ್ಣನು ಸಾಲ್ವನನ್ನೂ, ಸೌಭವಿಮಾನವನ್ನೂ, ದಂತವಕ್ಕವಿಡೂರ ಥರ ನ್ಯೂ , ಅವರಕಡೆಯ ಅನೇಕಪರಿವಾರಗಳನ್ನೂ ತೀರಿಸಿಬಿಟ್ಟಮೇಲೆ, ದೇವತೆ ಗಳೂ, ಮನುಷ್ಯರೂ, ಮಹರ್ಷಿಗಳೂ, ಸಿದ್ಧಗಂಧಶ್ವವಿದ್ಯಾಧರೂ, ಪನ್ನ ಗರೂ, ಅಪ್ಪರಸ್ಸುಗಳೂ, ಪಿತೃಗಣಗಳೂ, ಯಕ್ಷ, ಕಿನ್ನರ, ಚಾರಣರೂ, ಕೃಷ್ಣಮೇಲೆ ಪುಷ್ಪವರ್ಷವನ್ನು ಕರೆದು, ಜಯಘೋಷಗಳನ್ನು ಮಾಡು ತಿದ್ದು, ಹೀಗೆ ಸಮಸ್ತಭೂತಗಳಿಂದ ಸ್ತುತಿಸಲ್ಪಡುತ್ಯ, ಕೃಷ್ಣನು ಯಾ ದವರೊಡನೆ ರಣರಂಗದಿಂದ ಹಿಂತಿರುಗಿ ದ್ವಾರಕಾನಗರವನ್ನು ಪ್ರವೇಶಿಸಿ ದನು. ಓ : ಪರೀಕ್ಷೆ ದ್ರಾಜಾ ! ಯೋಗೇಶ್ವರನಾಗಿಯೂ, ಸತ್ವಜ್ಞತ್ವ, ಸರ ಶಕ್ತಿತ್ವ ಮೊದಲಾದ ಷಡ್ಗುಣಗಳಿಂದ ಪರಿಪೂರ್ಣನಾಗಿಯೂ, ಸಕಲಲೋ ಕನಿಯಾಮಕನಾಗಿಯೂ ಇರುವ ಆ ಶ್ರೀಕೃಷ್ಣನು, ಹೀಗೆ ಜರಾಸಂಥಾದಿ ಗಳೊಡನೆ ಯುದ್ಧ ಮಾಡುವಾಗ, ಒಮ್ಮೆ ತಾನು ಪರಾಜಿತನಾಗಿ ಓಡಿಹೋ ದಂತೆಯೂ, ಮತ್ತೊಮ್ಮೆ ಅವರನ್ನು ತಾನು ಜಯಿಸಿದಂತೆಯೂ ನಟಿಸಿದು ದೆಲ್ಲವೂ, ಪಶುಗಳಂತೆ ಮೂಢರಾದ ಜನರನ್ನು ಮರುಳುಗೊಳಿಸುವುದಕ್ಕಾ ಗಿಯೇಹೊರತು ಅದು ವಾಸ್ತವವಲ್ಲ! ಹೆಸರಿನಿಂದಲೇ, ಅಜಿತನೆನಿಸಿಕೊಂಡ ಆ ಕೃಷ್ಣನಲ್ಲಿ ಪರಾಜಯವೆಂಬ ಮಾತೆಲ್ಲಿಯದು ?